ನವದೆಹಲಿ: ಅಮೆಜಾನ್‌ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಈಗ ನಕಲಿ ಸೆಕ್ಯುಲರಿಸಂ ಅಬ್ಬರ ಕಾಣುತ್ತಿದೆ. ಇದಕ್ಕೆ ಉದಾಹರಣೆ ಎಂಬಂತೆ, ಲೇಖಕ ಸೌರವ್ ದತ್ ಅವರ “ಮೋದಿ ಮತ್ತು ಮಿ: ಅ ಪೊಲಿಟಿಕಲ್ ರೀವೇಕನಿಂಗ್” ಪುಸ್ತಕವನ್ನು ಅಮೆಜಾನ್ ನಿಷೇಧಿಸಿದೆ. ಹಿಂದುತ್ವ ವಿಷಯವನ್ನು ಒಳಗೊಂಡಿರುವ ಕಾರಣ ಇದು ನಿಷೇಧಕ್ಕೊಳಗಾಗಿದೆ.
ಲೇಖಕ ಸೌರವ್ ದತ್ ಈ ಬಗ್ಗೆ ಬಗ್ಗೆ ಕಳವಳ ವ್ಯಕ್ತಪಡಿಸಿ ಟ್ವಿಟ್ ಮಾಡಿದ್ದು, “ಅಮೆಜಾನ್‌ನಿಂದ ನನ್ನ ಪುಸ್ತಕವನ್ನು ನಿಷೇಧಿಸುವ ಸಂದೇಶವನ್ನು ಸ್ವೀಕರಿಸಲಾಗಿದೆ ಏಕೆಂದರೆ ಪುಸ್ತಕವನ್ನು ‘ಹಿಂದುತ್ವ ವಿಷಯದ ಸಾಹಿತ್ಯ’ ಎಂದು ನೋಡಲಾಗುತ್ತಿದೆ” ಎಂದಿದ್ದಾರೆ.
ಈ ಪುಸ್ತಕದಲ್ಲಿ, ಸೌರವ್ ದತ್ ಅವರು ನರೇಂದ್ರ ಮೋದಿಯವರ ಭಾರತವು ಅಲ್ಪಸಂಖ್ಯಾತ ಮತ-ಬ್ಯಾಂಕ್ ರಾಜಕೀಯ, ಓಲೈಕೆ ವಿರುದ್ಧ ಹೇಗೆ ನಿಂತಿದೆ, ಭಾರತೀಯ ವಿರೋಧಿ ಮತ್ತು ಹಿಂದೂ ವಿರೋಧಿ ಭಾವನೆಗಳ ವಿರುದ್ಧ ಹೇಗೆ ಮತ್ತು ಏಕೆ ಪ್ರಬಲವಾದ ತಡೆಗೋಡೆಯಾಗಿದೆ. ಹೇಗೆ ಎಡಪಂಥೀಯ ಪ್ರಾಬಲ್ಯವಾದಿ ಸಿದ್ಧಾಂತವಾದಿಗಳಿಂದ ಧಾರ್ಮಿಕ ವಿಭಜನೆ, ಭಾರತ ಮತ್ತು ಅದರಾಚೆಗಿನ ಹಿಂದೂಫೋಬಿಯಾದ ಬೆದರಿಕೆಯನ್ನು ನಿಭಾಯಿಸುತ್ತಿದೆ ಎಂಬುದನ್ನು ವಿವರಿಸಿದ್ದಾರೆ.
ಪುಸ್ತಕ ನಿಷೇಧದ ಬಳಿಕ, ಹಲವಾರು ನೆಟಿಜನ್‌ಗಳು ಅಮೆಜಾನ್ ಅನ್ನು ಪಕ್ಷಪಾತಿ ಮತ್ತು ಹಿಂದೂಪೋಬಿಕ್ ಎಂದು ಕರೆದಿದ್ದಾರೆ.
ಕೃಪೆ: http://news13.in