• Slide
    Slide
    Slide
    previous arrow
    next arrow
  • ಫೆ.10ಕ್ಕೆ ಬೆಂಗಳೂರು ಚಲೋ: ವಿಧಾನಸೌಧದೆದುರು ಅರಣ್ಯವಾಸಿಗಳ ಶಕ್ತಿ ಪ್ರದರ್ಶನ

    300x250 AD

    ಕುಮಟಾ: ಅರಣ್ಯವಾಸಿಗಳ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಫೇಬ್ರವರಿ 10 ರಂದು ಸಂಘಟಿಸಿದ ಬೆಂಗಳೂರು ಚಲೋದ ಸಂದರ್ಭದಲ್ಲಿ ಬೆಂಗಳೂರು ಶಕ್ತಿ ಕೇಂದ್ರವಾದ ವಿಧಾನ ಸೌಧದ ಎದುರು ಅರಣ್ಯವಾಸಿಗಳ ಒಗ್ಗಟ್ಟಿನ ಶಕ್ತಿ ಪ್ರದರ್ಶಿಸಲು ನಿರ್ಧರಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅರಣ್ಯವಾಸಿಗಳು ಭಾಗವಹಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

      ಅವರು ಇಂದು ಕುಮಟಾ ತಾಲೂಕಿನ ಮಹಾಸತಿ ದೇವಾಲಯದ ಸಭಾಂಗಣದಲ್ಲಿ ಫೇಬ್ರವರಿ 10 ಬೆಂಗಳೂರು ಚಲೋ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮೇಲಿನಂತೆ ಮಾತನಾಡಿದರು.
    ನಿರಂತರ ಸಾಂಘಿಕ ಮತ್ತು ಕಾನೂನು ಹೋರಾಟ ಕಳೆದ 32 ವರ್ಷಗಳಿಂದ ವಿವಿಧ ರೀತಿಯಲ್ಲಿ ಜರುಗಿಸಿದಲ್ಲೂ ಸರಕಾರದ ಸ್ಪಂದನೆ ದೊರಕದಿರುವುದು ವಿಷಾದಕರ ಎಂದು ಅವರು ಹೇಳಿದರು. ಜನಪ್ರತಿನಿಧಿಗಳ ಇಚ್ಛಾಶಕ್ತಿ ಹಾಗೂ ಕಾನೂನು ಜ್ಞಾನದ ಕೊರತೆಯಿಂದ ಅರಣ್ಯ ಹಕ್ಕು ಕಾಯ್ದೆ ಅನುಷ್ಟಾನದಲ್ಲಿ ವೈಫಲ್ಯವಾಗಿದೆ. ಸರಕಾರದ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
    ಅಧ್ಯಕ್ಷತೆಯನ್ನು ಕುಮಟಾ ತಾಲೂಕ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಮಂಜುನಾಥ ಮರಾಠಿ ವಹಿಸಿದರು. ಸಭೆಯಲ್ಲಿ ಸುರೇಶ ಜಿ. ಭಟ್ ನಾಗೂರು, ಜಗದೀಶ ನಾಯ್ಕ ಕತಗಾಲ, ಯಾಕೂಬ ಸಾಬ ಬೆಟ್ಕುಳಿ, ಸಾರಂಬಿ ಬೆಟ್ಕುಳಿ, ವೆಂಕಟ್ರಮಣ ಪಟಗಾರ ಮಾಸೂರು ಕ್ರಾಸ್, ಶಾಂತಿ ಮುಕ್ರಿ ಮಿರ್ಜಾನ, ಮಾದೇವ ಅಗೇರ ಬರ್ಗಿ, ಶ್ರೀರಾಮ ಹಳ್ಳೇರ ಮೊರಬ, ಗಣು ಗೌಡ ಗೋಕರ್ಣ, ಚಿದಂಬರ ಶೆಟ್ಟಿ ಚಂದಾವರ ಉಪಸ್ಥಿತರಿದ್ದರು.

    300x250 AD

    ಸಹಸ್ರ ಸಂಖ್ಯೆಯಲ್ಲಿ ಬೆಂಗಳೂರು ಚಲೋ:
    ಅರಣ್ಯ ಭೂಮಿ ಹಕ್ಕು ಪ್ರತಿಪಾದನೆಗಾಗಿ ಸಹಸ್ರ ಸಂಖ್ಯೆಯಲ್ಲಿ ಐತಿಹಾಸಿಕ ಬೆಂಗಳೂರು ಚಲೋ ಜರುಗಲಿದ್ದು, ಅರಣ್ಯವಾಸಿಗಳು ಹೋರಾಟಕ್ಕೆ ಶಕ್ತಿ ನೀಡಬೇಕೆಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top