Slide
Slide
Slide
previous arrow
next arrow

ವಿಧಾನಸಭಾ ಚುನಾವಣೆ: ಪ್ರವೀಣ್ ನೆಟ್ಟಾರು ಹತ್ಯೆ‌ ಪ್ರಕರಣದ ಆರೋಪಿ SDPI ಅಭ್ಯರ್ಥಿ

300x250 AD

ಮಂಗಳೂರು: ಮುಂಬರುವ ಕರ್ನಾಟಕದ ವಿಧಾನಸಭೆ ಚುನಾವಣೆಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ತನ್ನ ಅಭ್ಯರ್ಥಿಗಳ ಪಟ್ಟಿಯಲ್ಲಿ ಪುತ್ತೂರಿನ ಅಭ್ಯರ್ಥಿಯಾಗಿ ಪ್ರವೀಣ್ ನೆಟ್ಟಾರು ಹತ್ಯೆಯ ಆರೋಪಿಯನ್ನು ಹೆಸರಿಸಿದೆ.
ಆರೋಪಿ ಶಾಫಿ ಬೆಳ್ಳಾರೆ ಎನ್‌ಐಎ ಕಸ್ಟಡಿಯಲ್ಲಿದ್ದಾನೆ. ಕಳೆದ ವರ್ಷ ಜುಲೈನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವಮೋರ್ಚಾ ಮುಖಂಡನ ಹತ್ಯೆಯಲ್ಲಿ ಶಾಫಿ ಬೆಳ್ಳಾರೆ ಸಹ ಆರೋಪಿ. ಎಸ್‌ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಶಾಫಿ ಬೆಳ್ಳಾರೆಯನ್ನು ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಈಗ ಶಾಫಿ ಬೆಳ್ಳಾರೆಗೆ ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಟಿಕೆಟ್‌ ಘೋಷಣೆ ಮಾಡಿದೆ. ಪುತ್ತೂರಿನಲ್ಲಿ ನಡೆದ ಎಸ್‌ಡಿಪಿಐ ಕಾರ್ಯಕರ್ತರ ಸಮಾವೇಶದಲ್ಲಿ ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಖಾನ್ ಈ ಘೋಷಣೆ ಮಾಡಿದ್ದಾರೆ. ಎಸ್‌ಡಿಪಿಐನ ಈ ನಡೆ ವಿವಾದಕ್ಕೆ ಕಾರಣವಾಗಿದೆ. ಶಾಫಿ ಬೆಳ್ಳಾರೆ ಜೈಲಿನಲ್ಲಿದ್ದು, ಅಲ್ಲಿಂದಲೇ ಚುನಾವಣೆಗೆ ಸ್ಪರ್ಧೆ ಮಾಡಲಿದ್ದಾರೆ ಎಂದು ವರದಿಗಳು ತಿಳಿಸಿವೆ.

ಬೆಳ್ಳಾರೆ ನಿವಾಸಿ ಮತ್ತು ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಯುವ ಘಟಕದ ಸದಸ್ಯ ನೆಟ್ಟಾರು ಅವರನ್ನು ಜುಲೈ 26, 2022 ರಂದು ಈಗ ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರು ಮಾರಕಾಸ್ತ್ರಗಳಿಂದ ಕೊಲೆ ಮಾಡಿದ್ದರು.ಎನ್‌ಐಎ ತನಿಖೆಯಲ್ಲಿ, ಸಮಾಜದ ಜನರಲ್ಲಿ ಭಯಭೀತಿ ಸೃಷ್ಟಿಸಲು ಪ್ರವೀಣ ನೆಟ್ಟಾರು ಹತ್ಯೆಗೆ ಪಿಎಫ್‌ಐ ಮುಖಂಡರು ಮತ್ತು ಸದಸ್ಯರು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.
ಕಳೆದ ವರ್ಷ ಜುಲೈ 27 ರಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆಗಸ್ಟ್ 4 ರಂದು ಎನ್‌ಐಎ ಮತ್ತೆ ದಾಖಲಿಸಿದೆ. ಸದ್ಯ ಶಫಿ ಬೆಳ್ಳಾರೆ ಎನ್‌ಐಎ ವಶದಲ್ಲಿದ್ದಾನೆ.

300x250 AD


ಉಗ್ರರನ್ನು ಕರೆತಂದು ಟಿಕೆಟ್ ಕೊಡ್ತಾರೆ: ಆರ್.ಅಶೋಕ್
ಈ ಕುರಿತಾಗಿ ಬೆಂಗಳೂರು ನಗರದಲ್ಲಿ ಕಂದಾಯ ಸಚಿವ ಆರ್.ಅಶೋಕ್​ ಪ್ರತಿಕ್ರಿಯೆ ನೀಡಿದ್ದಾರೆ. ದೇಶದಲ್ಲಿ‌ ಈಗಾಗಲೇ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಲಾಗಿದೆ. ಅದೇರೀತಿ ಎಸ್​ಡಿ‌ಪಿಐ ಸಂಘಟನೆ ಕೂಡ ಬ್ಯಾನ್ ಮಾಡಬೇಕು. ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸುತ್ತೇನೆ. ಎಸ್‌ಡಿಪಿಐ (SDPI) ಸಂಘಟನೆಯವರು ಉಗ್ರರನ್ನು ಕರೆತಂದು ಟಿಕೆಟ್ ಕೊಡ್ತಾರೆ. ಪ್ರವೀಣ್‌ ಹತ್ಯೆಯಲ್ಲಿ ಭಾಗಿಯಾದ ಆರೋಪ ಹೊತ್ತಿರುವವನಿಗೆ ಚುನಾವಣೆಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ ಎಂದು ವಾಗ್ದಾಳಿ ಮಾಡಿದರು.

Share This
300x250 AD
300x250 AD
300x250 AD
Back to top