• Slide
    Slide
    Slide
    previous arrow
    next arrow
  • ಪರಂಪರೆಯ ಸಂಕೇತವಾದ ಪ್ರಾದೇಶಿಕ ಭಾಷೆ ಬಳಸಲು ಕೀಳರಿಮೆ ಬೇಡ: ಮನು ಹಂದಾಡಿ

    300x250 AD

    ಅಂಕೋಲಾ: ಜನಾಂಗೀಯ ಭಾಷೆಯಾಗಲಿ ಅಥವಾ ಪ್ರಾದೇಶಿಕ ಭಾಷೆಯಾಗಲಿ ಅದು ನಮ್ಮ ಸಂಸ್ಕೃತಿ ಹಾಗೂ ಪರಂಪರೆಯ ಸಂಕೇತವಾಗಿದೆ. ಅದನ್ನು ಬಳಸಲು ಯಾವುದೇ ಕೀಳರಿಮೆ ಬೇಡ. ನಮ್ಮ ಭಾವನಾ ಪ್ರಪಂಚದೊಂದಿಗೆ ವಿಹರಿಸುವ ನಮ್ಮ ಎದೆಯ ಭಾಷೆಯನ್ನು ಹೆಚ್ಚೆಚ್ಚು ಬಳಸುವ ಮೂಲಕ ನಮ್ಮತನವನ್ನು ಕಾಪಿಟ್ಟುಕೊಳ್ಳಿ ಎಂದು ಕುಂದಾಪ್ರ ಕನ್ನಡದ ರಾಯಭಾರಿ ಮನು ಹಂದಾಡಿ ಕರೆ ನೀಡಿದರು.

    ಅವರು ತಾಲೂಕಿನ ಬಾಸಗೋಡದ ಸ್ವಾತಂತ್ರ್ಯ ಸೇನಾನಿ ದಿ.ಮಾಣಿ ನಾಯಕ ಸ್ಮರಣಾರ್ಥ ಏರ್ಪಡಿಸಿದ್ದ ಜ್ಞಾನ ಸತ್ರದ 16 ನೇ ವರ್ಷದ ವಿಚಾರ ಸಂಕಿರಣವನ್ನು ( ಎದೆ ಭಾಷೆ ಮತ್ತು ಒಡಲ ಸಂಸ್ಕೃತಿ) ಉದ್ಘಾಟಿಸಿ ಮಾತನಾಡಿ ಉಪ ಭಾಷೆಗಳು ಉಳಿದರೆ ಸಾರ್ವತ್ರಿಕವಾಗಿ ಕನ್ನಡ ಭಾಷೆ ಬೆಳೆಯುತ್ತದೆ. ಲಿಪಿಯಿಂದ ಸ್ಥಳೀಯ ಕನ್ನಡದ ಬೆಳವಣಿಗೆಗೆ ಪೂರಕವಾಗುತ್ತದೆ. ಈ ನಿಟ್ಟಿನಲ್ಲಿ ಸರಕಾರ ಪ್ರಾದೇಶಿಕ ಭಾಷೆಗಳನ್ನು  ಪಠ್ಯಕ್ರಮದಲ್ಲಿ ಅಳವಡಿಸುವತ್ತ ಚಿಂತನೆ ನಡೆಸಬೇಕಿದೆ. ಕನ್ನಡ ಭಾಷೆಯ ವಿಶ್ವಕೋಶದಂತಿರುವ ಯಕ್ಷಗಾನದಲ್ಲಿ ಸಮೃದ್ಧ ಸಂಸ್ಕೃತಿಯ ಸತ್ವ ಅಡಗಿದೆ. ಎಂದು ತಮ್ಮ  ಅರ್ಥಗರ್ಭಿತ ಹಾಸ್ಯದ ಹೊನಲುಗಳ ಮೂಲಕ ಸರಳವಾಗಿ ಮನದಟ್ಟು ಮಾಡಿದರು.

