• Slide
    Slide
    Slide
    previous arrow
    next arrow
  • ಶಿರಸಿ ತಾಲೂಕಿನಲ್ಲಿ ಹಲವೆಡೆ ಅಪರಿಚಿತರ ಓಡಾಟ: ಕ್ರಮ ಕೈಗೊಳ್ಳಲು ಸಾರ್ವಜನಿಕರ ಆಗ್ರಹ

    300x250 AD

    ಶಿರಸಿ: ತಾಲೂಕಿನ ಕುಳವೆ ಗ್ರಾಮ ಪಂಚಾಯಿತಿ ಹಾಗೂ ಮೆಣಸಿಕೇರಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಉತ್ತರಪ್ರದೇಶದವರೆಂದು ಹೇಳಿಕೊಂಡವರು ಓಡಾಡುತ್ತಿದ್ದು, ಸ್ಥಳೀಯರಿಗೆ ಆತಂಕ ಮೂಡಿಸಿದೆ.
    ಬೈಕ್ ಮೂಲಕ ಆಗಮಿಸುವ ಇವರು ದೊಡ್ಡ ಬ್ಯಾಗ್ ಸಮೇತ ಬರುತ್ತಿದ್ದಾರೆ. ಕೆಲವರು ಇಲೆಕ್ಟ್ರಾನಿಕ್ ಉಪಕರಣ, ಇನ್ನು ಕೆಲವರು ಬಟ್ಟೆ ವ್ಯಾಪಾರ ಮಾಡುತ್ತೇವೆ ಎಂದು ಕಾರಣ ನೀಡುತ್ತಿದ್ದು, ಇನ್ನು ಕೆಲವರ ನಡೆ ಸಂಶಯ ಮೂಡಿಸುವಂತಿದೆ ಎಂದು ಮೆಣಸಿಕೇರಿ ಗ್ರಾಮದ ಜೀತೇಂದ್ರ ಭಟ್‌ ಹೇಳಿದ್ದಾರೆ.
    ಸ್ಥಳೀಯ ಗ್ರಾಮ ಪಂಚಾಯಿತಿ ಅಥವಾ ಪೊಲೀಸ್ ಠಾಣೆಯ ಅನುಮತಿ ಪಡೆಯದೇ ಹಳ್ಳಿಗಳಲ್ಲಿ ಈ ರೀತಿ ಸಂಚರಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಮನೆಯ ಹೊರಗೆ ಅಡಕೆ ಒಣಹಾಕಿರುವ ಈ ದಿನಗಳಲ್ಲಿ ಈ ರೀತಿ ಅಪರಿಚಿತರು ಸಂಚರಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಈ ಭಾಗದ ಸಾರ್ವಜನಿಕರು ಆಗ್ರಹಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top