• Slide
    Slide
    Slide
    previous arrow
    next arrow
  • ರಾಜ್ಯ ಮಟ್ಟದ ಶಿಕ್ಷಣ ಸೇವಾ ರತ್ನ ಪ್ರಶಸ್ತಿಗೆ ಎಮ್.ಜಿ.ನಾಯ್ಕ ಆಯ್ಕೆ

    300x250 AD

    ಸಿದ್ದಾಪುರ: ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ಮೈಸೂರು ಇವರು ರಾಜ್ಯದ ನಿಕಟ ಪೂರ್ವ ಸಿ.ಆರ್.ಪಿ ಗಳಿಗೆ ನೀಡುವ ರಾಜ್ಯ ಮಟ್ಟದ ಶಿಕ್ಷಣ ಸೇವಾ ರತ್ನ ಪ್ರಶಸ್ತಿಗೆ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಾಧ್ಯಾಪಕ  ಮಂಜುನಾಥ ಜಿ.ನಾಯ್ಕ (ಎಮ್.ಜಿ.ನಾಯ್ಕ) ಆಯ್ಕೆಯಾಗಿದ್ದಾರೆ. ಸರಕಾರಿ ಶಾಲಾ ಬಡವಿದ್ಯಾರ್ಥಿಗಳ ಬಗ್ಗೆ ಅವರಿಗಿರುವ ಸಾಮಾಜಿಕ ಕಾಳಜಿ, ಬದ್ಧತೆಯನ್ನು ಅರಸಿಬಂದ ಪ್ರಶಸ್ತಿಯಾಗಿದೆ. ಅವರು ಬೆಂಗಳೂರಿನ ಯಲಹಂಕದಲ್ಲಿ ರಾಜ್ಯಾಧ್ಯಕ್ಷ ಪಿ. ಮಹೇಶ್ ಅವರ ನೇತೃತ್ವದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು. 
    ಎಮ್.ಜಿ.ನಾಯ್ಕ ಇವರು ಈ ಹಿಂದೆ ಬಿಳಗಿ ಕ್ಲಸ್ಟರ್ ಸಂಪನ್ಮೂಲ ಶಿಕ್ಷಕರಾಗಿದ್ದಾಗ ಎಲ್ಲಾ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳ ಪ್ರೀತಿ ವಿಶ್ವಾಸ ಗೆದ್ದಿದ್ದಲ್ಲದೆ ಕರೋನ ಗೃಹಬಂಧನ ಸಂಕಷ್ಟದ ಸಮಯದಲ್ಲಿ ಎಲ್ಲಾ ಶಾಲೆಗಳ ಶಿಕ್ಷಕರನ್ನು ಆನ್ಲೈನ್ ಮೂಲಕ ಸಂಪರ್ಕಿಸಿ ಮನೆಯಿಂದಲೇ ಶಿಕ್ಷಕರಿಗೆ ಕಲಿಕೋಪಕರಣಗಳ ತಯಾರಿಕಾ ಸ್ಫರ್ದೆ ಏರ್ಪಡಿಸಿದ ಜಿಲ್ಲೆಯ ಏಕೈಕ ಕ್ಲಸ್ಟರ್ ಎಂದು ಹೆಸರಾಗಿದ್ದರು. ಬಿಳಗಿ ಕ್ಲಸ್ಟರ್‌ನ ಯೂಟ್ಯೂಬ್ ಚಾನೆಲ್ ತೆರೆದು ಅದರಲ್ಲಿ ತಮ್ಮ ಕ್ಲಸ್ಟರ್ ಶಿಕ್ಷಕರು ತಯಾರಿಸಿದ ಕಲಿಕಾ ಸಾಮಗ್ರಿಗಳ ವಿಡಿಯೋಗಳನ್ನು ಅಪ್ಲೋಡ್ ಮಾಡಿ ಎಲ್ಲರೂ ವೀಕ್ಷಿಸುವಂತೆ ಮಾಡಿದ್ದಾರೆ. ನಲಿಕಲಿ ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ ಸಾವಿರಾರು ಶಿಕ್ಷಕರಿಗೆ ತರಬೇತಿಯನ್ನು ನೀಡಿರುತ್ತಾರೆ.  ಇತ್ತೀಚೆಗೆ ಅವರು ತಮ್ಮದೇ ನೇತೃತ್ವದಲ್ಲಿ ತಾಲೂಕಿನ ಆಸಕ್ತ ಶಿಕ್ಷಕರ ನೆರವಿನಿಂದ ‘ಧ್ವನಿ’ ಹೆಸರಿನ ಸ್ವಯಂ ಸೇವಕ ಸಂಘ ತೆರೆದು ತಾಲೂಕಿನ ಅನಾಥ, ಏಕಪಾಲಕ,  ಕಡು ಬಡತನದಿಂದ ಬಂದ ವಿದ್ಯಾರ್ಥಿಗಳಿಗೆ ಸ್ಕೂಲ್ ಬ್ಯಾಗ್,  ಛತ್ರಿ, ಮಾಸಿಕ ಧನಸಹಾಯ ಇತ್ಯಾದಿ ಹತ್ತಾರು ಮಾನವೀಯ ಕಾಯಕದಲ್ಲಿ ತೊಡಗಿದ್ದಾರೆ.
    ಇವರ ಮಾನವೀಯ, ಶೈಕ್ಷಣಿಕ ಕಾಳಜಿಯನ್ನು ಗುರುತಿಸಿ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ತು ರಾಜ್ಯ ಮಟ್ಟದ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿರುವುದು ಪ್ರಶಸ್ತಿಯ ಗರಿಮೆಯನ್ನು ಹೆಚ್ಚಿಸಿದೆ. ಪ್ರಶಸ್ತಿ ಪುರಸ್ಕೃತ ಎಮ್.ಜಿ. ನಾಯ್ಕ ಇವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಸ್ವಾಮಿ, ಕ್ಷೇತ್ರ ಸಮನ್ವಯಾಧಿಕಾರಿ ಚೈತನ್ಯ ಕುಮಾರ್,  ಶಿಕ್ಷಕರ ಪ್ರತಿಭಾ ಪರಿಷತ್ತಿನ ರಾಜ್ಯ ಸಹಕಾರ ಸಮಿತಿಯ ಸದಸ್ಯ ಗೋಪಾಲ ನಾಯ್ಕ,  ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಸತೀಶ ಹೆಗಡೆ, ಮಾಜಿ ಅಧ್ಯಕ್ಷ ಎಮ್.ಕೆ. ನಾಯ್ಕ ಕಡಕೇರಿ, ಶಿಕ್ಷಕರ ಪ್ರತಿಭಾ ಪರಿಷತ್ತಿನ ತಾಲೂಕು ಅಧ್ಯಕ್ಷೆ ರೀಟಾ ಡಿಸೋಜ,  ಹಾಗೂ ನೂರಾರು ಶಿಕ್ಷಕರು,, ಎಸ್.ಡಿ.ಎಮ್.ಸಿ  ಅಧ್ಯಕ್ಷರಾದ ನಾಗರಾಜ ಅಂಬಿಗ, ಸದಸ್ಯರು, ಪಾಲಕರು ಅಭಿನಂದಿಸಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top