Slide
Slide
Slide
previous arrow
next arrow

ಶಿರಸಿಯಲ್ಲಿ ಆದಿಶಕ್ತಿ ಹೊಂಡಾ ಎಚ್ ಸ್ಮಾರ್ಟ್ ಸ್ಕೂಟರ್ ಶುಭಾರಂಭ

300x250 AD

ಶಿರಸಿ: ಇಲ್ಲಿಯ ಪ್ರತಿಷ್ಟಿತ ಆದಿಶಕ್ತಿ ಹೊಂಡಾ ಶೌರೂಮ್ ವತಿಯಿಂದ ಶಿರಸಿಯಲ್ಲಿ ಇದೇ ಮೊದಲ ಬಾರಿಗೆ ಹೊಂಡಾ ಎಚ್ ಸ್ಮಾರ್ಟ್ ಕೀ ಸ್ಕೂಟರ್ ಬಿಡುಗಡೆಗೊಳಿಸಲಾಯಿತು.

ಹೊಸ ಹೊಂಡಾ ಕಂಪನಿಯ ಎಚ್ ಸ್ಮಾರ್ಟ್ ಕೀ ಜೀ ಸ್ಕೂಟರ್ ವಾಹನವನ್ನು ಬಿಡುಗಡೆಗೊಳಿಸಿದ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾಧ್ಯಕ್ಷ ಸುಬ್ರಾಯ ಭಟ್ ಬಕ್ಕಳ, ಮಾತನಾಡಿ ಶುಭಕೋರಿದರು.

ಹೊಂಡಾ ಕಂಪನಿಯ ಡ್ಯಾನಿಯಲ್ ಮಾತನಾಡಿ, ಸ್ಮಾರ್ಟ್ ಕೀ ಜೊತೆಗೆ ಆ್ಯಂಟಿ ಥೆಪ್ಟ್ ಪೆಸಿಲಿಟಿಯನ್ನು ಹೊಂದಿರುವ ಈ ಹೊಂಡಾ ಆ್ಯಕ್ಟೀವಾ ಸ್ಕೂಟರ್ ಗ್ರಾಹಕರನ್ನು ಸೆಳೆಯುತ್ತಿದೆ ಎಂದರು.

300x250 AD

ಖ್ಯಾತ ಉದ್ಯಮಿ ಪ್ರವೀಣ ಹೆಗಡೆ ಹೀಪನಳ್ಳಿ ನೂತನ ಸ್ಕೂಟರನ್ನು ಖರೀದಿಸುವ ಮೂಲಕ ಶುಭಾರಂಭಗೈದರು. ಇನ್ನುಳಿದ ಗ್ರಾಹಕರಿಗೆ ನೂತನ ವಾಹನವನ್ನು ಹಸ್ತಾಂತರಿಸಲಾಯಿತು. ಈ ವೇಳೆ ಆದಿಶಕ್ತಿ ಹೊಂಡಾ ಶೌರೂಮ್ ಮಾಲೀಕ ಶ್ರೀಕಾಂತ ಹೆಗಡೆ ದುಗ್ಗುಮನೆ, ಪತ್ರಕರ್ತ ನರಸಿಂಹ ಅಡಿ ಸೇರಿದಂತೆ ಸಂಸ್ಥೆಯ ಸಿಬ್ಬಂದಿಗಳು ಇನ್ನಿತರರು ಇದ್ದರು.

Share This
300x250 AD
300x250 AD
300x250 AD
Back to top