ಅಂಕೋಲಾ: ಪುನೀತ ರಾಜಕುಮಾರ ಅಭಿಮಾನಿ ಬಳಗ ಹಾಗೂ ಎಸ್.ಡಿ.ಎಂ.ಸಿ. ವತಿಯಿಂದ ಹಮ್ಮಿಕೊಂಡ ಪುನೀತ ಪುತ್ಥಳಿ ಪ್ರತಿಷ್ಠಾಪನೆಯ ಪ್ರಥಮ ವಾರ್ಷಿಕೋತ್ಸವವನ್ನು ಫೆ.11ರಂದು ಸಂಜೆ 5 ಗಂಟೆಗೆ ಮಂಜಗುಣಿಯಲ್ಲಿ ಆಯೋಜಿಸಲಾಗಿದೆ.
ಶಾಸಕಿ ರೂಪಾಲಿ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಜಿಲ್ಲಾ ಕರ್ನಾಟಕ ಆರ್ಯ ಈಡಿಗ ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ಎಲ್. ನಾಯ್ಕ ವಾರ್ಷಿಕೋತ್ಸವ ಉದ್ಘಾಟಿಸಲಿದ್ದು, ಉ.ಕ. ಜಿಲ್ಲಾ ಮೀನು ಮಾರಾಟ ಸಹಕಾರಿ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ವೇದಿಕೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಡಾ. ರಾಮಕೃಷ್ಣ ಗುಂದಿ, ಉ.ಕ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ, ಹೊನ್ನೆಬೈಲ್ ಗ್ರಾ.ಪಂ. ಅಧ್ಯಕ್ಷ ಮಾದೇವ ಗುನಗಾ ಪಾಲ್ಗೊಳ್ಳಲಿದ್ದಾರೆ.
ಪ್ರತಿಭಾ ಪುರಸ್ಕಾರ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ರೋಶನ್ ಎಸ್. ಗೌಡ, ಸ್ರುಜನ್ ಸೋಮೇಶ್ವರ ಹರಿಕಾಂತ, ಈಶಾನ್ಯ ವೀರಭದ್ರ ಧಾರವಾಡಕರ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಂಜಗುಣಿಯ ಪ್ರೀತಮ್ ದಯಾನಂದ ನಾಯ್ಕ, ನಿಶಿತಾ ನೀಲಕಂಠ ಕುಡ್ತಳಕರ, ಸ್ಪರ್ಷ ಪ್ರಕಾಶ ತಾಂಡೇಲ ಹಾಗೂ ಶ್ರೀ ಗುರುದಾಸ ಪ್ರೌಢಶಾಲೆಯ 10ನೇ ತರಗತಿಯ ಸ್ವಾತಿ ರಾಜು ನಾಯ್ಕ, ಸಿಂಚನಾ ಮಂಜುನಾಥ ನಾಯ್ಕ, ಸಂಜನಾ ರಾಮಚಂದ್ರ ನಾಯ್ಕ ಇವರಿಗೆ ಪುರಸ್ಕಾರ ನೀಡಲಾಗುವುದು.
ಇದೇ ಸಂದರ್ಭದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಮೇಲಿನ ಮಂಜಗುಣಿಯ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ನಂತರ ವಿದ್ಯಾರ್ಥಿಗಳಿಂದ ಹಾಗೂ ಹೊರ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಪುನೀತ ರಾಜಕುಮಾರ ಅಭಿಮಾನಿ ಬಳಗದ ಗೌರವಾಧ್ಯಕ್ಷ ಶ್ರೀಪಾದ ಟಿ. ನಾಯ್ಕ, ಅಧ್ಯಕ್ಷ ನಾಗರಾಜ ಮಂಜಗುಣಿ, ಕಾರ್ಯದರ್ಶಿ ಪ್ರಶಾಂತ ವಿ. ನಾಯ್ಕ, ಎಸ್.ಡಿ.ಎಂ.ಸಿ. ಅಧ್ಯಕ್ಷ ಸಂತೋಷ ವಿ. ನಾಯ್ಕ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.