• Slide
    Slide
    Slide
    previous arrow
    next arrow
  • ಕ್ಷೇತ್ರದ ಅಭಿವೃದ್ಧಿಗೆ ಆಗ್ರಹಿಸಿ ಸಿದ್ದಾಪುರದಿದಂದ ಶಿರಸಿಗೆ ಕಾಂಗ್ರೆಸ್ ಪಾದಯಾತ್ರೆ

    300x250 AD

    ಸಿದ್ದಾಪುರ: ಶಿರಸಿ- ಸಿದ್ದಾಪುರ ಕ್ಷೇತ್ರದ ಅಭಿವೃದ್ಧಿ ಮತ್ತು ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ವಿರುದ್ಧವಾಗಿ ನಾವು ಫೆ.09ರಂದು ಸಿದ್ದಾಪುರದಿಂದ ಶಿರಸಿ ಉಪವಿಭಾಗಧಿಕಾರಿಗಳ ಕಛೇರಿಯವರೆಗೆ ಪಾದಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ. ಅಂದು ಬ್ಲಾಕ್ ಕಾಂಗ್ರೆಸ್ ಕಚೇರಿಯಿಂದ 8 ಗಂಟೆಗೆ ಪ್ರಾರಂಭಿಸಲಿದ್ದೇವೆ. ಮಧ್ಯಾಹ್ನ 3 ಗಂಟೆಗೆ ಶಿರಸಿ ಎಸಿ ಕಚೇರಿಯನ್ನು ತಲುಪಿ ಮುಖ್ಯಮಂತ್ರಿಗಳಿಗೆ, ರಾಜ್ಯಪಾಲರಿಗೆ ಮತ್ತು ಜಿಲ್ಲಾಧಿಕಾರಿಗೆ ಮನವಿ ನೀಡಲಿದ್ದೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಹೇಳಿದರು.

    ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪಾದಯಾತ್ರೆಗೆ ನಮ್ಮ ಪಕ್ಷದ ಕಾರ್ಯಕರ್ತರು ಮುಖಂಡರು ಮತ್ತು ಎಲ್ಲಾ ರಾಜ್ಯ ನಾಯಕರು, ಜಿಲ್ಲಾ ನಾಯಕರು, ಎಲ್ಲಾ ಪಂಚಾಯತಿಯ ಅಧ್ಯಕ್ಷರು, ಸದಸ್ಯರುಗಳು, ವಿವಿಧ ಸಂಘ- ಸಂಸ್ಥೆಗಳ ಅಧ್ಯಕ್ಷರುಗಳಿಗೆ, ರೈತರಿಗೆ, ಮಹಿಳೆಯರಿಗೆ ಹಾಗೂ ಎಲ್ಲರಿಗೂ ನಾವು ಈಗಾಗಲೇ ಮನವಿಯನ್ನು ಮಾಡಿಕೊಂಡಿದ್ದೇವೆ. ಪಾದಯಾತ್ರೆಯಲ್ಲಿ 2000 ಜನ ಸೇರುವ ನಿರೀಕ್ಷೆ ಇದೆ. ಯಾವುದೇ ಅಭಿವೃದ್ಧಿ ಕಾಮಗಾರಿಯಲ್ಲಿ ನಾವು ಹಿಂದಿಲ್ಲ ಎಂದು ಬಿಜೆಪಿಯವರು ಹೇಳಿಕೊಳ್ಳುತ್ತಾರೆ. ಬಿಜೆಪಿ ಸರ್ಕಾರ ಬಂದ ನಂತರ ಯಾವೆಲ್ಲ ಅಭಿವೃದ್ಧಿಯಾಗಿದೆ ಎಂದು ಒಂದು ಬಹಿರಂಗ ವೇದಿಕೆ ಮಾಡಿ ಸಾರ್ವಜನಿಕರ ಮುಂದೆ ಚರ್ಚೆ ಮಾಡಿದರೆ ತುಂಬಾ ಚೆನ್ನಾಗಿರುತ್ತದೆ. ಕ್ಷೇತ್ರದಲ್ಲಿ ಏನಾಗುತ್ತಿದೆ ಎನ್ನುವುದರ ಬಗ್ಗೆ ನಾವು ಅವರಿಗೆ ಉತ್ತರ ಕೊಡುತ್ತೇವೆ. ಇವತ್ತು ಎಲ್ಲಿ ಅಭಿವೃದ್ಧಿಯಾಗುತ್ತಿದೆ ಎಂದರೆ ಅವಶ್ಯಕತೆ ಇಲ್ಲದ ಕಡೆಗಳಲ್ಲಿ ಒಂದು ಎರಡು ಕಾಂಕ್ರೀಟ್ ರಸ್ತೆಗಳು, ಬ್ರಿಡ್ಜ್ಗಳು ಆಗುತ್ತವೆ. ಅವಶ್ಯಕತೆ ಇರುವ ಕಡೆಗಳಲ್ಲಿ ಅಭಿವೃದ್ಧಿ ಆಗುತ್ತಾ ಇಲ್ಲ. ಪಟ್ಟಣದಲ್ಲಿ ಒಂದು ರಸ್ತೆ ಮಾತ್ರ ಆಗುತ್ತಿದೆ ಅದು ಸಹ ಸರಿಯಾಗಿ ನಿರ್ವಹಣೆ ಆಗುತ್ತಿಲ್ಲ. ಇವುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕೆಲಸಗಳು ಕಾಣುತ್ತಿಲ್ಲ. ಹಳ್ಳಿಗಳಲ್ಲಿ ಒಂದೇ ಒಂದು ರಸ್ತೆಯು ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ಆರೋಪಿಸಿದರು.

