Slide
Slide
Slide
previous arrow
next arrow

ಬಿಜೆಪಿ ವಿಜಯ ಸಂಕಲ್ಪ ಅಭಿಯಾನ: ಮನೆಮನೆಗೆ ತೆರಳಿ ಕರಪತ್ರ ಹಂಚಿದ ಸಚಿವ ಹೆಬ್ಬಾರ್

300x250 AD

ಯಲ್ಲಾಪುರ : ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಕಿರವತ್ತಿ ಶಕ್ತಿಕೇಂದ್ರ ವ್ಯಾಪ್ತಿಯ ಖಾರೇವಾಡ ಗ್ರಾಮದಲ್ಲಿ ವಿಜಯ ಸಂಕಲ್ಪ ಅಭಿಯಾನದ ಅಂಗವಾಗಿ ಮನೆ ಮನೆಗಳಿಗೆ ತೆರಳಿ ಕೇಂದ್ರ,ರಾಜ್ಯ ಸರಕಾರ ಹಾಗೂ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಮಾಹಿತಿಯನ್ನು ಹೊಂದಿರುವ ಕರಪತ್ರವನ್ನು ನೀಡಿ, ಮಿಸ್ ಕಾಲ್ ನೀಡುವ ಮೂಲಕವಾಗಿ ಪಕ್ಷದ ಸದಸ್ಯರಾಗುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ನಂತರ ಗ್ರಾಮದ ಸಭಾಂಗಣದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಅಹವಾಲನ್ನು ಸ್ವೀಕರಿಸಿ, ಪಕ್ಷದ ಸಂಘಟನೆಯ ಕುರಿತಂತೆ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

300x250 AD

ಈ ಸಂದರ್ಭದಲ್ಲಿ ಪ್ರಮುಖರಾದ ವಿಜಯ ಮಿರಾಶಿ, ಮಂಡಲ ಪ್ರಧಾನ ಕಾರ್ಯದರ್ಶಿ ಡಾ.ರವಿ ಭಟ್ ಬರಗದ್ದೆ, ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರವಿ ಕೈಟಕರ್, ಪ್ರಮುಖರಾದ ಮುರಳಿ ಹೆಗಡೆ, ರೆಹಮತ್ ಅಬ್ಬಿಗೇರಿ ಸೇರಿದಂತೆ ಗ್ರಾಮಪಂಚಾಯತ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಪಕ್ಷದ ವಿವಿಧಸ್ಥರದ ಪದಾಧಿಕಾರಿಗಳು, ಕಾರ್ಯಕರ್ತರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top