ದಾಂಡೇಲಿ: ಈ ವರ್ಷದ ದಾಂಡೇಲಿ ಪ್ರಿಮಿಯರ್ ಲೀಗ್ ಎರಡನೇ ಆವೃತ್ತಿಯ ಪಂದ್ಯಾವಳಿಗೆ ಆಯೋಜನಾ ಸಮಿತಿ ಸರ್ವ ಸನ್ನದ್ಧವಾಗಿದೆ.
ಕಳೆದ ವರ್ಷ 6 ತಂಡಗಳ ನಡುವೆ ಮೂರು ದಿನಗಳ ಸೆಣಸಾಟ ನಡೆದಿತ್ತಾದಾದರೂ, ಈ ವರ್ಷ 8 ತಂಡಗಳ ನಡುವೆ ಕ್ರಿಕೆಟ್ ಸಮರ ನಡೆಯಲಿದೆ. ಈಗಾಗಲೆ ಪಂದ್ಯಾವಳಿಗೆ ಸರ್ವ ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ಫೆ:08 ರಂದು ಡಿಪಿಎಲ್‌ನ ಎರಡನೇ ಆವೃತ್ತಿಯ ಕ್ರಿಕೆಟ್ ಪಂದ್ಯಾವಳಿಗೆ ನಗರದ ಡಿ.ಎಫ್.ಎ ಮೈದಾನದಲ್ಲಿ ಚಾಲನೆ ನೀಡಲಾಗಿದ್ದು, ಫೆ.12ರವರೆಗೆ ಮೈದಾನದಲ್ಲಿ ರಣ ರೋಚಕ ಪಂದ್ಯಾಟ ಹಾಗೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕ್ರಿಕೆಟ್ ಪ್ರಿಯರು ಪಂದ್ಯಾವಳಿಯ ಸೊಬಗನ್ನು ನೋಡಿ ಪಂದ್ಯಾವಳಿಗೆ ಮೆರುಗು ನೀಡಲಿದ್ದಾರೆ.
ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯ ಅಧ್ಯಕ್ಷ ವಿಷ್ಣುಮೂರ್ತಿ ರಾವ್, ಇವೆಂಟ್ ಚೇರ್‌ಮೆನ್ ಅನಿಲ್ ಪಾಟ್ನೇಕರ್ ಹಾಗೂ ಸಮಿತಿಯ ಪ್ರಮುಖರುಗಳಾದ ಸಚಿನ್ ಕಾಮತ್, ಇಮಾಮ್ ಸರ್ವರ್, ರಮೇಶ್ ನಾಯ್ಕ, ಶಮಲ್ ಅಬ್ದುಲ್ಲಾ, ನಿತೀನ್ ಕಾಮತ್, ಮನೋಹರ್ ಕದಂ, ಕುಲದೀಪ್ ಸಿಂಗ್ ರಜಪೂತ್, ನರಸಿಂಗ್ ದಾಸ್ ರಾಠಿ, ಅತುಲ್ ಮಾಡ್ದೋಳ್ಕರ್, ಸಮದೀಪ್ ರಜಪೂತ್, ಸೈಯದ್ ವಸೀಂ ಅಂಕೋಲೆಕರ್ ಮತ್ತು ಜೋಸೆಪ್ ಗೋನ್ಸಾಲಿಸ್ ಅವರ ನೇತೃತ್ವದ ತಂಡ ಪಂದ್ಯಾವಳಿಯ ಯಶಸ್ಸಿಗಾಗಿ ಮತ್ತು ಪಂದ್ಯಾವಳಿಯನ್ನು ಐತಿಹಾಸಿಕವನ್ನಾಗಿಸಲು ಅತ್ಯಂತ ಬದ್ಧತೆಯಿಂದ ಕೆಲಸ ನಿರ್ವಹಿಸುತ್ತದೆ. ದಾಂಡೇಲಿಯ ಕ್ರಿಕೆಟ್ ಪ್ರತಿಭೆಗಳಿಗೆ ಮಹತ್ವದ ಪ್ರೋತ್ಸಾಹ ಮತ್ತು ಶಕ್ತಿ ನೀಡುವ ನಿಟ್ಟಿನಲ್ಲಿ ರಚನೆಗೊಂಡ ದಾಂಡೇಲಿ ಪ್ರೀಮಿಯರ್ ಲೀಗ್ ಸಮಿತಿಯು ದಾಂಡೇಲಿಯ ಕ್ರಿಕೆಟ್ ಕ್ಷೇತ್ರದ ಬಲವರ್ಧನೆಗೆ ಮಹತ್ವದ ಕೊಡುಗೆ ನೀಡುವ ನಿಟ್ಟಿನಲ್ಲಿ ಮುಂದಡಿಯಿಟ್ಟಿದೆ.