Slide
Slide
Slide
previous arrow
next arrow

ಕೇಣಿ ಪ್ರೌಢಶಾಲೆಯಲ್ಲಿ ವಿಶ್ವತರಿ ಭೂಮಿ ದಿನಾಚರಣೆ

300x250 AD

ಅಂಕೋಲಾ: ಸರಕಾರಿ ಪ್ರೌಢಶಾಲೆ ಕೇಣಿಯಲ್ಲಿ ವಿಶ್ವ ತರಿಭೂಮಿ ದಿನಾಚರಣೆ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಯಿತು.
ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ತಾರಾನಾಥ ಗಾಂವಕರ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ವಿಜ್ಞಾನ ಶಿಕ್ಷಕ ಹಾಗೂ ಕಾರ್ಯಕ್ರಮ ಸಂಘಟಕರಾದ ಸುಧೀರ ನಾಯಕ ವಿಶ್ವತರಿ ಭೂಮಿ ದಿನಾಚರಣೆಯ ಮಹತ್ವದ ಕುರಿತು ಮಾತನಾಡಿದರು. ಗುಂಡಬಾಳದ ಉಪವಲಯ ಅರಣ್ಯಾಧಿಕಾರಿ ಸಿ.ಆರ್.ನಾಯ್ಕ ಅವರು ವಿದ್ಯಾರ್ಥಿಗಳೊಂದಿಗೆ ಪರಿಸರ ಜಾಗೃತಿ ಸಂವಾದ ನಡೆಸಿದರು. ಕಾರವಾರದ ಅರಣ್ಯಪಾಲಕ ಗೋಪಾಲ ನಾಯ್ಕ ವಿವಿಧ ಹಾವುಗಳು, ಅವುಗಳ ರಕ್ಷಣೆಯ ಮಹತ್ವ ಹಾಗೂ ಪರಿಸರ ಸಮತೋಲನದಲ್ಲಿ ಅವುಗಳ ಪಾತ್ರದ ಕುರಿತು ವಿಡಿಯೋ ಸಹಿತ ಉಪನ್ಯಾಸ ನೀಡಿದರು.
ಹೊಸಕಂಬಿಯ ಅರಣ್ಯ ಪಾಲಕ ಬಸವನಗೌಡ ಬಗಲಿಯವರು ಪಕ್ಷಿಗಳ ವೈವಿಧ್ಯತೆ, ಪಕ್ಷಿಗಳ ಗುಡುಗಳು, ಕೊಕ್ಕು, ಪಾದ ಹಾಗೂ ವಲಸೆ ಬಗ್ಗೆ ಹಾಗೂ ತರಿಭೂಮಿ ಸಂರಕ್ಷಣೆಯಲ್ಲಿ ಪಕ್ಷಿಗಳ ಪಾತ್ರದ ಕುರಿತು ಮನಮುಟ್ಟುವಂತೆ ವಿಡಿಯೋ ಸಹಿತವಾಗಿ ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವ ಇಂತಹ ಕಾರ್ಯಕ್ರಮಗಳು ಸಹಾಯಕಾರಿಯಾಗಿವೆ. ಇಂತಹ ಕಾರ್ಯಕ್ರಮಗಳನ್ನು ಸಂಘಟಿಸಿದ ವಿಜ್ಞಾನ ಶಿಕ್ಷಕರನ್ನು ಅಭಿನಂದಿಸಿ ಕಾರ್ಯಕ್ರಮದಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹಿಂದಿ ಭಾಷಾ ಶಿಕ್ಷಕಿ ವಿಜಯಾ ಗಾಂವಕರ ಎಲ್ಲರನ್ನು ಸ್ವಾಗತಿಸಿದರೆ, ನೂತನಾ ನಾಯಕ ವಿವಿಧ ಸ್ಫರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮ ನಡೆಸಿಕೊಟ್ಟರು ಹಾಗೂ ಕಾರ್ಯಕ್ರಮ ನಿರ್ವಹಿಸಿದರು. ಸೌಜನ್ಯ ಸಂಗಡಿಗರು ಪ್ರಾರ್ಥಿಸಿದರು. ಸಾವಿತ್ರಿ ಸಂಗಡಿಗರು ಸ್ವಾಗತಗೀತೆ ಹಾಡಿದರು.

300x250 AD
Share This
300x250 AD
300x250 AD
300x250 AD
Back to top