Slide
Slide
Slide
previous arrow
next arrow

ಫ್ರಾನ್ಸಿಸ್ ಕ್ಸೇವಿಯರ್ ಫೆಸ್ಟ್: ಅಂಕೋಲಾದ ಮಡಿಕೆಗೆ ಭಾರೀ ಬೇಡಿಕೆ

300x250 AD

ಅಂಕೋಲಾ: ಗೋವಾ ರಾಜ್ಯದಲ್ಲಿ ಸಂತ ಫ್ರಾನ್ಸಿಸ್ ಕ್ಸೇವಿಯರ್ ಸ್ಮರಣಾರ್ಥ ವರ್ಷಕ್ಕೊಮ್ಮೆ ನಡೆಯುವ ಫೆಸ್ಟ್’ಗೆ ಅಂಕೋಲಾದಲ್ಲಿ ತಯಾರಿಸುವ ಮಣ್ಣಿನಿಂದ ಮಾಡಿದ ಮಡಿಕೆ ಮತ್ತು ಉರುವಲು ಒಲೆಗಳಿಗೆ ಭಾರಿ ಬೇಡಿಕೆ ಇದ್ದು, ಅದನ್ನು ಸಾಗಿಸಿ ಮಾರಾಟ ಮಾಡಲಾಗುತ್ತಿದೆ.

ತಾಲೂಕಿನ ಕುಂಬಾರಕೇರಿ ಗ್ರಾಮದಲ್ಲಿ ಕುಂಬಾರಿಕೆ ಮಾಡುವವರು ಕಳೆದ ಹಲವಾರು ವರ್ಷಗಳಿಂದ ಪ್ರತಿ ವರ್ಷ ಜನವರಿ ಕೊನೆಯ ವಾರ ಇಲ್ಲವೇ ಫೆಬ್ರುವರಿ ಮೊದಲ ವಾರದಲ್ಲಿ ಗೋವಾದಲ್ಲಿ ನಡೆಯುವ ಸಂತ ಫ್ರಾನ್ಸಿಸ್ ಕ್ಸೇವಿಯರ್ ಫೆಸ್ಟ್’ಗೆ ಮಡಿಕೆ ಮತ್ತು ಉರುವಲು ಒಲೆಗಳನ್ನು ಸಾಗಿಸುತ್ತಾರೆ. ಕುಂಬಾರಕೇರಿಯಲ್ಲಿ ಎರಡು ಕುಟುಂಬದವರು ಮಣ್ಣಿನ ಮಡಿಕೆ ಮತ್ತು ಒಲೆ ಮಾಡುವ ಕಾಯಕವನ್ನು ಅನೇಕ ಶತಮಾನಗಳ ಹಿಂದಿನಿಂದಲೇ ಮಾಡುಕೊಂಡು ಬಂದಿರುತ್ತಾರೆ. ಇಲ್ಲಿ ಮಾಡಿರುವ ಮಣ್ಣಿನ ಮಡಿಕೆಗಳು ಉತ್ತಮವಾಗಿರುತ್ತದೆ. ಅಲ್ಲದೆ ಹೆಚ್ಚಿನ ಬಾಳಿಕೆ ಬರುವಂಥದ್ದು. ಈ ಕಾರಣದಿಂದಾಗಿ ಗೋವಾದಲ್ಲಿ ನಡೆಯುವ ಫೆಸ್ಟ್’ಗೆ ಇಲ್ಲಿಯ ಮಣ್ಣಿನ ವಸ್ತುಗಳಿಗೆ ಭಾರಿ ಬೇಡಿಕೆಯಿಂದ ಅಲ್ಲಿಯ ಜನರು ಖರಿದಿಸುತ್ತಾರೆ. ಗೋವಾದಲ್ಲಿ ಪೇಸ್ತಗೆ ಕರಿದಿಸಿದನ್ನು ಬಂದಿರುವ ಜನರಿಗೆ ಪರಸ್ಪರ ಕಾಣಿಕೆಯಾಗಿ ನೀಡುವುದು ಒಂದು ಸಂಪ್ರದಾಯವಾಗಿದೆ.

ತಾಲೂಕಿನಿಂದ ಕಳೆದ ಹತ್ತು ವರ್ಷಗಳ ಹಿಂದೆ ಮೂರರಿಂದ ನಾಲ್ಕು ವಾಹನದಲ್ಲಿ ಮಡಿಕೆ ಮತ್ತು ಒಲೆಗಳನ್ನು ಹೇರಿಕೊಂಡು ಹೋಗುತ್ತಿದ್ದರು ಆದರೆ ಇತ್ತಿಚಿನ ದಿನದಲ್ಲಿ 500 ಮಡಿಕೆ ಮತ್ತು 300 ಒಲೆಗಳನ್ನು ಒಂದು ಕುಟುಂಬ ಹೇರಿಕೊಂಡು ಹೋಗಿ ವ್ಯಾಪಾರ ಮಾಡಿ ಬರುತ್ತಿದ್ದಾರೆ. ಗೋವಾದಲ್ಲಿ 7 ದಿನ ನಡೆಯುವ ಈ ಪೇಸ್ತಗೆ ಅಂಕೋಲಾದ ಮಣ್ಣಿನ ಮಡಿಕೆ ಒಳೆಗಳು ಕ್ರೈಸ್ತ ಬಾಂಧವರು ಪರಸ್ಪರ ಉಡುಗರೆಯಾಗಿ ನೀಡುವುದು ಒಂದು ವಿಶೇಷವಾಗಿದೆ.

300x250 AD

Share This
300x250 AD
300x250 AD
300x250 AD
Back to top