ಶಿರಸಿ: ರಾಜ್ಯ ಸರಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ಪೋಲಿಸ್ ಸ್ಟುಡೆಂಟ್ ಕೆಡೆಟ್ (SPC) ಯೋಜನೆ ತಾಲೂಕಿನಇಸಳೂರಿನ ಸರಕಾರಿ ಪ್ರೌಢ ಶಾಲೆ ಘಟಕದ ವಿದ್ಯಾರ್ಥಿಗಳ ಶಿಬಿರ ಫೆ.9 ರಂದು ಶಿರಸಿ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಜರುಗಿತು. ಆರಕ್ಷಕ ಇಲಾಖೆಯ ಬಂದಿಖಾನೆ, ಕಛೇರಿ ನಿರ್ವಹಣೆ, ಗೌರವರಕ್ಷೆ, ಅಪರಾಧ ವಿಭಾಗಗಳು, ಕಾರ್ಯನಿರ್ವಹಣೆ ಕುರಿತು ಶಿಬಿರಾರ್ಥಿಗಳಿಗೆ ಸಂಪೂರ್ಣ ಮಾಹಿತಿ ನೀಡಲಾಯಿತು. ಪೋಲಿಸ ಇಲಾಖೆ ಮತ್ತು ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಡೆದ ಈ ಶಿಬಿರದಲ್ಲಿ 47 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. , ಪೋಲಿಸ ಠಾಣಾಧಿಕಾರಿಗಳು, ಪ್ರತಾಪ, ಶಿವಪ್ರಕಾಶ, ನಾರಾಯಣ ಶಿರಾಲಿ, ಪ್ರದೀಪ ರೇವಣಕರ ನೇತೃತ್ವದಲ್ಲಿ ಶಿಬಿರ ಆಯೋಜಿಸಿದ್ದು, ರಮೇಶ ಮುಚ್ಚಂಡಿ ಸುದೀರ್ಘ ಮಾಹಿತಿಯನ್ನು ಮಕ್ಕಳಿಗೆ ಮನ ಮುಟ್ಟುವಂತೆ ವಿವರಿಸಿದರು. ವಿದ್ಯಾರ್ಥಿಗಳ ಕಾರ್ಯಕ್ರಮಾಧಿಕಾರಿ ದೈಹಿಕ ಶಿಕ್ಷಣ ಶಿಕ್ಷಕ ಬಿ.ವಿ.ಗಣೇಶ ಹಾಜರಿದ್ದರು.