ಹೊನ್ನಾವರ: ಪಟ್ಟಣದ ಪ್ರಭಾತನಗರದಲ್ಲಿರುವ ಸೇಂಟ್ ಅಂತೋನಿ ಮೈದಾನದಲ್ಲಿ ಫೆ.17ರಿಂದ 3 ದಿನಗಳ ಕಾಲ ಹೊನ್ನಾವರ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಿದ್ದೇವೆ ಎಂದು ಸಮಿತಿಯ ಪ್ರಮುಖರಾದ ಗಣಪತಿ ಮೇಸ್ತ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನ ಪ್ರಮುಖರು ಸೇರಿ ಪಕ್ಷಾತೀತವಾಗಿ ಸಮಿತಿ ರಚನೆ ಮಾಡಿದ್ದೇವೆ. ಈ ಕಾರ್ಯಕ್ರಮ ಆಯೋಜನೆಯಲ್ಲಿ ಎಲ್ಲಾ ಪಕ್ಷದ ಮುಖಂಡರು ಇದ್ದಾರೆ. ಯುವ ಮುಖಂಡ ಸಂದೇಶ ಶೆಟ್ಟಿ ಸಮಿತಿಯ ಅಧ್ಯಕ್ಷರಾಗಿದ್ದು, ಪ.ಪಂ. ಮಾಜಿ ಅಧ್ಯಕ್ಷ ಶಿವರಾಜ ಮೇಸ್ತ ಗೌರವ ಅಧ್ಯಕ್ಷರಾಗಿದ್ದಾರೆ ಎಂದರು.
ಪ್ರತಿದಿನ ಸಂಜೆ 6 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದ್ದು, ಸಂಜೆ 6 ರಿಂದ 8 ಗಂಟೆಯವರೆಗೆ ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಲಿದ್ದು, 8 ಗಂಟೆಯಿಂದ 9 ಗಂಟೆಯವರೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, 9 ಗಂಟೆಯಿಂದ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಗಾಯಕ- ಗಾಯಕಿಯರು, ಚಲನಚಿತ್ರ ನಟ- ನಟಿಯರು, ಭರತನಾಟ್ಯ, ಜಾದು ಪ್ರದರ್ಶನ ಇನ್ನಿತರ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯುತ್ತದೆ. ಅಮ್ಯುಸಮೆಂಟ್ ಪಾರ್ಕ ಬರಲಿದ್ದು, ಸುಮಾರು 150 ವೈವಿಧ್ಯಮಯ ಸ್ವಾಲ್‌ಗಳು ಬರಲಿವೆ. ಈ ಅದ್ಧೂರಿ ಕಾರ್ಯಕ್ರಮಕ್ಕೆ ಹೊನ್ನಾವರ ಜನತೆಯ ಹಾಗೂ ಎಲ್ಲಾ ಸಂಘ- ಸಂಸ್ಥೆಗಳ ಸಹಕಾರವನ್ನು ಕೋರುತ್ತಿದ್ದೇವೆ ಎಂದು ತಿಳಿಸಿದರು.
ಫೆ.17ರಂದು ಕನ್ನಡದ ಖ್ಯಾತ ಗಾಯಕ ಅಲೋಕ್ ಬಾಬು (ಆಲ್ ಓಕೆ) ಇವರ ತಂಡದಿOದ ಗಾಯನ, 18ರಂದು ಲಿಟ್ಲ್ ಕರಾವಳಿ ಸ್ಪರ್ಧೆ ಹಾಗೂ ಮಂಗಳೂರಿನ ಖ್ಯಾತ ತಂಡದವರಿOದ ಡಾನ್ಸ್ ಕಾರ್ಯಕ್ರಮ ಹಾಗೂ ವಿಶೇಷ ಆಕರ್ಷಣೆ ಜೀ ಕನ್ನಡದ ನಾಗಿಣಿ 2 ಧಾರಾವಾಹಿ ಖ್ಯಾತಿಯ ನಮೃತಾ ಗೌಡ ಆಗಮಿಸಲಿದ್ದಾರೆ. 19ರಂದು ಜೀ ಕನ್ನಡದ ಸರಿಗಮಪ ಖ್ಯಾತಿಯ ಕಂಬದ ರಂಗಯ್ಯ, ಅಶ್ವಿನ ಶರ್ಮಾ, ವಸುಶ್ರೀ ಹಳೇಮನೆ ಹಾಗೂ ಕನ್ನಡ ಹೋಗಿಲೆ ವಿನ್ನರ್ ಕಾಸಿಮ್ ಅಲಿ ಹಾಗೂ ಖ್ಯಾತ ಗಾಯಕಿ ಐಶ್ವರ್ಯ ರಂಗರಾಜನ್ ಹಾಗೂ ದಾಮೋದರ ನಾಯ್ಕ ಇನ್ನಿತರ ಕಲಾವಿದರಿಂದ ಬೃಹತ್ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಪ್ರತಿಭೆಗಳು ತಮ್ಮ ಹೆಸರನ್ನು ಫೆ.15ರೊಳಗೆ ಸಂಘಟಕರ ಮೂಲಕ ನೊಂದಾಯಿಸಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಸಮಿತಿಯ ಡಾ.ಸಭಾಹಿತ್, ಮನುಷ್ಯ ಸಂಬOಧ ಹಳಸುತ್ತಿರುವ ಸಂದರ್ಭದಲ್ಲಿ ಜನರನ್ನು ಒಗ್ಗಟ್ಟಾಗಿ ಸೇರಿಸಿಕೊಂಡು ಇಂತಹ ಮನರಂಜನಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಬೇಕೆನ್ನುವುದು ಸಮಿತಿಯ ಆಶಯವಾಗಿದೆ ಎಂದರು.
ಸಮಿತಿಯ ಉಪಾಧ್ಯಕ್ಷೆ ಅನಿತಾ ಶೇಟ್ ಮಾತನಾಡಿ, ನಮ್ಮಲ್ಲಿನ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಸಿಗುತ್ತಿಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳು ಕಡಿಮೆ ಆಗುತ್ತಿದೆ. ಈ ಹಿನ್ನಲೆ ಈ ಸಂಭ್ರಮ ಆಯೋಜನೆಯಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಉಪಾಧ್ಯಕ್ಷ ಫಾರೂಕ್, ಕಿರಣ ಮೇಸ್ತ, ವಿನಾಯಕ ಶೆಟ್ಟಿ, ಶ್ರೀರಾಮ್ ಹೊನ್ನಾವರ, ಗಿರೀಶ್ ಮೇಸ್ತ, ಪುಷ್ಪಾ ಮಹೇಶ್, ನಾಗರತ್ನ ಶೇಟ್ ಮತ್ತಿತರಿದ್ದರು.
ಫೆ.17ರಿಂದ ಹೊನ್ನಾವರ ಸಂಭ್ರಮ; ಮೂರು ದಿನಗಳ ಮನರಂಜನೆಯ ರಸದೌತಣ