    ಅಧ್ಯಕ್ಷತೆವಹಿಸಿದ್ದ ಪತ್ರಕರ್ತ ಕೃಷ್ಣಮೂರ್ತಿ ಹೆಬ್ಬಾರ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಜ್ಞಾನ ಸತ್ರದ ಮೂಲಕ ಕಾರ್ಯಕ್ರಮವನ್ನು ಆಯೋಜಿಸಿ ಎದೆ ಭಾಷೆ ಮತ್ತು ಒಡಲ ಸಂಸ್ಕೃತಿಯ ಕುರಿತು ಜಾಗೃತಿ ಮೂಡಿಸಲು ಮುಂದಾಗಿರುವ ನ್ಯಾಯವಾದಿ ನಾಗರಾಜ ನಾಯಕರವರ ಕಾರ್ಯ ಶ್ಲಾಘನೀಯವಾಗಿದೆ. ಬದುಕಿನಲ್ಲಿ ಅಳವಡಿಸಿಕೊಂಡಿರುವ ಉತ್ತಮ ವಿಚಾರಧಾರೆಗಳು ಒಡಲ ಸಂಸ್ಕೃತಿಯ ಪ್ರತಿಬಿಂಬಗಳಾಗಿವೆ. ಆದರೆ ಇತ್ತೀಚಿನ ಆಧುನಿಕ ಯುಗದ ಜೀವನ ಶೈಲಿಯ ನಡುವೆ ನಮ್ಮನ್ನು ತಿದ್ದಿ ತೀಡಿ ಸ್ವಾಭಿಮಾನದ ಪಾಠ ಕಲಿಸಿದ ಎದೆಭಾಷೆ ಮತ್ತು ಒಡಲ ಸಂಸ್ಕೃತಿಯ ಸಮೃದ್ಧ ಸತ್ವಗಳು ಮಾಯವಾಗುವ ಹಂತದತ್ತ ಸಾಗುತ್ತಿರುವದು ಆತಂಕವನ್ನು ತಂದಿದೆ ಎಂದರು.

    ಜ್ಞಾನಸತ್ರದ ರೂವಾರಿ ನ್ಯಾಯವಾದಿ ನಾಗರಾಜ ನಾಯಕ ಪ್ರಾಸ್ತಾವಿಕವಾಗಿ ಮಾತನಾಡಿ, ಯಕ್ಷಗಾನದ ಹಿರಿಯ ಕಲಾವಿದ ವಾಸುದೇವ ಸಾಮಗರಿಂದ ಅನಾವರಣಗೊಂಡು 16 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಜ್ಞಾನ ಸತ್ರದ ಕಾರ್ಯಕ್ರಮದಲ್ಲಿ ಖ್ಯಾತನಾಮರು ಹರಿಸಿರುವ ಸುಜ್ಞಾನದ ಸುಧೆಗೆ ನೆರೆದ ಜನರಿಂದ ವ್ಯಕ್ತವಾಗಿರುವ ಮೆಚ್ಚುಗೆಯ ನುಡಿಗಳು ಹೆಮ್ಮೆ ತಂದಿದೆ ಎಂದರು.

    300x250 AD

    ಪ್ರಾಚಾರ್ಯ ದೇವಾನಂದ ಗಾವಂಕರ ಅವರು ದೇಶಭಕ್ತಿಯ ಹಾಡಿನ ಮೂಲಕ ಸ್ವಾತಂತ್ರ್ಯ ಸೇನಾನಿ ದಿ. ಮಾಣಿ ನಾಯಕರನ್ನು ಸ್ಮರಿಸಿಕೊಂಡರು. ಇದೇ ಸಂದರ್ಭದಲ್ಲಿ ಶ್ರೇಷ್ಠ ಕೃಷಿಕ ತಿಮ್ಮಣ್ಣ ನಾಯಕ ಹಿಲ್ಲೂರು, ಕಾವಿ ಕಲೆ ಕಲಾವಿದ ರವಿ ಗುನಗಾ, ಅಗ್ರಗೋಣ ದೇವಸ್ಥಾನದ ಅರ್ಚಕ ನಾರಾಯಣ ಗುನಗಾ, ಪಂಚವಾದ್ಯದ ಕಲಾವಿದ ನಾಗೇಶ ರಾಮಾ ಆಗೇರ ಅವರನ್ನು ಸನ್ಮಾನಿಸಿ ಗೌರವಿಸಿದರು.

