Slide
Slide
Slide
previous arrow
next arrow

ಸದಸ್ಯರಿಗೆ ಆರ್ಥಿಕ ಶಿಸ್ತನ್ನು ಕಲಿಸುವುದು ಸಹಕಾರಿ‌ ಸಂಘದ ಜವಾಬ್ದಾರಿ: ಸ್ಪೀಕರ್ ಕಾಗೇರಿ

300x250 AD

ಶಿರಸಿ: ಸಹಕಾರಿ ಸಂಘಗಳು ಸಾಲ ನೀಡುವಿಕೆಯನ್ನೇ ಪ್ರಮುಖ ಉದ್ದೇಶವಾಗಿಸಿಕೊಳ್ಳಬಾರದು. ಸಂಘದ ಸದಸ್ಯರಿಗೆ ಆರ್ಥಿಕ ಶಿಸ್ತನ್ನು ಕಲಿಸಬೇಕು. ಬೇಕಾಬಿಟ್ಟಿ ಸಾಲ ನೀಡಿ, ಅದು ಸಮರ್ಪಕ ಬಳಕೆ ಆಗದಿದ್ದರೆ ಕೃಷಿ ಭೂಮಿ, ಆಸ್ತಿ ಮಾರಿಕೊಳ್ಳಬೇಕಾದ ಸ್ಥಿತಿ ಬರಬಹುದು. ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ತಾಲೂಕಿನ ಸಂಪಖಂಡ ಗ್ರೂಪ್ ಸೇವಾ ಸಹಕಾರಿ ಸಂಘ ಜಾನ್ಮನೆ ಶತಮಾನೋತ್ಸವ ಸಮಾರಂಭಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು. ಸೊಸೈಟಿಗಳಲ್ಲಿ ಉತ್ತಮ ಸಾಲಗಾರರು ಲಭ್ಯವಾಗದಿರುವುದೂ ಇತ್ತೀಚಿನ ಸಮಸ್ಯೆಗಳಲ್ಲಿ ಒಂದಾಗಿದೆ. ಸಹಕಾರಿ ಸಂಘಗಳೊಂದಿಗೆ ಸ್ಥಳೀಯರಿಗೆ ಭಾವನಾತ್ಮಕ ಸಂಬಂಧವಿದೆ. ನಮ್ಮ ಜಿಲ್ಲೆಯ ಸಹಕಾರಿ ವ್ಯವಸ್ಥೆ ಪ್ರಬಲಗೊಳಿಸಲು ಅನೇಕರು ಶ್ರಮಿಸಿದ್ದಾರೆ. ಶತಮಾನೋತ್ಸವದ ರತ್ನದ ಹಾರದಲ್ಲಿ ಸಂಪಖಂಡ ಸೊಸೈಟಿಯೂ ಒಂದಾಗಿದೆ ಎಂದರು.

