ಯಲ್ಲಾಪುರ: ರಾಜ್ಯದಲ್ಲಿಯೇ ಏಕೈಕ ಸಂಜೀವಿನಿಯ ಮಹಿಳಾ ಒಕ್ಕೂಟದಿಂದ ನಿರ್ವಹಿಸುತ್ತಿರುವ ಸಮುದಾಯ ನಿರ್ವಹಣಾ ತರಬೇತಿ ಕೇಂದ್ರವಾದ ನವಚೇತನ ಸಂಜೀವಿನಿ ಸಮುದಾಯ ನಿರ್ವಹಣಾ ತರಬೇತಿ ಕೇಂದ್ರ ಗ್ರಾಮ ಪಂಚಾಯತ್ ಒಕ್ಕೂಟ ಚಂದಗುಳಿ ಯಲ್ಲಾಪುರ ಇವರು ಬೆಳಗಾವಿ, ಧಾರವಾಡ, ಗದಗ, ಉತ್ತರ ಕನ್ನಡ ಜಿಲ್ಲೆಯ ಸಂಜೀವಿನಿ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರುಗಳಿಗೆ ಸಾಮಾನ್ಯ ದೃಷ್ಟಿಕೋನದ ಕುರಿತು,ಸ್ವ-ಸಹಾಯ ಸಂಘಗಳ ಜೀವನೋಪಾಯ ಉಪಸಮಿತಿ ಸಾಮರ್ಥ್ಯ, ಬಲವರ್ಧನೆಯ ಬಗೆಗೆ ಫೆಬ್ರವರಿ 13 ಹಾಗೂ ಫೆಬ್ರವರಿ 14ರಂದು ಎರಡು ದಿನಗಳ ವಸತಿ ಸಹಿತ ತರಬೇತಿಯನ್ನು ತಾಲೂಕಿನ ಚಂದಗುಳಿ ಬಳಿಯ ಯುಕೆ ನೇಚರ್ಸ್ ಡೇ ನಲ್ಲಿ ಆಯೋಜಿಸಿದ್ದರು.
ಕಾರ್ಯಕ್ರಮಕ್ಕೆ ಯಲ್ಲಾಪುರ ಕಾರ್ಯನಿರ್ವಹಣಾಧಿಕಾರಿ ಜಗದೀಶ್ ಎಸ್. ಕಮ್ಮಾರ್ ದೀಪ ಬೆಳಗಿಸುವುದರ ಮುಖಾಂತರ ಚಾಲನೆ ನೀಡಿದರು. ರಾಜ್ಯ ಸಂಪನ್ಮೂಲ ವ್ಯಕ್ತಿ ಸಂಜೀವಿನಿ KSRLPS ಎಸ್. ಗಿರೀಶ್ ಕುಮಾರ್ ಹಾಗೂ ಯುವ ವೃತ್ತಿಪರರು KSRLPS ಕು.ದಿವ್ಯ ತರಬೇತಿ ಕಾರ್ಯಕ್ರಮವನ್ನು ನಿರ್ವಹಿಸಿದರು ಈ ಸಂದರ್ಭದಲ್ಲಿ ಜಿಲ್ಲಾ ವ್ಯವಸ್ಥಾಪಕ ಪುಂಡಲಿಕ ಶಿರ್ಶಿಕರ್, ಪಿಡಿಓ ರಾಜಾಶೇಟ್,TMP ಯಲ್ಲಾಪುರ ಮಂಜಣ್ಣ ಬಿ ಹಾಗೂ ನವಚೇತನ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟದವರು ಹಾಜರಿದ್ದರು.