• Slide
  Slide
  Slide
  previous arrow
  next arrow
 • ರಸ್ತೆ ಮಾಡಿ,‌ ಮತ ಕೇಳಿ: ದಬ್ಗಾರ ಗ್ರಾಮದಲ್ಲಿ ಫಲಕ ಅಳವಡಿಕೆ

  300x250 AD

  ಜೊಯಿಡಾ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ದಬ್ಗಾರ ಗ್ರಾಮದ ನಿವಾಸಿಗಳು ಕಳೆದ ಹಲವಾರು ವರ್ಷಗಳಿಂದ ಸರ್ವ ಋತು ರಸ್ತೆ ಆಗದ ಕಾರಣ ರಸ್ತೆ ಮಾಡಿ ಮತ ಕೇಳಿ, ರಸ್ತೆ ಮಾಡುವವರೆಗೆ ಮತದಾನ ಬಹಿಷ್ಕಾರ ಎಂಬ ಬೋರ್ಡ್ ಒಂದನ್ನು ಹಾಕಿದ್ದಾರೆ.
  ಕಳೆದ ಎರಡು ವರ್ಷಗಳ ಹಿಂದೆ ದಬ್ಗಾರ ರಸ್ತೆಗೆ 20 ಲಕ್ಷ ಅನುದಾನ ಜಿ.ಪಂ.ಇಲಾಕೆಯಿಂದ ಶಾಸಕರ ವಿಶೇಷ ಅನುದಾನದಲ್ಲಿ ಬಿಡುಗಡೆಯಾಗಿತ್ತು, ಆದರೆ ಈ ರಸ್ತೆಗೆ 6 ಲಕ್ಷ ರೂ ವೆಚ್ಚದಲ್ಲಿ ಕಡಿಕರಣ ಮಾಡಿ ಬಿಡಲಾಗಿದ್ದು, ಡಾಂಬರಿಕರಣ ಮಾಡದೆ ರಸ್ತೆ ಕೆಲಸ ಅರ್ಧಕ್ಕೆ ನಿಲ್ಲಿಸಲಾಗಿದ್ದು, ಕೇಳಿದರೆ ಅರಣ್ಯ ಇಲಾಖೆ ಸಮಸ್ಯೆ ಇದೆ ಎಂದು ಅಧಿಕಾರಿಗಳು ಹೇಳುತ್ತಾರೆ.
  ಕಳೆದ ಹತ್ತಾರು ವರ್ಷಗಳಿಂದ ರಸ್ತೆ ಕೆಲಸ ಆಗುತ್ತದೆ ಎಂದು ದಬ್ಗಾರ ಗ್ರಾಮದ ಜನರು ಬಹಳಷ್ಟು ನಿರೀಕ್ಷೆಯಲ್ಲಿ ಇದ್ದರು, ಸಧ್ಯ ಕೆಲಸ ಆಗದ ಕಾರಣ ಜನರ ಆಸೆಗೆ ಆಸೆಯಾಗಿಯೇ ಉಳಿದಿದೆ.ಹತ್ತಾರು ಕುಟುಂಬಗಳು ಈ ಗ್ರಾಮದಲ್ಲಿ ಇದ್ದು ಈ ಹಿಂದಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮೂಲ ಮನೆಯು ಇಲ್ಲಿದೆ ಎಂಬುದು ದುರದೃಷ್ಟಕರ ಸಂಗತಿ. ಜೊಯಿಡಾ ತಾಲೂಕಿನಲ್ಲಿ ಜನರಿಗೆ ಒಂದು ನ್ಯಾಯ ಶಾಸಕರ ಆಪ್ತರಿಗೆ , ಜನಪ್ರತಿನಿಧಿಗಳಿಗೆ, ಗುತ್ತಿಗೆದಾರರಿಗೆ ಒಂದು ನ್ಯಾಯ ಎಂಬತೆ ಆಗಿದೆ ಎನ್ನುವುದು ಜನರ ಮಾತಾಗಿದೆ. ತಾಲೂಕಿನಲ್ಲಿ ವನ್ಯಜೀವಿ ವಲಯದಲ್ಲಿ ಯಾವುದೇ ಹೊಸ ರಸ್ತೆ ಮಾಡಲು ಅವಕಾಶವಿಲ್ಲ, ಅಭಿವೃದ್ಧಿ ಕೆಲಸಗಳು ಆಗಬಾರದು ಎಂಬುದು ಅರಣ್ಯ ಇಲಾಖೆಯ ಕಾನೂನು. ಆದರೆ ಜೊಯಿಡಾ ಭಾಗದಲ್ಲಿ ಶಾಸಕರ ಆಪ್ತರ ಹೊಸ ರಸ್ತೆ ಕೆಲಸಗಳಿಗೆ ಅರಣ್ಯ ಇಲಾಕೆಯ ಯಾವುದೇ ಕಾನೂನು ಅಡ್ಡಿಯಾಗುವುದಿಲ್ಲ, ಇಲ್ಲಿ ಬರವರಿಗೆ ಒಂದು ನ್ಯಾಯ ಶ್ರೀಮಂತರಿಗೆ ಒಂದು ನ್ಯಾಯ ಎಂಬತಾಗಿದೆ.

