• Slide
  Slide
  Slide
  previous arrow
  next arrow
 • ವಿಧಾನಸಭಾ ಚುನಾವಣೆ ಹಿನ್ನೆಲೆ: ಮೇದಿನಿಗೆ ಕಾಂಗ್ರೆಸ್ ಮುಖಂಡರ ಭೇಟಿ

  300x250 AD

  ಕುಮಟಾ : ಚುನಾವಣೆ ಸಮೀಪಿಸುತ್ತಿದ್ದು, ತಾಲೂಕಿನಲ್ಲಿ ಕಾಂಗ್ರೆಸ್ ನಿಂದ ಚುನಾವಣಾ ಪೂರ್ವ ಪ್ರಕ್ರಿಯೆಗಳು ಚುರುಕುಗೊಂಡಿದೆ. ಬ್ಲಾಕ್ ಕಾಂಗ್ರೆಸ್ ವತಿಯಿಂದ ಸೊಪ್ಪಿನಹೊಸಳ್ಳಿಯ ಮೇದನಿ ಗ್ರಾಮದಲ್ಲಿ ಕ್ಷೇತ್ರದ ಮಾಜಿ ಶಾಸಕಿಯರಾದ ಶಾರದಾ ಮೋಹನ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ, ಹಾಗೂ ಇತರ ಮುಖಂಡರ ಉಪಸ್ಥಿತಿಯಲ್ಲಿ ಮುಂಬರುವ ಚುನಾವಣಾ ಪ್ರಯುಕ್ತ ಕಾಂಗ್ರೆಸ್ ಪಕ್ಷದ ವತಿಯಿಂದ ಪಕ್ಷ ಸಂಘಟನೆ ಕುರಿತು ಸ್ಥಳೀಯ ಮುಖಂಡರ ಜೊತೆ ಮಾತುಕತೆ ನಡೆಸುವ ಜೊತೆಗೆ, ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಕುಮಟಾ ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳ ಕುರಿತು ಜನರಿಗೆ ತಿಳಿಸಲಾಯಿತು.

  ಕಳೆದ ಅವಧಿಯಲ್ಲಿ ತಮ್ಮ ಊರಿಗೆ ವಿದ್ಯುತ್ ವ್ಯವಸ್ಥೆ ಮಾಡಿದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರನ್ನು ಮೇದನಿ ಗ್ರಾಮದ ಜನರು ಈ ಸಂದರ್ಭದಲ್ಲಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಹೊನ್ನಪ್ಪ ನಾಯಕ, ನಾಗೇಶ್ ನಾಯ್ಕ, ಯಶೋಧರ ನಾಯ್ಕ, ರವಿಕುಮಾರ್ ಎಂ.ಶೆಟ್ಟಿ, ರತ್ನಾಕರ ನಾಯ್ಕ, ಶ್ರೀಮತಿ ಸುರೇಖಾ ವಾರೇಕರ್, ಶ್ರೀಮತಿ ಗಾಯತ್ರಿ ಗೌಡ, ಭಾಸ್ಕರ ಪಟಗಾರ್, ಆರ್.ಹೆಚ್. ನಾಯ್ಕ, ಭುವನ ಭಾಗ್ವತ್, ಶ್ರೀಮತಿ ವೀಣಾ ನಾಯಕ, ಶ್ರೀ ಮಹೇಶ್ ನಾಯ್ಕ ಹಾಗೂ ಇತರರು ಹಾಜರಿದ್ದರು.

  300x250 AD
  Share This
  300x250 AD
  300x250 AD
  300x250 AD
  Leaderboard Ad
  Back to top