    ಸಾಕಷ್ಟು ಸಭೆಗಳಲ್ಲಿ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹೇಳಿದ್ದಾರೆ ಅತಿಕ್ರಮಣದಾರರಿಗೆ ಯಾವುದೇ ರೀತಿ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇನೆ, ಅವರನ್ನು ಒಕ್ಕಲಿಬ್ಬಿಸಲು ಬಿಡುವುದಿಲ್ಲ. ಆದರೆ ದಿನನಿತ್ಯ ರೈತರಿಗೆ ಅರಣ್ಯ ಅಧಿಕಾರಿಗಳ ಕಿರುಕುಳ ಹೆಚ್ಚಾಗುತ್ತಾ ಇದೆ. 50 ವರ್ಷಗಳಿಂದ ಅತಿಕ್ರಮಣ ಮಾಡಿಕೊಂಡು ವಾಸವಾಗಿ ಬಂದಿರುವ ಭೂಮಿಯಲ್ಲಿ ಒಂದು ತೆಂಗಿನ ಗಿಡ ನೆಡಲು ಶೌಚಾಲಯ ಕಟ್ಟಲು ಅರಣ್ಯ ಇಲಾಖೆಯವರು ಕೊಡುತ್ತಿಲ್ಲ. ಯಾವುದೇ ರೀತಿ ಕಾಮಗಾರಿ ಕೈಗೊಂಡಲ್ಲಿ ಫಾರೆಸ್ಟ್ ಅವರು ಪ್ರಕರಣ ದಾಖಲಿಸುತ್ತಿದ್ದಾರೆ. ಯಾವುದೇ ಒಬ್ಬ ಅರಣ್ಯ ಅಧಿಕಾರಿಗೆ ಸಭಾಧ್ಯಕ್ಷರು ಫೋನ್ ಮಾಡಿ ಈ ರೀತಿ ಮಾಡಬೇಡಿ ಅಂತ ಹೇಳುವುದಿಲ್ಲ ಎಂದರು.

    ತಾಲೂಕಿನಲ್ಲಿ ಯಾವುದೇ ಸರ್ಕಾರಿ ಕೆಲಸಗಳು ಸಮಯಕ್ಕೆ ಸರಿಯಾಗಿ ಆಗುತ್ತಿಲ್ಲ.ಬಹಳಷ್ಟು ಶಾಲಾ ಕಟ್ಟಡಗಳು ಮೂಲಭೂತ ಸೌಕರ್ಯ ದಿನ ವಂಚಿತವಾಗಿವೆ. ಆರೋಗ್ಯ ಇಲಾಖೆಯಲ್ಲಿ ಸೂಕ್ತವಾದ ಚಿಕಿತ್ಸೆ ಸಿಗುತ್ತಿಲ್ಲ ಯಾವುದೇ ಸಣ್ಣಪುಟ್ಟ ಕಾಯಿಲೆಗೆ ಹೋದರು ಶಿವಮೊಗ್ಗ ಹಾಗೂ ಮಣಿಪಾಲ ಆಸ್ಪತ್ರೆಗಳಿಗೆ ಕಳಿಸುವ ವ್ಯವಸ್ಥೆ ಆಗುತ್ತಾ ಇದೆ. ಎಲ್ಲ ಇಲಾಖೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸಿಬ್ಬಂದಿಗಳ ಕೊರತೆ ಇದೆ. ಪಂಚಾಯತ್ಗಳಲ್ಲಿ ಕಳೆದ ಮೂರು ವರ್ಷಗಳಿಂದ ವಸತಿ ಯೋಜನೆ ಇಲ್ಲ. ವಾಟರ್ ಮ್ಯಾನ್ಗಳಿಗೆ ಸರ್ಕಾರ ದಿಂದ ಯಾವುದೇ ಬತ್ಯಗಳನ್ನು ನೀಡಲಾಗುತ್ತಿಲ್ಲ. ಸಮರ್ಪಕವಾದ ಸಾರಿಗೆ ವ್ಯವಸ್ಥೆ ಇಲ್ಲ. ಆಶಾ ಕಾರ್ಯಕರ್ತೆಯರಿಗೆ ಅಂಗನವಾಡಿ ಕಾರ್ಯಕರ್ತರಿಗೆ ಹಾಸ್ಟೆಲ್ ಸಿಬ್ಬಂದಿಗಳಿಗೆ ಸರಿಯಾದ ವೇತನವನ್ನು ನೀಡಲಾಗುತ್ತಿಲ್ಲ ಅವರ ಬೇಡಿಕೆಗಳನ್ನು ಸಹ ಈಡೇರಿಸುತ್ತಿಲ್ಲ ತಾಳಗುಪ್ಪ ಹುಬ್ಬಳ್ಳಿ ರೈಲ್ವೆ ಮಾರ್ಗ ಈಗಾಗಲೇ ಸರ್ವೆ ಆಗಿದೆ ಆದರೆ ಅದಕ್ಕೆ ಸಂಬAಧಪಟ್ಟ ಯಾವುದೇ, ಪಡಿತರ ಅಂಗಡಿಗಳಲ್ಲಿ ಸೀಮೆಎಣ್ಣೆ ವಿತರಣೆಯಾಗುತ್ತಿಲ್ಲ ಎಂದರು.

