Slide
Slide
Slide
previous arrow
next arrow

ರಾಷ್ಟ್ರದ ಬಗ್ಗೆ ನಿಸ್ವಾರ್ಥ ಪ್ರೇಮ, ಸೇವೆಗೆ ಬದ್ಧರಾಗಿ: ಬಸವರಾಜ‌ ಹಟ್ಟಿಗೌಡ

300x250 AD

ಶಿರಸಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಿರಸಿ ಹಾಗೂ ಭಾರತ ಸೇವಾದಳ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಫೆ.6 ರಿಂದ ಫೆ.11ರವರೆಗೆ  ಆಯೋಜನೆಗೊಂಡ ಶಿಕ್ಷಕ,ಶಿಕ್ಷಕಿಯರಿಗಾಗಿ ನಡೆದ ಸಹಾಯಕ ಯೋಗ್ಯ ಮತ್ತು ನೈತಿಕ ಶಿಕ್ಷಣ ತರಬೇತಿ ಶಿಬಿರವು ಸಂಪನ್ನಗೊಂಡಿತು.
ಸಮಾರೋಪ ಸಮಾರಂಭದ ಅಧ್ಯಕ್ಷರಾಗಿ ಜಿಲ್ಲಾ ಭಾರತ ಸೇವಾದಳ ಅಧ್ಯಕ್ಷ ವಿ.ಎಸ್. ನಾಯಕ  ಉಪಸ್ಥಿತರಿದ್ದರು. ಪ್ರಶಸ್ತಿ ಪತ್ರ ವಿತರಕರಾಗಿ ಭಾರತ ಸೇವಾದಳ ಕೇಂದ್ರ ಕಛೇರಿ, ಬೆಂಗಳೂರು ದಳಪತಿ ಬಸವರಾಜ ಹಟ್ಟಿಗೌಡ ಹಾಗೂ ಭಾರತ ಸೇವಾದಳ ವಿಶ್ರಾಂತ ದಳಪತಿ ಜೆ.ಎಸ್. ನಾಯ್ಕ ಭಾರತ ಸೇವಾದಳ ಜಿಲ್ಲಾ ಕಾರ್ಯದರ್ಶಿಗಳಾದ ಪ್ರೋ. ಕೆ. ಎನ್. ಹೊಸಮನಿ ಭಾರತ ಸೇವಾದಳ ತಾಲೂಕಾ  ಅಧ್ಯಕ್ಷ ಅಶೋಕ ಬಜಂತ್ರಿ, ಕೋಶಾಧ್ಯಕ್ಷ ಕುಮಾರ ಎಸ್. ನಾಯ್ಕ, ಸದಸ್ಯ ಕೆ.ಎನ್. ನಾಯ್ಕ ಉಪಸ್ಥಿತರಿದ್ದರು. ಸೇವೆಗಾಗಿ ನಿಮ್ಮ ಜೀವನವು ಮುಡಿಪಾಗಿರಲಿ ಫಲಾಪೇಕ್ಷೆಯಿಲ್ಲದ ಸೇವೆ ನಿಮ್ಮದಾಗಲಿ. ರಾಷ್ಟ್ರದ ಬಗ್ಗೆ ಗೌರವ, ಹೆಮ್ಮೆ ಇರಬೇಕು ಎಂದು ಬಸವರಾಜ ಹಟ್ಟಿಗೌಡ  ತಿಳಿಸಿದರು. ಇದೇ ಸಂದರ್ಭದಲ್ಲಿ ಬಸವರಾಜ ಹಟ್ಟಿಗೌಡ ಹಾಗೂ ಜೆ.ಎಸ್. ನಾಯ್ಕರನ್ನು ಗೌರವಿಸಲಾಯಿತು. ಅಧ್ಯಕ್ಷರಾದ ವಿ.ಎಸ್. ನಾಯಕ  ಎಲ್ಲಾ ಪ್ರಕಾರದ ಸಾಮಾಜಿಕ ಸ್ಥರಗಳಲ್ಲಿ ಕೌಶಲ್ಯದೊಂದಿಗೆ ಬದುಕಿನ ಶಿಕ್ಷಣ ನೀಡುವ ಸೇವಾದಳ ತರಬೇತಿಯು ಮನುಷ್ಯರನ್ನು ಸಂಪೂರ್ಣ ನಾಗರಿಕರನ್ನಾಗಿಸುವುದರಲ್ಲಿ ಸಂಶಯವಿಲ್ಲ. ಇದನ್ನು ನಮ್ಮಲ್ಲಷ್ಟೇ ಅಲ್ಲ ಭವಿಷ್ಯತ್ತಿನ ನಾಗರಿಕರಿಗೆ  ಈ ಶಿಕ್ಷಣ ತಲುಪಿಸುವ ನೀವೇ ಧನ್ಯರು ಎಂದರು. ಬೆಳಿಗ್ಗೆ 9 ಘಂಟೆಗೆ ಸರಿಯಾಗಿ  ಬಸವರಾಜ ಹಟ್ಟಿಗೌಡ ದಳಪತಿಗಳು ಧ್ವಜವಂದನೆಯನ್ನು ಸ್ವೀಕರಿಸಿ, ಸೇವಾದಳ ಶಿಕ್ಷಣದ ಚಟುವಟಿಕೆಗಳನ್ನು ವೀಕ್ಷಿಸಿದರು. ಇದೇ ಸಂದರ್ಭದಲ್ಲಿ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ್ಚಂದ್ರ ಹೆಗಡೆ  ಕೆಶಿನ್ಮನೆ  ಉಪಸ್ಥಿತರಿದ್ದರು. ಶಿಬಿರಾಧಿಪತಿಗಳಾದ ಜಿಲ್ಲಾ ಸಂಘಟಕ ರಾಮಚಂದ್ರ ಹೆಗಡೆ ಗೌರವರಕ್ಷೆ ನೀಡಿ ವರದಿ ವಾಚಿಸಿದರು. ಸೇವಾದಳದ ಲೇಝಿಂ ಕವಾಯತಿನೊಂದಿಗೆ ಸ್ವಾಗತ ಗೀತೆ ಹಾಡಲಾಯಿತು. ಕುಮಾರ ಎಸ್. ನಾಯ್ಕ ಸ್ವಾಗತಿಸಿದರು. ಎಂ. ಎನ್. ಹೆಗಡೆ ನಿರೂಪಿಸಿದರು. ಸರ್ವೇಶ್ವರ ಶೆಟ್ಟಿ ವಂದಿಸಿದರು. ಅಂತಿಮವಾಗಿ ಧ್ವಜಕ್ಷೇತ್ರದಲ್ಲಿ ಪ್ರತಿಜ್ಞೆ ಸ್ವೀಕರಿಸಿ, ಧ್ವಜಾವರೋಹಣ ಮಾಡುವುದರ ಮೂಲಕ ಶಿಬಿರವನ್ನು ಸಂಪನ್ನಗೊಳಿಸಲಾಯಿತು.

300x250 AD
Share This
300x250 AD
300x250 AD
300x250 AD
Back to top