ಸಿದ್ದಾಪುರ: ಧಾರ್ಮಿಕ ಕಾರ್ಯಕ್ರಮವನ್ನು ನಡೆಸುವುದರಿಂದ ನಮ್ಮ ಸಂಸ್ಕೃತಿ, ಸಂಸ್ಕಾರವನ್ನು ತಿಳಿದುಕೊಂಡoತಾಗುತ್ತದೆ. ಯಕ್ಷಗಾನ ನಮ್ಮ ನಾಡಿನ ಕಲೆಯಾಗಿದ್ದು, ಯಕ್ಷಗಾನ ಪ್ರದರ್ಶನವನ್ನು ನಡೆಸುವುದರ ಮೂಲಕ ಯಕ್ಷಗಾನ ಕಲೆ ಹಾಗೂ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಕೋಲಸಿರ್ಸಿ ಗ್ರಾಪಂ ಉಪಾಧ್ಯಕ್ಷ ಕೆ.ಆರ್.ವಿನಾಯಕ ಹೇಳಿದರು.
ತಾಲೂಕಿನ ಹಲಸಗಾರಿನ ಜಲನಾಗದೇವತೆ ಹಾಗೂ ಭೂತೇಶ್ವರ ದೇವಸ್ಥಾನದ 5ನೇ ವಾರ್ಷಿಕೋತ್ಸವದ ಅಂಗವಾಗಿ ಸನ್ಮಾನ ಹಾಗೂ ಯಕ್ಷಗಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಾರ್ಸಿಕಟ್ಟಾ ಗ್ರಾ.ಪಂ ಸದಸ್ಯ ಅನಂತ ಹೆಗಡೆ ಹೊಸಗದ್ದೆ ಅಧ್ಯಕ್ಷತೆ ವಹಿಸಿದ್ದರು. ಕೋಲಸಿರ್ಸಿ ಗ್ರಾ.ಪಂ ಅಧ್ಯಕ್ಷೆ ಮಮತಾ ಎಸ್.ಮಡಿವಾಳ, ಲಕ್ಷ್ಮಣ ಆರ್.ನಾಯ್ಕ ಹಲಸಗಾರ, ಸೀತಾರಾಮ ಹಲಸಗಾರ, ಚಿದಾನಂದ ಎ.ನಾಯ್ಕ, ಜಿ.ಬಿ.ನಾಯ್ಕ ಹಲಸಗಾರ, ದೇವಸ್ಥಾನದ ಅರ್ಚಕ ಅಣ್ಣಪ್ಪ ನಾಯ್ಕ ಇದ್ದರು.
ಇದೇ ಸಂದರ್ಭದಲ್ಲಿ ಹಳಿಯಾಳದ ಮಹಿಷಾಸುರ ಮರ್ಧಿನಿ ದೆವಾಲಯದ ಪ್ರಧಾನ ಅರ್ಚಕ ಮಂಜುನಾಥ ಬಿ.ಪೂಜಾರಿ ಹಳಿಯಾಳ, ಯಕ್ಷಗಾನ ಕಲಾವಿದ ಲಕ್ಷ್ಮಣ ಜಿ.ಬೇಡ್ಕಣಿ ಅವರನ್ನು ಹಾಗೂ ಯಕ್ಷಗಾನ ಪ್ರಾಯೋಜಕತ್ವ ವಹಿಸಿದ್ದ ಮಹಾಬಲೇಶ್ವರ ನಾಯ್ಕ ದಂಪತಿ ರಾಮಚಂದ್ರಹೊoಡ ಅವರನ್ನು ಸನ್ಮಾನಿಸಲಾಯಿತು. ರಮೇಶ ಹೆಗಡೆ ಹಾರ್ಸಿಮನೆ, ಲತೀಕಾ ನಾಯ್ಕ, ದೀಪ್ತಿ ಕಾರ್ಯಕ್ರಮ ನಿರ್ವಹಿಸಿದರು. ನಂತರ ಬೇಡ್ಕಣಿಯ ಮಾರುತಿ ಪ್ರಸಾದಿತ ಯಕ್ಷಗಾನ ಮಂಡಳಿ ಅವರಿಂದ ಸುದರ್ಶನ ವಿಜಯ ಹಾಗೂ ರಾಜಾರುದ್ರಕೋಪ ಯಕ್ಷಗಾನ ಪ್ರದರ್ಶನಗೊಂಡಿತು.