• Slide
    Slide
    Slide
    previous arrow
    next arrow
  • ಅಂಕೋಲಾ ಉತ್ಸವಕ್ಕೆ ಅದ್ದೂರಿ ಚಾಲನೆ: ಶಾಸಕಿ ರೂಪಾಲಿಗೆ ಬೆಳ್ಳಿ ಕಿರೀಟ ನೀಡಿ ಸನ್ಮಾನ

    300x250 AD

    ಅಂಕೋಲಾ: ಸಂಗಾತಿ ರಂಗಭೂಮಿ ಆಶ್ರಯದಲ್ಲಿ ಏಳು ದಿನಗಳ ಕಾಲ ನಡೆಯಲಿರುವ 5ನೇ ವರ್ಷದ ಅಂಕೋಲಾ ಉತ್ಸವಕ್ಕೆ ಪಟ್ಟಣದ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ ಅದ್ದೂರಿ ಚಾಲನೆ ದೊರಕಿತು. ಶಾಸಕಿ ರೂಪಾಲಿ ನಾಯ್ಕ ಅಡಿಕೆ ಸಿಂಗಾರ ಅರಳಿಸಿ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು.
    ಈ ಸಂದರ್ಭದಲ್ಲಿ ಮಾತನಾಡಿದ ಅವರು, ಅತ್ಯಂತ ಹಿಂದುಳಿದ ತಾಲೂಕು ಎಂದು ಗುರುತಿಸಿಕೊಂಡಿದ್ದ ಅಂಕೋಲೆಯ  ಅಭಿವೃದ್ಧಿಯ ಕನಸು  ಸಾಕಾರವಾಗಿದೆ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದ್ದು ಅಂತರಾಷ್ಟ್ರೀಯ ವಾಣಿಜ್ಯ ಬಂದರು, ವಿಮಾನ ನಿಲ್ದಾಣ ಮೊದಲಾದ  ಯೋಜನೆಗಳು ಮುಂಬರುವ ವರ್ಷಗಳಲ್ಲಿ ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಸಲಿವೆ ಎಂದರು.
    ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷಗಳ ಕಾಲ ಯಾವುದೇ ಉತ್ಸವ ಕಾರ್ಯಕ್ರಮಗಳು ಸಾಧ್ಯವಾಗಿಲ್ಲ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಉಚಿತವಾಗಿ ಲಸಿಕೆ ಒದಗಿಸುವ ಮೂಲಕ ದೇಶದ ಜನ ಇಂದು ಕೋವೀಡ್ ಮಹಾಮಾರಿಯನ್ನು ಸಮರ್ಥವಾಗಿ ಎದುರಿಸಿ ಜಾತ್ರೆ,  ಉತ್ಸವಗಳನ್ನು ಸಂಭ್ರಮದಿಂದ  ಆಚರಿಸಲು ಸಾಧ್ಯವಾಗಿದೆ ಎಂದ ಅವರು ಸಂಗಾತಿ ರಂಗಭೂಮಿಯ ಅಂಕೋಲಾ ಉತ್ಸವ ತಾಲೂಕಿನ  ಪ್ರತಿ ಮನೆ ಮನಗಳ ಉತ್ಸವವಾಗಲಿ ಎಂದು ಹಾರೈಸಿದರು.
    ಸಾಹಿತಿ ರಾಮಕೃಷ್ಣ ಗುಂದಿ, ಬಿಜೆಪಿ ಪ್ರಮುಖ ರಾಜೇಂದ್ರ ನಾಯ್ಕ, ಸೇಂಟ್ ಮಿಲಾಗ್ರಿಸ್ ಸಹಕಾರಿ ಸಂಘದ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್, ವಿಶ್ರಾಂತ ಪ್ರಾಚಾರ್ಯ ಮಹೇಶ ಗೋಳಿಕಟ್ಟೆ, ಪತ್ರಕರ್ತ ರಾಘು ಕಾಕರಮಠ ಮಾತನಾಡಿದರು.
    ಪದ್ಮಶ್ರೀ ಪುರಸ್ಕೃತೆ ವೃಕ್ಷಮಾತೆ ತುಳಸಿ ಗೌಡ ಅಮ್ಯೂಜಮೆಂಟ್ ಪಾರ್ಕ್ ಮತ್ತು ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು. ಹಿರಿಯ ಚಿಂತಕ ಕಾಳಪ್ಪ ನಾಯಕ ವೇದಿಕೆಯನ್ನು ಉದ್ಘಾಟಿಸಿದರು, ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಅಧ್ಯಕ್ಷತೆ ವಹಿಸಿದ್ದರು. ಸಂಜಯ ನಾಯ್ಕ ಸ್ವಾಗತಿಸಿದರು, ಸಂಗಾತಿ ರಂಗಭೂಮಿ ಕಾರ್ಯಾಧ್ಯಕ್ಷ ಕೆ.ರಮೇಶ ಪ್ರಾಸ್ತಾವಿಕ ಮಾತನಾಡಿದರು. ವಿಷ್ಣು ಪಟಗಾರ ಕಾರ್ಯಕ್ರಮ ನಿರ್ವಹಿಸಿದರು. ಜಗದೀಶ ನಾಯಕ ಹೊಸ್ಕೇರಿ ವಂದಿಸಿದರು.
    ಪುರಸಭೆ ಉಪಾಧ್ಯಕ್ಷೆ ರೇಖಾ ಗಾಂವಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ, ಮುಖ್ಯಾಧಿಕಾರಿ ಎನ್.ಎಂ.ಮೇಸ್ತ, ಜಿ.ಪಂ.ಮಾಜಿ ಸದಸ್ಯ ಜಗದೀಶ ನಾಯಕ ಮೊಗಟಾ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಭಾಸ್ಕರ ನಾರ್ವೇಕರ್, ನಾಮಧಾರಿ ಸಮಾಜ ಅಭಿವೃದ್ಧಿ ಸಂಘದ ಅಧ್ಯಕ್ಷ ನಾಗೇಶ ನಾಯ್ಕ ಆಚಾ, ಪ್ರಾಧ್ಯಾಪಕ ಮಹೇಶ ನಾಯಕ, ತಾ.ಪಂ ಕಾರ್ಯನಿರ್ವಹಣ ಅಧಿಕಾರಿ ಪಿ.ವೈ.ಸಾವಂತ್, ಪ್ರಮುಖರುಗಳಾದ ರವೀಂದ್ರ ಕೇಣಿ, ಕಮಲಾಕರ ಬೋರಕರ್ ಮೊದಲಾದವರು ಉಪಸ್ಥಿತರಿದ್ದರು.