1923ರಲ್ಲಿ ಬೆಳೆದ ಬೆಳೆಗೆ ಬೆಲೆ ಇಲ್ಲ, ಸೂಕ್ತ ರಸ್ತೆ ಇರದ ಕಷ್ಟದ ಸ್ಥಿತಿ ಇತ್ತು. ಇಂತ ಸಂದರ್ಭದಲ್ಲಿ ಅನೇಕರು ಸೇರಿ ಸಹಕಾರಿ ಸಂಘ ನಿರ್ಮಿಸಿದ್ದಾರೆ. ಸ್ಥಳೀಯ ಸಂಘಟನೆಯ ಮೂಲಕ ಸ್ವಾತಂತ್ರ‍್ಯ ಹೋರಾಟದಲ್ಲೂ ಭಾಗಿ ಆಗುತ್ತಿದ್ದರು. ಸಹಕಾರಿ ಸಂಘಗಳಲ್ಲಿ ತಾವೇ ಮೇಲು ಎಂದು ಕಿರೀಟ ಹಾಕಿಕೊಂಡ ಅನೇಕ ಜಿಲ್ಲೆಗಳಿವೆ. ಆದರೆ, ನಮ್ಮ ಜಿಲ್ಲೆಯ ಸಂಘಗಳು ಮನೆಯ ಭಾಗದಂತೆ ಬೆಳೆದು ಮುಕುಟಪ್ರಾಯವಾಗಿದೆ. ಇತ್ತೀಚೆಗೆ ಮಲೆನಾಡಿನ ಯುವಕರು ಶಹರ ಸೇರುತ್ತಿದ್ದಾರೆ. ವೃದ್ಧಾಶ್ರಮಕ್ಕೆ ಬೇಡಿಕೆ ಹೆಚ್ಚುತ್ತಿದೆ. ಇಂತ ಸ್ಥಿತಿಗೆ ನಾವು ತೆರಳುತ್ತಿರುವುದು ಖೇದಕರ. ಯುವಕರು ಸ್ಥಳೀಯವಾಗಿ ಉಳಿಯಬೇಕು ಎಂದಾದರೆ ಉದ್ಯೋಗ ಸೃಷ್ಟಿ ಆಗಬೇಕು. ಈ ಕಾರ್ಯದಲ್ಲಿ ಸಹಕಾರಿ ಸಂಘಗಳು ಮಹತ್ತರ ಪಾತ್ರ ವಹಿಸಬೇಕು. ಅಂಗಡಿಗಳು ವಿದೇಶಿ ಕಂಪನಿಗಳು ತಯಾರಿಸುವ ಖಾದ್ಯಗಳ ಮಾರಾಟ ಕೇಂದ್ರವಾಗುತ್ತಿವೆ. ಸ್ಥಳೀಯರು ಉತ್ಪಾದನೆ ಮಾಡಿ ಸ್ಥಳೀಯ ಮಾರುಕಟ್ಟೆ ಆವರಿಸಿಕೊಳ್ಳಬೇಕು. ಸಹಕಾರಿ ಸಂಘಗಳು ಸರ್ಕಾರಿ ಸುತ್ತೋಲೆಗೆ ಮಾತ್ರ ಸೀಮಿತವಾಗಬಾರದು ಎಂದರು.

ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಮಾತನಾಡಿ, ಕುಟುಂಬ ವ್ಯವಸ್ಥೆಯ ಬಗ್ಗೆ ನಮ್ಮ ಮಕ್ಕಳಿಗೆ ಜಾಸ್ತಿ ತಿಳಿಸಬೇಕು. ಬದಲಾವಣೆ ಮಕ್ಕಳಿಂದಲೇ ಬರಬೇಕು. ಸರ್ಕಾರಿ ವ್ಯವಸ್ಥೆಯೇ ನಮ್ಮ ಬದುಕು ಎಂಬ ಭ್ರಮೆ ಮಕ್ಕಳಲ್ಲಿ ಬೆಳೆಯದಂತೆ ನೋಡಿಕೊಳ್ಳಬೇಕು. ಕೃಷಿ ಕುಟುಂಬ ಜಮೀನು ಮಾರದಂತೆ ಸಹಕಾರಿ ಸಂಘಗಳು ಎಚ್ಚರಿಕೆ ವಹಿಸಬೇಕಿದೆ ಎಂದರು.

300x250 AD

ಸಂಘದ ಅಧ್ಯಕ್ಷ ಸುಬ್ರಾಯ ಹೆಗಡೆ ಜಾನ್ಮನೆ, ಎಪಿಎಂಸಿ ಕಾರ್ಯದರ್ಶಿ ಟಿ. ವಿ. ಶ್ರೀನಿವಾಸ ಇತರರಿದ್ದರು. ಇದೇ ವೇಳೆ ಸಂಘದ ಮಾಜಿ ಅಧ್ಯಕ್ಷರು, ಸಹಕಾರಿಗಳನ್ನು ಸನ್ಮಾನಿಸಲಾಯಿತು.

Share This
300x250 AD
300x250 AD
300x250 AD
Back to top