Slide
Slide
Slide
previous arrow
next arrow

ಬೈಕ್’ಗಳ ನಡುವೆ ಡಿಕ್ಕಿ: ಸವಾರರಿಗೆ ಗಂಭೀರ‌ ಗಾಯ, ಹೆದ್ದಾರಿಯಲ್ಲೇ‌ ಹೊತ್ತುರಿದ ಬೈಕ್

300x250 AD

ಹೊನ್ನಾವರ: ತಾಲೂಕಿನ ಹಳದೀಪುರ ಸಮೀಪದ ಅಗ್ರಹಾರ ಬಳಿ ಎರಡು ಬೈಕ್ ಗಳ ನಡುವೆ ಡಿಕ್ಕಿ ಸಂಭವಿಸಿದೆ.

ವಿದೇಶಿ ಪ್ರವಾಸಿಗರು ಅತಿವೇಗ ಹಾಗೂ ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ಬೈಕ್ ಚಲಾಯಿಸಿಕೊಂಡು ಬಂದು ಸ್ಥಳೀಯರು ಸಂಚರಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡಿದಿದ್ದಾರೆ. ಬೈಕ್ ನಲ್ಲಿದ್ದ ಸ್ಥಳೀಯರಾದ ಈರ್ವರಿಗೂ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

300x250 AD

ಅಪಘಾತದ ತೀವ್ರತೆಗೆ ಇದಲ್ಲದೇ ವಿದೇಶಿಗರು ಸಂಚರಿಸುತ್ತಿದ್ದ ಬೈಕ್’ಗೆ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಅಪಘಾತದಿಂದ ರೊಚ್ಚಿಗೆದ್ದ ಸ್ಥಳೀಯರು ವಿದೇಶಿ ಬೈಕ್ ಸವಾರರ ಮೇಲೆ ಹಲ್ಲೆ ನಡೆಸಿದ್ದು, ಸ್ಥಳಕ್ಕೆ ಹೊನ್ನಾವರ ಪೊಲೀಸರು ಆಗಮಿಸಿ ಪರಿಸ್ಥಿತಿ ಸಹಜ ಸ್ಥಿತಿಗೆ ತಂದು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This
300x250 AD
300x250 AD
300x250 AD
Back to top