    300x250 AD

    ಸAಸದ ಅನಂತಕುಮಾರ್ ಹೆಗಡೆಯವರೇ ನೀವು ಕಳೆದ 25 ವರ್ಷಗಳಿಂದ ಇಲ್ಲಿಯ ಜನರ ಮತ ಪಡೆದಿದ್ದೀರಿ. ಜನರ ಸಮಸ್ಯೆಯನ್ನು ಇಂದು ಮುಂದಾದರು ಬಗೆಹರಿಸುವ ಕಿಂಚಿತ್ತಾದರು ಅವರ ಋಣ ತೀರಿಸುವ ಕೆಲಸವನ್ನು ಮಾಡಿ. ಒಂದೇ ಒಂದು ದಿನ ಅರಣ್ಯ ಅತಿಕ್ರಮಣ ದಾರರ ಪರವಾಗಿ ಧ್ವನಿಯೆತ್ತಲಿಲ್ಲ, ಮಾತು ಎತ್ತಿದರೆ ನನಗೆ ಮುಸ್ಲಿಂ ಓಟಿನ ಅವಶ್ಯಕತೆ ಇಲ್ಲ ನಾನು ಸಂವಿಧಾನ ಬದಲು ಮಾಡಲು ಬಂದಿದ್ದೇನೆ ಎಂದು ಹೇಳುತ್ತಾರೆ.ಎಲ್ಲೋ ನಿಂತುಕೊoಡು ಸಾವಿರಾರು ಜನ ಸೇರಿದಾಗ ಭಾಷಣ ಮಾಡುವುದನ್ನು ಬಿಟ್ಟು ನೀವು ಮಾಡಿದ ಕೆಲಸದ ಬಗ್ಗೆ ಅಭಿವೃದ್ಧಿ ಬಗ್ಗೆ ಶ್ವೇತ ಪತ್ರವನ್ನು ಹೊರಡಿಸಬೇಕು ಸರ್ಕಾರಿ ಕಾಮಗಾರಿಗಳ ಉದ್ಘಾಟನೆಗೆ ಮಾತ್ರ ತಾವು ಸೀಮಿತವಾಗಬಾರದು ಜನರ ಸಂಕಷ್ಟಗಳಿಗೆ ಸ್ಪಂದಿಸಿ ರೈತರ ಸಾಲವನ್ನು ಮನ್ನಾ ಮಾಡಬೇಕೆಂದು ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.

    ಈ ಸಂದರ್ಭದಲ್ಲಿ ಪ್ರಮುಖರಾದ ವಿ.ಎನ್.ನಾಯ್ಕ ಬೇಡ್ಕಣಿ, ನಾಸೀರ್ ಖಾನ್, ಸಾವೇರ್ ಡಿಸೀಲ್ವಾ, ಸೀಮಾ ಹೆಗಡೆ, ಜಯರಾಮ ನಾಯ್ಕ, ರಾಜೇಶ ನಾಯ್ಕ ಕತ್ತಿ, ಪ್ರಶಾಂತ ನಾಯ್ಕ ಹೊಸೂರು, ಜಿ.ಟಿ.ನಾಯ್ಕ ಗೋಳಗೋಡ, ಸುನೀಲ್ ಫರ್ನಾಂಡಿಸ್, ಕೆ.ಟಿ.ಹೊನ್ನೆಗುಂಡಿ ಮೊದಲಾದವರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top