Slide
Slide
Slide
previous arrow
next arrow

ಉಳವಿ ಜಾತ್ರೆ: ಭಕ್ತರಿಗೆ ಕಿರವತ್ತಿಯಲ್ಲಿ ಉಪಹಾರ ವ್ಯವಸ್ಥೆ

300x250 AD

ಯಲ್ಲಾಪುರ: ಕಿರವತ್ತಿ ಭಾಗದ ಸಾಮಾಜಿಕ ಕಾರ್ಯಕರ್ತರಾದ ವಿಜಯ ಮಿರಾಶಿ ಹಾಗೂ ರೆಹಮತ್ ಅಬ್ಬಿಗೇರಿ ಸಹಯೋಗದಲ್ಲಿ ತಿರುವತಿಯ ಜಯ ಭಾರತ ಸಂಘಟನೆಯವರು, ಉಳವಿ ಜಾತ್ರೆಗೆ ತೆರಳುವ ಪಾದಯಾತ್ರೆ ಭಕ್ತರಿಗೆ ಶನಿವಾರ ಬೆಳಗ್ಗೆ ಕಿರವತ್ತಿಯಲ್ಲಿ ಉಪಹಾರ ವ್ಯವಸ್ಥೆಯನ್ನು ಮಾಡಿದ್ದರು.
ಹಲವಾರು ಜನ ಭಕ್ತರು ಉಪಹಾರ ಸೇವಿಸಿ, ಸಂಘಟನೆಯ ಕಾರ್ಯಕರ್ತರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಸಂಘಟನೆಯ ಅಹ್ಮದ್ ಕೋಳಿಕೆರಿ, ಮುಸ್ತಾಕ್ ಶೇಖ, ಮೆಹಬೂಬ್ ಅಲಿ ಬೊಮ್ಮಿಕಟ್ಟಿ, ದತ್ತಾತ್ರೇಯ ಹೇಂದ್ರೆ, ಮಜೀದ ಶೇಖ, ರಾಘವೇಂದ್ರ ಮಂಗಳಿ, ಬಸವರಾಜ ಹರಿಜನ್, ಸುಭಾಸ ಶೀಲವಂತ, ಉಸ್ಮಾನ ಪಟೇಲ್ ಮುಂತಾದವರು ಉಪಹಾರ ವಿತರಿಸಿದರು.

300x250 AD
Share This
300x250 AD
300x250 AD
300x250 AD
Back to top