• Slide
    Slide
    Slide
    previous arrow
    next arrow
  • ಜಾನಪದ ನೃತ್ಯ ಸ್ಪರ್ಧೆ:ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತೃತೀಯ

    300x250 AD

    ಅಂಕೋಲಾ: ಡಾ.ಪ್ರಭಾಕರ ಕೋರೆಯವರ ಅಮೃತ ಮಹೋತ್ಸವ ನಿಮಿತ್ತ ಬೆಳಗಾವಿಯಲ್ಲಿ ಆಯೋಜಿಸಲಾಗಿದ್ದ ಅಂತರ ಕೆ.ಎಲ್.ಇ. ಸಂಸ್ಥೆಯ ಜಾನಪದ ನೃತ್ಯ ಸ್ಪರ್ಧೆಯಲ್ಲಿ ತಾಲೂಕಿನ ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳು ತೃತೀಯ ಸ್ಥಾನಗಳಿಸಿ ಸಾಧನೆ ಮಾಡಿದ್ದಾರೆ.
    ಚುಟುಕುಬ್ರಹ್ಮ ದಿನಕರ ದೇಸಾಯಿಯವರ ಒಂದು ಕಡೆ ಕಡಲು ಹಾಡಿಗೆ ಜಾನಪದ ಸುಗ್ಗಿ ಹಾಗೂ ಹಾಲಕ್ಕಿ ಸಾಂಸ್ಕೃತಿಕ ವೈಭವವನ್ನು ಸೇರಿಸಿ ಮಾಡಿದ ನೃತ್ಯ ಬೆಳಗಾವಿಯಲ್ಲಿ ಸಾವಿರಾರು ಜನರ ಮುಂದೆ ಜನಮನಗೆದ್ದ ಪ್ರಶಂಸೆಗಳಿಸಿತು. ನೃತ್ಯದಲ್ಲಿ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಉನ್ನತಿ ನಾಯಕ, ಪ್ರಿಯಾ ನಾಯ್ಕ, ಸಹನಾ ನಾಯ್ಕ, ನಮೃತಾ ಮಹಾಲೆ, ಸಂದ್ಯ ನಾಯಕ, ಬೃಂದಾ ಗಾವಡಿ, ರಕ್ಷಿತಾ ನಾಯ್ಕ, ಸಹನಾ ಎಸ್ ನಾಯ್ಕ, ಪ್ರಿಯಾ ಲಾಂಜೇಕರ, ಭಾರತಿ ಪಟಗಾರ ಪಾಲ್ಗೊಂಡಿದ್ದರು. ಉಪನ್ಯಾಸಕರಾದ ಪೂರ್ವಿ ಹಳ್ಗೇಕರ ಮಾರ್ಗದರ್ಶನ ಮಾಡಿದ್ದರು.
    ವಿದ್ಯಾರ್ಥಿಗಳ ಸಾಧನೆಗೆ ಅಂಕೋಲಾ ಕೆ.ಎಲ್.ಇ. ಸಂಸ್ಥೆಯ ಸ್ಥಳೀಯ ಕಾರ್ಯದರ್ಶಿ ಡಾ. ಡಿ.ಎಲ್.ಭಟ್ಕಳ, ಸಂಯೋಜಕ ಆರ್.ನಟರಾಜ, ಸದಸ್ಯೆ ಡಾ.ಮೀನಲ್ ನಾರ್ವೇಕರ ಹಾಗೂ ವಿವಿಧ ಅಂಗಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top