ಕೊಲಂಬೋ: ದ್ವೀಪ ರಾಷ್ಟ್ರ ಶ್ರೀಲಂಕಾ ಶನಿವಾರ ತನ್ನ 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಿದೆ. ಈ ಸಂದರ್ಭದಲ್ಲಿ ಭಾರತವು ಆ ದೇಶಕ್ಕೆ 50 ಬಸ್‌ಗಳನ್ನು ಹಸ್ತಾಂತರ ಮಾಡಿದೆ.
ಭಾರತದ ಹೈಕಮಿಷನರ್ ಗೋಪಾಲ್ ಬಾಗ್ಲೆ ಅವರು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರಿಗೆ ಬಸ್‌ಗಳನ್ನು ಹಸ್ತಾಂತರಿಸಿದ್ದಾರೆ.
ವಾಣಿಜ್ಯ ವಾಹನ ತಯಾರಕ ಅಶೋಕ್ ಲೇಲ್ಯಾಂಡ್ ಶ್ರೀಲಂಕಾ ಸಾರಿಗೆ ಮಂಡಳಿಗೆ 500 ಬಸ್‌ಗಳನ್ನು ಪೂರೈಸುವ ಗುತ್ತಿಗೆಯನ್ನು ಪಡೆದುಕೊಂಡಿದೆ, ಅದರಲ್ಲಿ 75 ಬಸ್‌ಗಳನ್ನು ಈ ವರ್ಷದ ಆರಂಭದಲ್ಲಿ ವಿತರಿಸಲಾಗಿದೆ.
ಶ್ರೀಲಂಕಾದ ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ಸೇವೆಗಳನ್ನು ಬಲಪಡಿಸಲು ಭಾರತದಿಂದ ಪಡೆದ ಎಲ್ಲಾ ಬಸ್‌ಗಳನ್ನು ಬಳಸಬೇಕು ಎಂದು ಅಧ್ಯಕ್ಷ ವಿಕ್ರಮಸಿಂಘೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಭದ್ರತಾ ಸಿಬ್ಬಂದಿ ಎದುರಿಸುತ್ತಿರುವ ಸಾರಿಗೆ ಸಮಸ್ಯೆಗಳಿಗೆ ಸಹಾಯ ಮಾಡಲು ಭಾರತವು 125 SUV ಗಳನ್ನು ಕೂಡ ಶ್ರೀಲಂಕಾ ಪೊಲೀಸರಿಗೆ ಸಾಲ ಯೋಜನೆ ಅಡಿಯಲ್ಲಿ ಹಸ್ತಾಂತರಿಸಿದೆ.