Slide
Slide
Slide
previous arrow
next arrow

ಸರ್ಕಾರಿ ಕಾಲೇಜಿನ ಪ್ರಾಂಶುಪಾಲೆ ಡಾ.ಭಾಗೀರಥಿ ವರ್ಗ; ಹೃದಯಸ್ಪರ್ಶಿ ಬೀಳ್ಕೊಡುಗೆ

300x250 AD

ಭಟ್ಕಳ: ಪ್ರಥಮ ದರ್ಜೆ ಕಾಲೇಜಿನಲ್ಲಿ ಹಲವು ವರ್ಷಗಳಿಂದ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಡಾ.ಭಾಗೀರಥಿ ನಾಯ್ಕ ಅವರಿಗೆ ಕಾಲೇಜಿನ ಆಡಳಿತ ಮಂಡಳಿವತಿಯಿಂದ ಬೀಳ್ಕೊಡುಗೆ ನೀಡಿದರು.
2022ರ ಜೂನ್ 20ರಂದು ಎರಡನೇ ಬಾರಿಗೆ ಇಲ್ಲಿನ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಇವರು, ಕಾಲೇಜಿನ ಏಳಿಗೆಗೆ ಸಾಕಷ್ಟು ಶ್ರಮ ವಹಿಸಿದ್ದಾರೆ.ಅದೇ ರೀತಿ ವಿದ್ಯಾರ್ಥಿಗಳು ಶಿಸ್ತು ಪಾಲನೆ ಮಾಡುವಂತೆ ಕ್ರಮ ವಹಿಸಿದ್ದು, ಇದರ ಪರಿಣಾಮವಾಗಿ ಉತ್ತಮ ಅಂಕಗಳಿಕೆಗೂ ಸಹಕಾರಿಯಾಗಿದ್ದರು.
ಬಾಡಿಗೆ ಕಟ್ಟದಲ್ಲಿರುವ ಕಾಲೇಜನ್ನು ಇತ್ತೀಚಿಗೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಗಲು ಇವರ ಪರಿಶ್ರಮ ಅವಿರತವಾಗಿದೆ. ಸತತ ಪ್ರಯತ್ನದ ಬಳಿಕ ಇವರ ಅವಧಿಯಲ್ಲಿ ಕಾಲೇಜಿಗೆ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾದ ಬಳಿಕ ಇವರು ಕುಂದಾಪುರಕ್ಕೆ ವರ್ಗಾವಣೆಯಾಗಿರುವುದು ವಿದ್ಯಾರ್ಥಿಗಳಿಗೂ ಹಾಗೂ ಕಾಲೇಜು ಸಿಬ್ಬಂದಿಗಳಿಗೆ ಬೇಸರ ತಂದಿದ್ದು, ವರ್ಗಾವಣೆ ಸರ್ಕಾರಿ ಆಡಳಿತದಲ್ಲಿ ಸಹಜ ಪ್ರಕ್ರಿಯೆಯಾಗಿರುವುದರಿಂದ ಅವರಿಗೆ ಕಾಲೇಜಿನ ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.

300x250 AD
Share This
300x250 AD
300x250 AD
300x250 AD
Back to top