ದಾಂಡೇಲಿ: ದಲಿತ ಸಮಾಜದ ಹಿತರಕ್ಷಣೆಗೆ ಕಟಿಬದ್ಧವಾಗಿರುವ ಕರ್ನಾಟಕ ಬಹುಜನ ಚಳುವಳಿ ಸಂಘಟನೆಯ ಅಂಬಿಕಾನಗರ ಶಾಖೆಯನ್ನು ಉದ್ಘಾಟಿಸಲಾಯಿತು.
ನೂತನ ಶಾಖೆಯನ್ನು ಕರ್ನಾಟಕ ಬಹುಜನ ಚಳುವಳಿ ಸಂಘಟನೆಯ ರಾಜ್ಯಾಧ್ಯಕ್ಷರಾದ ದೇವೇಂದ್ರ ಮಾದರ ಉದ್ಘಾಟಿಸಿ ಸಂಘಟನೆಯ ಧ್ಯೇಯೋದ್ದೇಶಗಳನ್ನು ವಿವರಿಸಿ, ಸಮಾಜಮುಖಿ ಮತ್ತು ಜನಮುಖಿ ಕಾರ‍್ಯಚಟುವಟಿಕೆಗಳೊಂದಿಗೆ ಅನ್ಯಾಯದ ವಿರುದ್ಧ ಧ್ವನಿಯಾಗಿ ನಿಲ್ಲುವ ಮೂಲಕ ಶೋಷಿತರಿಗೆ, ದುರ್ಬಲರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಮಹಿಳಾ ಘಟಕದ ರಾಜ್ಯಾಧ್ಯಕ್ಷರಾದ ಸುಮನ ಹರಿಜನ, ಸಂಘಟನೆಯ ಜಿಲ್ಲಾಧ್ಯಕ್ಷರಾದ ಗಿರೀಶ ಹರಿಜನ, ಸಂಘಟನಾ ಕಾರ್ಯದರ್ಶಿ ಭೀಮುಶಿ ಬಾದುಲಿ, ಸ್ಥಳೀಯ ಗ್ರಾಮ ಪಂಚಾಯ್ತು ಸದಸ್ಯರು, ಮತ್ತು ನಾಗರಿಕರು ಇದ್ದರು.
ಕರ್ನಾಟಕ ಬಹುಜನ ಚಳುವಳಿಯ ಅಂಬಿಕಾನಗರ ಶಾಖೆಯ ಉದ್ಘಾಟನೆ
