ಹೊನ್ನಾವರ: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಬ್ರಾಹ್ಮಣ ಸಮಾಜದವರ ಕುರಿತು ಇತ್ತೀಚಿನ ನೀಡಿದ ಹೇಳಿಕೆ ಖಂಡಿಸಿ, ಬ್ರಾಹ್ಮಣ ಸಮಾಜದ ಮುಖಂಡರು ತಹಶೀಲ್ದಾರ ಮೂಲಕ ರಾಜ್ಯಪಾಲರಿಗೆ ಗುರುವಾರ ಮನವಿ ಸಲ್ಲಿಸಿದರು.
ಬ್ರಾಹ್ಮಣ ಸಮಾಜ ಎಲ್ಲಾ ಸಮಾಜದವರೊಂದಿಗೆ ಅನ್ಯೋನ್ಯವಾಗಿದ್ದು, ಬೇರೆ ಸಮಾಜದ ಒಳಿತನ್ನು ಬಯಸುವ ಜೊತೆ, ದೇಶದ ಒಳಿತಾಗಿ ಪ್ರತಿದಿನವು ಪ್ರಾರ್ಥಿಸುತ್ತಿದೆ. ಆದರೆ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿಯವರು ರಾಜಕೀಯ ಕಾರಣಕ್ಕಾಗಿ ಬ್ರಾಹ್ಮಣ ಸಮಾಜದವರನ್ನು ದೂಷಿಸಿರುವದನ್ನು ಖಂಡಿಸುತ್ತೇವೆ ಎಂದು ಮನವಿಯಲ್ಲಿ ಉಲ್ಲೆಖಿಸಲಾಗಿದೆ.
ಗ್ರೇಡ್ 2 ತಹಶೀಲ್ದಾರ ಉಷಾ ಪಾವಸ್ಕರ್ ಮನವಿ ಸ್ವೀಕರಿಸಿದರು. ಈ ವೇಳೆ ಸಮಾಜದ ಪ್ರಮುಖರಾದ ಎನ್.ಎಸ್.ಹೆಗಡೆ ಕರ್ಕಿ, ವಕೀಲರಾದ ಎಸ್.ಜಿ.ಹೆಗಡೆ, ಎಂ.ಎಸ್.ಹೆಗಡೆ ಕಣ್ಣಿ, ಎಚ್.ಆರ್.ಗಣೇಶ, ಎಂ.ಆರ್.ಹೆಗಡೆ, ಎನ್.ಎಸ್.ಹೆಗಡೆ, ಉಮೇಶ ಹೆಗಡೆ, ನಾರಾಯಣ ಹೆಗಡೆ, ಎಲ್.ಎ.ಭಟ್, ಗೊವಿಂದ ಭಟ್ ಅಗ್ನಿ ಮತ್ತಿತರರು ಉಪಸ್ಥಿತರಿದ್ದರು