    ‘ಮಣ್ಣಿನ ಮಗಳು’ ಬಿರುದು
    ಅಂಕೋಲಾ ಉತ್ಸವ ಕಾರ್ಯಕ್ರಮದಲ್ಲಿ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಸಂಘಟಕರು ಬೆಳ್ಳಿ ಕಿರೀಟ ತೊಡಿಸಿ, ಬೆಳ್ಳಿ ಖಡ್ಗ ನೀಡಿ ‘ಮಣ್ಣಿನ ಮಗಳು’ ಬಿರುದಿನೊಂದಿಗೆ ಸನ್ಮಾನಿಸಿ ಗೌರವಿಸಿದರು.
    ಈ ಸಂದರ್ಭದಲ್ಲಿ ಸಂಗಾತಿ ರಂಗಭೂಮಿ ಕಾರ್ಯಾಧ್ಯಕ್ಷ ಕೆ.ರಮೇಶ ಮಾತನಾಡಿ, ಯಾವುದೇ ಪಕ್ಷ ಭೇದವಿಲ್ಲದೇ ಪ್ರತಿಯೊಬ್ಬರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಅಂಕೋಲಾ ಉತ್ಸವ ಸಂಘಟಿಸುವುದು ಶಾಸಕಿ ರೂಪಾಲಿ ಅವರ ಆಶಯವಾಗಿತ್ತು. ಸಂಘಟಕರು ಅದರಂತೆ ಎಲ್ಲರೊಂದಿಗೆ ಸೇರಿ ಉತ್ಸವ ನಡೆಸಲು ಮಹತ್ವ ನೀಡಿದ್ದಾರೆ ಎಂದರು.
    ಶಾಸಕಿ ರೂಪಾಲಿ ನಾಯ್ಕ ಅವರಿಗೆ ಬೆಳ್ಳಿ ಖಡ್ಗವನ್ನು ನೀಡುವ ಮೂಲಕ ದುಷ್ಟ ಮನಸ್ಸುಗಳ ಸಂಹಾರಕ್ಕೆ ಶಕ್ತಿ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು. ರೂಪಾಲಿ ನಾಯ್ಕ ಅವರ ಪುತ್ರ ಪರ್ಭತ್, ಸೊಸೆ ರೇಖಾ ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top