• Slide
    Slide
    Slide
    previous arrow
    next arrow
  • ಭಾರತ ವಿಶ್ವದಲ್ಲೇ 4ನೇ ಅತಿದೊಡ್ಡ ಕಚ್ಚಾ ತೈಲ ಸಂಸ್ಕರಣಾ ಸಾಮರ್ಥ್ಯ ಹೊಂದಿದೆ: ಪ್ರಧಾನಿ ಮೋದಿ

    300x250 AD

    ನವದೆಹಲಿ: ಭಾರತದ ಇಂಧನ ಕ್ಷೇತ್ರದಲ್ಲಿ ಹೂಡಿಕೆ ಅವಕಾಶಗಳನ್ನು ಅನ್ವೇಷಿಸುವಂತೆ ಪ್ರಧಾನಿ ನರೇಂದ್ರ ಮೋದಿ ಜಾಗತಿಕ ಹೂಡಿಕೆದಾರರಿಗೆ ಕರೆ ನೀಡಿದ್ದಾರೆ.

    ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ ಬೆಂಗಳೂರಿನಲ್ಲಿ ಭಾರತ ಇಂಧನ ಸಪ್ತಾಹ 2023 ಉದ್ಘಾಟಿಸಿ ಮಾತನಾಡಿದ ಅವರು, ಶಕ್ತಿ ಪರಿವರ್ತನೆಯಲ್ಲಿ ಭಾರತವು ವಿಶ್ವದ ಪ್ರಬಲ ಧ್ವನಿಗಳಲ್ಲಿ ಒಂದಾಗಿದೆ. 2030ರ ವೇಳೆಗೆ ಭಾರತದ ಇಂಧನ ಮಿಶ್ರಣದಲ್ಲಿ ನೈಸರ್ಗಿಕ ಅನಿಲ ಬಳಕೆಯನ್ನು ಹೆಚ್ಚಿಸಲು ಸರ್ಕಾರವು ಮಿಷನ್ ಮೋಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು  ಹೇಳಿದರು.

    ಭಾರತವು ವಿಶ್ವದಲ್ಲೇ ನಾಲ್ಕನೇ ಅತಿದೊಡ್ಡ ಕಚ್ಚಾ ತೈಲ ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿದ್ದು, ಭಾರತದ ಗ್ಯಾಸ್ ಪೈಪ್‌ಲೈನ್ ಜಾಲವು ಮುಂದಿನ ನಾಲ್ಕೈದು ವರ್ಷಗಳಲ್ಲಿ ಪ್ರಸ್ತುತ 22,000 ಕಿಮೀಯಿಂದ 35,000 ಕಿಮೀಗೆ ವಿಸ್ತರಿಸಲಿದೆ ಎಂದು ಅವರು ಹೇಳಿದರು.

    ತೈಲ ಮತ್ತು ಅನಿಲ ಅನ್ವೇಷಣೆಗೆ ನಿಷೇಧಿತ ಪ್ರದೇಶವನ್ನು 10 ಲಕ್ಷ ಚದರ ಕಿಲೋಮೀಟರ್‌ಗಳಷ್ಟು ಕಡಿಮೆ ಮಾಡಲಾಗಿದೆ. ಭಾರತವು ಶೇಕಡಾ 20 ರಷ್ಟು ಎಥೆನಾಲ್ ಅನ್ನು ಪೆಟ್ರೋಲ್ ಜೊತೆ ಮಿಶ್ರಣ ಮಾಡುವ ಗುರಿಯತ್ತ ಸಾಗುತ್ತಿದೆ ಎಂದು ಮೋದಿ ಹೇಳಿದರು.

    ಭಾರತವು ವಿಶ್ವದಲ್ಲಿ ಮುಂಚೂಣಿಯಲ್ಲಿರುವ ಮತ್ತೊಂದು ಕ್ಷೇತ್ರವೆಂದರೆ ಹಸಿರು ಹೈಡ್ರೋಜನ್. ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್ 21ನೇ ಶತಮಾನದ ಭಾರತಕ್ಕೆ ಹೊಸ ದಿಕ್ಕನ್ನು ನೀಡುತ್ತದೆ ಎಂದು ಅವರು ಹೇಳಿದರು.

    300x250 AD

    ಪ್ರಧಾನಮಂತ್ರಿಯವರು ಇಂಡಿಯನ್ ಆಯಿಲ್‌ನ ಒಳಾಂಗಣ ಸೌರ ಅಡುಗೆ ವ್ಯವಸ್ಥೆಯ ಅವಳಿ-ಕುಕ್‌ಟಾಪ್ ಮಾದರಿಯನ್ನು ಬಿಡುಗಡೆ ಮಾಡಿದರು ಮತ್ತು ಅದರ ವಾಣಿಜ್ಯ ವಿತರಣೆಗೆ ಚಾಲನೆ ನೀಡಿದರು.

    ಇಂದು ಬಿಡುಗಡೆ ಮಾಡಲಾದ ಸೋಲಾರ್ ಕುಕ್‌ಟಾಪ್ ಭಾರತದಲ್ಲಿ ಹಸಿರು ಮತ್ತು ಸ್ವಚ್ಛ ಅಡುಗೆಗೆ ಹೊಸ ಆಯಾಮವನ್ನು ನೀಡಲಿದೆ ಎಂದು ಮೋದಿ ಹೇಳಿದರು.

    ಕೃಪೆ: http://news13.in

    Share This
    300x250 AD
    300x250 AD
    300x250 AD
    Leaderboard Ad
    Back to top