Slide
Slide
Slide
previous arrow
next arrow

ಮನಸ್ಸಿನ ಭಾರ ಹೊರಹಾಕಿ ಭಗವಂತನಿಗೆ ಶರಣಾಗಿ: ಶ್ರೀಬ್ರಹ್ಮಾನಂದ ಭಾರತಿ ಸ್ವಾಮೀಜಿ

300x250 AD

ಸಿದ್ದಾಪುರ: ಪಟ್ಟಣದ ಹೊಸುರಿನ ಶ್ರೀಶಂಕರಮಠದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಿದ್ದಾಪುರ ವಲಯದ ವತಿಯಿಂದ ಸಾಮೂಹಿಕ ಸತ್ಯನಾರಾಯಣ ವ್ರತ ಪೂಜೆ ಮತ್ತು ಧಾರ್ಮಿಕ ಜಾಗೃತಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶಿರಳಗಿ ಚೈತನ್ಯ ರಾಜರಾಮ ಕ್ಷೇತ್ರದ ಶ್ರೀಬ್ರಹ್ಮಾನಂದ ಭಾರತಿ ಸ್ವಾಮೀಜಿ, ಹಣದಲ್ಲಾಗಲಿ, ಐಶ್ವರ್ಯದಲ್ಲಾಗಲಿ,ಅಧಿಕಾರದಲ್ಲಾಗಲಿ ಎಷ್ಟೇ ಶ್ರೀಮಂತನಾದರೂ ಮಾನಸಿಕ ನೆಮ್ಮದಿ ಇಲ್ಲದಿದ್ದರೆ ಯಾವುದೇ ಪ್ರಯೋಜನವಿಲ್ಲ.ಒತ್ತಡದ ಬದುಕು ನಮ್ಮನ್ನು ಅಶಾಂತಿಗೆ ದೂಡುತ್ತಿದೆ ಭಗವಂತನನ್ನು ನೆನೆಸಲು ನಮಗೆ ಬಿಡುವು ದೊರಕುತ್ತಿಲ್ಲ. ಬಾಹ್ಯ ಆಕರ್ಷಣೆಗಳು ನಮ್ಮನ್ನು ಸೆಳೆಯುವುದರಿಂದ ನಮ್ಮ ಅಶಾಂತಿ ಹೆಚ್ಚುತ್ತದೆ. ಇದರಿಂದ ಪಾರಾಗಲು ಭಗವಂತನಿಗೆ ಶರಣಾಗಬೇಕು ಮನಸ್ಸಿನ ಭಾರವನ್ನೆಲ್ಲ ಹೊರಗಡೆ ಹಾಕಿ ಭಗವಂತನ ಧ್ಯಾನ ಮಾಡಿದರೆ ಮನಸ್ಸು ಶಾಂತವಾಗಿರುತ್ತದೆ ಆರೋಗ್ಯ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.

300x250 AD

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ತನ್ನ ಸಂಸ್ಥೆಯ ಮೂಲಕ ಹಲವು ಜನಪರ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಮಧ್ಯವರ್ಜನ ಶಿಬಿರ ಕಾರ್ಯಕ್ರಮವಂತೂ ಲಕ್ಷಾಂತರ ಜನರಿಗೆ ಪ್ರಯೋಜನವಾಗಿದೆ. ಎಷ್ಟೋ ಜನರು ವ್ಯಸನಮುಕ್ತರಾಗಿ ನೆಮ್ಮದಿಯಿಂದ ಜೀವನ ನಡೆಸಲು ಸಹಕಾರಿಆಗಿದೆ, ಇತ್ತೀಚೆಗೆ ಶೌರ್ಯ ತಂಡ ರಚಿಸಿ ತುರ್ತು ಸಂದರ್ಭದಲ್ಲಿ ಸಹಾಯ ಮಾಡಲು ಮುಂದಾಗಿದ್ದು ಶ್ಲಾಘನಿಯವಾಗಿದೆ ಎಂದರು. ಸಾಮೂಹಿಕ ಸತ್ಯನಾರಾಯನ ವ್ರತ ಸಮಿತಿ ಅಧ್ಯಕ್ಷೆ ಲೀಲಾವತಿ ಜಯರಾಮ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.

Share This
300x250 AD
300x250 AD
300x250 AD
Back to top