  ಅರಣ್ಯ ಇಲಾಖೆ ಅಧಿಕಾರಿಗಳ ಕಣ್ಣಾಮುಚ್ಚಾಲೆ
  ಜೊಯಿಡಾ ತಾಲೂಕಿನಲ್ಲಿ 5 ವನ್ಯಜೀವಿ ಪ್ರದೇಶದಲ್ಲಿ ಗುಂದ ,ಕುಂಬಾರವಾಡಾ, ಅಣಶಿ, ಫಣಸೋಲಿ, ಕ್ಯಾಸಲ್‌ರಾಕ್ ಊರುಗಳಿಗೆ ವನ್ಯಜೀವಿ ವಲಯವಾದ ನಂತರ ಈ ಭಾಗದಲ್ಲಿ ಹೊಸ ರಸ್ತೆಗಳು ಬೇಕಾದಷ್ಟು ಆಗಿವೆ. ಆ ರಸ್ತೆಗಳೆಲ್ಲ ಬಹುತೇಕ ಶ್ರೀಮಂತರ ರಸ್ತೆಗಳು ಎಂದರೆ ತಪ್ಪಾಗಲಾರದು. ಜೊಯಿಡಾ ಶಾಸಕ ಆರ್.ವಿ.ದೇಶಪಾಂಡೆ ಅವರು ಸಹಿತ ಈ ವಿಚಾರದಲ್ಲಿ ಸುಮ್ಮನಾಗಿರುವುದು ಜನರಿಗೆ ನ್ಯಾಯ ಕೊಡಿಸುವವರು ಯಾರು? ಎಂಬಂತಾಗಿದೆ. ಅಭಿವೃದ್ಧಿಯ ಹರಿಕಾರ ಎಂದೇ ಹೆಸರು ಪಡೆದು ಈ ಬಾರಿ ಉತ್ತಮ ಶಾಸಕ ಪ್ರಶಸ್ತಿಯನ್ನು ಪಡೆದ ದೇಶಪಾಂಡೆ ಅವರ ಕ್ಷೇತ್ರದಲ್ಲಿ ಅವರ ಹಿಂಬಾಲಕರು, ಅವರ ಪಕ್ಷದ ಕಾರ್ಯಕರ್ತರುಗಳ ಹೊಸ ರಸ್ತೆ ಕೆಲಸ ನಡೆಯುವಾಗ ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಣ್ಮುಚ್ಚಿ ಕುಳಿತು, ಬಡವರ ರಸ್ತೆ ಕೆಲಸಗಳು ನಡೆಯಬೇಕಾದರೆ ರಸ್ತೆ ಕೆಲಸ ನಿಲ್ಲಿಸುತ್ತಿರುವುದು ಬೇಸರದ ಸಂಗತಿಯಾಗಿದೆ.
  ಅರಣ್ಯ ಇಲಾಖೆಯ ಕಾನೂನಿನ ಪ್ರಕಾರ ವನ್ಯಜೀವಿ ವಲಯದಲ್ಲಿ ಯಾವುದೇ ಹೊಸ ರಸ್ತೆ ಆಗಬಾರದು. ಇದ್ದ ರಸ್ತೆಗಳನ್ನು ಅಭಿವೃದ್ಧಿ ಮಾಡಬಹುದು, ಆದರೆ ಕಳೆದ 5 ವರ್ಷಗಳಲ್ಲಿ ವನ್ಯಜೀವಿ ವಲಯದಲ್ಲಿ ಹೊಸ ರಸ್ತೆಗಳು ಆಗಿಲ್ಲವೇ? ಆಗಿದ್ದರೂ ಅಧಿಕಾರಿಗಳು ಏಕೆ ಸುಮ್ಮನೆ ಕುಳಿತ್ತಿದ್ದಾರೆ, ಆದ ಹೊಸ ರಸ್ತೆಗಳಲ್ಲವೂ ರಾಜಕೀಯ ನಾಯಕರ ಹಿಂಬಾಲಕರದ್ದು ಎಂಬುದು ಜನ ಸಾಮನ್ಯರಿಗೆ ತಿಳಿದ ಸಂಗತಿ. ಅರಣ್ಯ ಇಲಾಕೆ ಅಧಿಕಾರಿಗಳು ಎಲ್ಲರಿಗೂ ಒಂದೇ ರೀತಿಯ ನ್ಯಾಯ ನೀಡಲಿ, ಪ್ರತಿಯೊಬ್ಬರು ಭಾರತದ ಪ್ರಜೆಗೆಳು ಎಂಬುದನ್ನು ನೆನಪಿಟ್ಟುಕೊಳ್ಳಲಿ.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top