ಶಿರಸಿ: ಸಿದ್ದಾಪುರ ತಾಲ್ಲೂಕಿನ ಶಿರಳಗಿಯಲ್ಲಿರುವ ಶ್ರೀಚೈತನ್ಯ ರಾಜಾರಾಮ ಕ್ಷೇತ್ರ ಆಶ್ರಮದ ಸಂತ ಬ್ರಹ್ಮಾನಂದ ಭಾರತಿ ಸ್ವಾಮೀಜಿಯವರು ಫೆ.13ರಿಂದ 17ರವರಗೆ ಇಲ್ಲಿಯ ಯೋಗಮಂದಿರದಲ್ಲಿ ಪ್ರವಚನ- ಸತ್ಸಂಗ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಭಾರತೀಯ ಅಧ್ಯಾತ್ಮ ಸಾಧನೆಯ ಶ್ರೇಷ್ಠ ಸಂತರಲ್ಲೊಬ್ಬರಾದ ರಮಣ ಮಹರ್ಷಿಗಳ ಉಪದೇಶ ಸಾರ ಎಂಬ ಮಹತ್ವದ ಕೃತಿಯ ಕುರಿತಾಗಿ ಈ ಪ್ರವಚನ ಸರಣಿ ನಡೆಯಲಿದೆ. ಮಹರ್ಷಿಗಳ ಬೋಧನೆಗಳನ್ನು ಆಧರಿಸಿದ ಉಪದೇಶ ಸಾರ ಗ್ರಂಥವು, ಭಾರತದ ಅಧ್ಯಾತ್ಮ ಪರಂಪರೆಯನ್ನು ಪ್ರತಿನಿಧಿಸುವ ಶ್ರೇಷ್ಠ ಗ್ರಂಥಗಳಲ್ಲೊoದು ಎಂದು ಪರಿಗಣಿತವಾಗಿದೆ. ಆ ಕೃತಿಯ ಹೂರಣವನ್ನು ಉಪಾಸಕರಿಗೆ ಹಂಚುವ ಆಶಯದೊಂದಿಗೆ ಬ್ರಹ್ಮಾನಂದ ಭಾರತಿ ಸ್ವಾಮೀಜಿಯವರು ವಾರಗಳ ಕಾಲ ಪ್ರತಿದಿನ ಸಂಜೆ 6 ಗಂಟೆಯಿoದ 7.30ಗಂಟೆಯವರೆಗೆ ಪ್ರವಚನ ನೀಡಲಿದ್ದಾರೆ. ಇದರ ಸಂಪೂರ್ಣ ಲಾಭವನ್ನು ಸಾರ್ವಜನಿಕರು ಪಡೆಯಬೇಕೆಂದು ಆಯೋಜಕರು ವಿನಂತಿಸಿದ್ದಾರೆ.
ಶಿರಸಿಯಲ್ಲಿ ಫೆ.13ರಿಂದ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿಯವರ ಸತ್ಸಂಗ
