• Slide
    Slide
    Slide
    previous arrow
    next arrow
  • ಸಿದ್ದಾಪುರ ಟಿಎಂಎಸ್‌ನಿಂದ ಹಣ್ಣು- ತರಕಾರಿ ಮಾರಾಟ ವಿಭಾಗ ಆರಂಭ

    300x250 AD

    ಸಿದ್ದಾಪುರ: ಸ್ಥಳೀಯ ಟಿಎಂಎಸ್‌ನಿಂದ ಎಪಿಎಂಸಿ ಆವಾರದಲ್ಲಿ ಕಿರಾಣಿ ಅಂಗಡಿಗೆ ತಾಗಿ ಹಣ್ಣು- ತರಕಾರಿ ಮಾರಾಟ ವಿಭಾಗವನ್ನು ಅಧ್ಯಕ್ಷ ಆರ್.ಎಂ.ಹೆಗಡೆ ಬಾಳೇಸರ ಉದ್ಘಾಟಿಸಿದರು.
    ಬಳಿಕ ಮಾತನಾಡಿದ ಅವರು, ಈ ವಿಭಾಗವು ಗ್ರಾಹಕರಿಗೆ, ವಿಶೇಷವಾಗಿ ಹಳ್ಳಿಯಿಂದ ಬಂದಿರುವ ಸದಸ್ಯ ಗ್ರಾಹಕರಿಗೆ ಹೆಚ್ಚು ಉಪಯುಕ್ತವಾಗಲಿದೆ. ಗುಣಮಟ್ಟ, ಶುಚಿತ್ವವನ್ನು ಕಾಪಾಡಿಕೊಂಡು ಮಾರಾಟದ ವ್ಯವಸ್ಥೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
    ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಂ.ಜಿ.ನಾಯ್ಕ ಹಾದ್ರಿಮನೆ, ನಿರ್ದೇಶಕರುಗಳಾದ ಕೆ.ಕೆ.ನಾಯ್ಕ ಸುಂಕತ್ತಿ, ಜಿ.ಎಂ.ಭಟ್ಟ ಕಾಜಿನಮನೆ, ವ್ಯವಸ್ಥಾಪಕ ಸತೀಶ ಹೆಗಡೆ ಹೆಗ್ಗಾರಕೈ, ಉಪವ್ಯವಸ್ಥಾಪಕ ಪ್ರಸನ್ನ ಭಟ್ಟ ಕೆರೆಹೊಂಡ, ಹಾಗೂ ಜಿ.ಜಿ.ಹೆಗಡೆ ಬಾಳಗೋಡ, ಎಂ.ಎಸ್.ಭಟ್ಟ ರವೀಂದ್ರನಗರ ಉಪಸ್ಥಿತರಿದ್ದರು. ಡಿ.ಪಿ.ಭಟ್ಟ ಹಣಜಿಬೈಲು ಪೂಜಾ ಕಾರ್ಯ ನೆರವೇರಿಸಿದರು. ಸಿಬ್ಬಂದಿಗಳು, ಗ್ರಾಹಕರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top