Slide
Slide
Slide
previous arrow
next arrow

ಇಂಧನ ಇಲಾಖೆಯನ್ನು ಜನಸ್ನೇಹಿಯನ್ನಾಗಿ ಬದಲಾಯಿಸುವತ್ತ ಪ್ರಯತ್ನ: ಸಚಿವ ಸುನಿಲ್ ಕುಮಾರ್

300x250 AD

ಸಿದ್ದಾಪುರ: ಇಂಧನ ಇಲಾಖೆಯನ್ನು ಜನಸ್ನೇಹಿ ಇಲಾಖೆಯನ್ನಾಗಿ ಬದಲಾಯಿಸುವತ್ತ ಪ್ರಯತ್ನಿಸುತಿದ್ದೇವೆ ಎಂದು ಕನ್ನಡ ಸಂಸ್ಕೃತಿ ಮತ್ತು ಇಂಧನ ಖಾತೆ ಸಚಿವ ಸುನೀಲಕುಮಾರ್ ಹೇಳಿದರು.
ಪಟ್ಟಣದ ಶಂಕರಮಠದ ಸಭಾಭವನದಲ್ಲಿ ನಡೆದ ಇಂಧನ ಇಲಾಖೆಯ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಮತ್ತು ಪ್ರಮಾಣ ಪತ್ರಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬೆಳಕು ಯೋಜನೆ ಅಡಿ ಉತ್ತರಕನ್ನಡದಲ್ಲಿ 9193 ಜನರಿಗೆ ವಿದ್ಯುತ್ ಒದಗಿಸಲಾಗಿದೆ. ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಹಾಳಾದ ಟಿಸಿಯನ್ನು 24 ಗಂಟೆಗಳ ಒಳಗಾಗಿ ಬದಲಾಯಿಸುವ ಮಹತ್ತರ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಅಮೃತ ಜ್ಯೋತಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 75 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ. ಈ ಬಾರಿ ನೇಮಕಗೊಂಡ ಸಿಬ್ಬಂದಿಗಳ ಪೈಕಿ 110 ಸಿಬ್ಬಂದಿಗಳನ್ನು ಉತ್ತರಕನ್ನಡಕ್ಕೆ ನೀಡಲಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ತಾಲ್ಲೂಕಿನಲ್ಲಿ ಬೆಳಕು ಯೋಜನೆಯಡಿ ಈಗಾಗಲೇ 1300 ಜನರಿಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು, ಇನ್ನುಳಿದ 41 ಫಲಾನುಭವಿಗಳಿಗೆ ಸದ್ಯದಲ್ಲೇ ವಿದ್ಯುತ್ ನೀಡಲಾಗುತ್ತದೆ. ಇಂಧನ ಇಲಾಖೆಯಲ್ಲಿ ಬಡವರಿಗೆ ಅನುಕೂಲವಾಗುವಂತಹ ಹಲವಾರು ಯೋಜನೆಗಳು ಜಾರಿಯಲ್ಲಿದ್ದರೂ ಪ್ರಚಾರ ಪಡೆದುಕೊಂಡಿಲ್ಲ. ಸರ್ಕಾರದ ಯೋಜನೆಗಳ ಕುರಿತು ಜನರಿಗೆ ಮಾಹಿತಿ ನೀಡುವ ಕೆಲಸವಾಗಬೇಕಾಗಿದೆ. ಇಂದು 47 ಲಕ್ಷ ಅನುದಾನದಲ್ಲಿ ಕಾನಸೂರಿಗೆ ಬೇಕಾದ 12 ಕಿ.ಮೀ. ಲಿಂಕ್ ಲೈನ್ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಕಾನಸೂರಿನಲ್ಲಿ ಗ್ರಿಡ್ ಸ್ಥಾಪಿಸಲು ಸ್ಥಳ ಮಂಜೂರಿಯಾಗಿದ್ದು, ಸಚಿವರು ಕೂಡಲೇ ಗ್ರಿಡ್ ಸ್ಥಾಪಿಸಲು ಬೇಕಾದ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಬೆಳಕು ಯೋಜನೆ ಅಡಿ ವಿದ್ಯುತ್ ಪಡೆದ ಫಲಾನುಭವಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಉಪಾಧ್ಯಕ್ಷ ರವಿಕುಮಾರ್ ನಾಯ್ಕ, ಸ್ಥಾಯಿ ಸಮಿತಿಯ ವಿನಯ್ ಹೊನ್ನೆಗುಂಡಿ, ಹುಬ್ಬಳ್ಳಿಯ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ. ಭಾರತಿ, ಹೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top