    ಆನಂದು ಶೆಡಗೇರಿ ಹಾಗೂ ತಂಡದವರು ಯಕ್ಷಗಾನದ ಹಾಡುಗಳು ಕಿವಿಗೆ ಇಂಪು ನೀಡಿದವರು. ನಾಗೇಶ ಆಗೇರ, ಜಗದೀಶ ಆಗೇರ, ಗುರು ಆಗೇರ, ಮುರ್ಕುಂಡಿ ಹನೇಹಳ್ಳಿ ತಂಡದವರು ಪಂಚವಾದ್ಯಗಳನ್ನು ನುಡಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಶ್ರೀನಿಧಿ ಸರ್ವೇಶ ನಾಯಕ, ನಂದು ಗಾಂವಕರ, ಸುಬ್ರಮಣ್ಯ ಹೆಗಡೆ ಬ್ರಹಊರು, ರಾಜೇಶ ಮರಾಠೆ ಸನ್ಮಾನಪತ್ರ ವಾಚಿಸಿದರು. ಡಾ. ಅರ್ಚನಾ ನಾಯಕ, ಲಕ್ಷ್ಮೀಧರ ನಾಯಕ, ವೆಂಕಟರಮಣ ನಾಯಕ, ಚಂದ್ರಕಾಂತ ಗಾಂವಕರ ಸೇರಿದಂತೆ ಹಲವರು ಪುಸ್ತಕದ ಪ್ರಸಾದವನ್ನು ವಿತರಿಸಿದರು.

    ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ಟಿ.ಬಿ. ಹರಿಕಾಂತ, ಶಿವಾನಂದ ಹೆಗಡೆ ಕಳವೆ, ವಿಠ್ಠಲದಾಸ ಕಾಮತ, ವಸಂತಕುಮಾರ ಕತಗಾಲ, ಡಾ. ಆರ್.ಜಿ.ಗುಂದಿ, ಡಾ. ಎನ್.ವಿ.ನಾಯಕ, ವಿಠ್ಠಲ ಗಾಂವಕರ, ರಾಜೀವ ನಾಯಕ ಹಿರೇಗುತ್ತಿ, ಎನ್.ವಿ. ನಾಯಕ ಭಾವಿಕೇರಿ,ರಾಮಾ ನಾಯಕ ಕಾರವಾರ, ಮಾಧವ ನಾಯಕ, ಬಾಬು ಶೇಖ, ಆನಂದು ಕವರಿ. ಕಾಂತ ಮಾಸ್ತರ, ಜಗದೀಶ ನಾಯಕ ಹೊಸ್ಕೇರಿ, ಮಹಾಂತೇಶ ರೇವಡಿ, ಪ್ರಕಾಶ ನಾಯ್ಕ ಕಾರವಾರ, ಸಾಯಿಕಿರಣ ಶೇಟಿಯಾ, ವಿ.ಎಸ್. ಭಟ್ಟ, ಹರಿಶ್ಚಂದ್ರ ನಾಯಕ ಸೂರ್ವೆ, ವಿಘ್ನೇಶ್ವರ ನೀಲಪ್ಪ ಗುನಗಾ, ಗಜಾನನ ಗುನಗಾ ಹಳಕಾರ, ಮೋಹನ ಗುನಗಾ ಕೂಜಳ್ಳಿ, ಗೋಪು ಅಡ್ಲೂರು, ಮಂಜು ಅಡ್ಲೂರು, ರಂಜನ್ ಹಿಚ್ಕಡ, ಬಾಲಚಂದ್ರ ನಾಯಕ ಭಾವಿಕೇರಿ, ಕೇಶವಾನಂದ ನಾಯಕ ಬಾವೀಕೇರಿ, ನ್ಯಾಯವಾದಿಗಳಾದ ಉಮೇಶ ನಾಯ್ಕ, ವಿನೋದ ಶಾನುಭಾಗ, ವೆಂಕಣ್ಣ ನಾಯಕ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಶಿಕ್ಷಕ ರಾಜೇಶ ನಾಯಕ ಸೂರ್ವೆ ಕಾರ್ಯಕ್ರಮ ನಿರೂಪಿಸಿದರು. ರಾಮಚಂದ್ರ ಹೆಗಡೆ ಕುಂಟಕಣಿ ವಂದಿಸಿದರು

    Share This
    300x250 AD
    300x250 AD
    300x250 AD
    Leaderboard Ad
    Back to top