• Slide
    Slide
    Slide
    previous arrow
    next arrow
  • ದಾಂಡೇಲಿ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಆರ್.ಜಿ. ಹೆಗಡೆ ಆಯ್ಕೆ

    300x250 AD

    ದಾಂಡೇಲಿ: ತಾಲೂಕು ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿ, ಅಂಕಣಕಾರ, ಶಿಕ್ಷಣ ತಜ್ಞ ಹಾಗೂ ಬಂಗೂರನಗರ ಪದವಿ ಕಾಲೇಜಿನ ನಿವೃತ್ತ ಪ್ರಾಚಾರ್ಯ ಡಾ.ಆರ್.ಜಿ.ಹೆಗಡೆಯವರು ಆಯ್ಕೆಯಾಗಿದ್ದಾರೆ ಎಂದು ಕಸಾಪ ತಾಲೂಕು ಘಟಕದ ಅಧ್ಯಕ್ಷ ನಾರಾಯಣ ನಾಯ್ಕ ತಿಳಿಸಿದ್ದಾರೆ.
    ತಾಲೂಕು ಕಸಾಪ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಈ ಬಗ್ಗೆ ಕಸಾಪ ಜಿಲ್ಲಾ ಅಧ್ಯಕ್ಷ ಬಿ.ಎನ್.ವಾಸರೆಯವರ ಸಮ್ಮತಿಯನ್ನೂ ಪಡೆಯಲಾಯಿತು. ಸಭೆಯಲ್ಲಿ ಕಸಾಪ ಜಿಲ್ಲಾ ಗೌರವ ಕೋಶಾಧ್ಯಕ್ಷ ಮುರ್ತುಜಾ ಹುಸೇನ ಆನೆಹೊಸೂರ, ದಾಂಡೇಲಿ ತಾಲೂಕು ಘಟಕದ ಗೌರವ ಕಾರ್ಯದರ್ಶಿಗಳಾದ ಗುರುಶಾಂತ ಜಡೆಹಿರೇಮಠ, ಪ್ರವೀಣ ನಾಯ್ಕ, ಗೌರವ ಕೋಶಾಧ್ಯಕ್ಷ ಶ್ರೀಮಂತ ಮದರಿ, ಪದಾಧಿಕಾರಿಗಳಾದ ಸುರೇಶ ಕಾಮತ್, ಎನ್.ಆರ್.ನಾಯ್ಕ, ನರೇಶ ನಾಯ್ಕ, ಹನುಮಂತ ಕಾರ್ಗಿ, ಸುರೇಶ ಪಾಲನಕರ, ವೆಂಕಮ್ಮ ಗಾಂವಕರ, ಕಲ್ಪನಾ ಪಾಟೀಲ, ರಂಜಾನ ಕಡಪಿ ಮುಂತಾದವರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top