ಅಂಕೋಲಾ: ಗ್ರಾ.ಪಂ ಅವರ್ಸಾ, ಗ್ರಾ.ಪಂ ಹಟ್ಟಿಕೇರಿ, ಶ್ರೀಉಮಾಮಹೇಶ್ವರ ಕ್ರೀಡಾ ಹಾಗೂ ಸಾಂಸ್ಕೃತಿಕ ಯುವಕ ಸಂಘ ದಂಡೇಭಾಗ ಅವರ್ಸಾ ಮತ್ತು ಭೂದೇವಿ ಆಟೋರಿಕ್ಷಾ ಯೂನಿಯನ್ ಮತ್ತು ಮಾತೃಭೂಮಿ ಸಮಿತಿ ಅವರ್ಸಾ ಇವರ ಸಂಯುಕ್ತ ಆಶ್ರಯದಲ್ಲಿ ಗಣರಾಜ್ಯೋತ್ಸವದ ಕಾರ್ಯಕ್ರಮದ ಅಂಗವಾಗಿ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಅದ್ದೂರಿಯಿಂದ ನಡೆಯಿತು.
ಜಿ.ಪಂನ ಮುಖ್ಯ ಯೋಜನಾಧಿಕಾರಿ ವಿನೋದ್ ಅಣೇಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಳೆದ 30 ವರ್ಷಗಳಿಂದ ಗಣರಾಜ್ಯೋತ್ವವವನ್ನು ಸಾಂಸ್ಕೃತಿಕವಾಗಿ ಹಾಗೂ ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ಮೂಲಕ ಕಾರ್ಯಕ್ರಮದ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿರುವದು ಮಾದರಿಯಾಗಿದೆ ಎಂದರು. ಅವರ್ಸಾ ಗ್ರಾ.ಪಂ ಅಧ್ಯಕ್ಷೆ ಸಾರಾ ಜುವೆಲ್ ಕುಟಿನೋ ಅಧ್ಯಕ್ಷತೆ ವಹಿಸಿ ಮಾತನಾಡಿ, ಅವರ್ಸಾ ಎಂಬ ಗ್ರಾಮೀಣ ಪ್ರದೇಶದಲ್ಲಿ ಅತ್ಯಂತ ವಿಜೃಂಬಣೆಯಿಂದ ವಿದಾಯಕ ಕಾರ್ಯಕ್ರಮವನ್ನು ಹಮ್ಮಿಕೊಂಡು ರಾಷ್ಟ್ರಾಭಿಮಾನಕ್ಕೆ ಸಾಕ್ಷಿಯಾಗಿರುವದು ಹೆಮ್ಮೆ ತಂದಿದೆ ಎಂದರು.
ಹಟ್ಟಿಕೇರಿ ಗ್ರಾ.ಪಂ ಅಧ್ಯಕ್ಷೆ ನಿಶಾ ನಾಗರಾಜ್ ನಾಯ್ಕ, ಗುರುಮನೆಯ ಶ್ರೀಧರ ಗಿರಿಯಪ್ಪ ಮೇತ್ರಿ, ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ, ಜಿಪಂನ ಜೆಜೆಎಮ್‌ನ ಯೋಜನಾ ವ್ಯವಸ್ಥಾಪಕ ವೆಂಕಟೇಶ ನಾಯ್ಕ ಮಾತನಾಡಿದರು.
ಈ ಸಂದರ್ಭದಲ್ಲಿ ವೈದ್ಯರಾದ ಪ್ರೇಮಾನಂದ ನಾಯ್ಕ, ನಾಗರಾಜ್ ನಾಯ್ಕ, ಸಾಂಪ್ರದಾಯಿಕ ಕೃಷಿಕ ಲಕ್ಷ್ಮಣ ಎಚ್.ನಾಯಕ, ನಿವೃತ್ತ ಯೋಧ ಪ್ರಶಾಂತ ಕುಡ್ತಲಕರ, ಹಿರಿಯ ಕಲಾಕಾರ ರತ್ನಾಕರ ನಾಯ್ಕ, ಪ್ರಶಸ್ತಿ ಪುರಸ್ಕೃತ ಚಿತ್ರಕಲಾವಿದ ನರೇಶ ಅಂಬಿಗ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಅವರ್ಸಾ ಗ್ರಾಪಂ ಸದಸ್ಯರಾದ ಶಿಲ್ಪಾ ಗಣೇಶ ನಾಯ್ಕ, ಪ್ರಿಯಾ ಬಾನಾವಳಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅವರ್ಸಾ ಗ್ರಾಪಂ ಮಾಜಿ ಅಧ್ಯಕ್ಷ ಮಾರುತಿ ನಾಯ್ಕ ಸ್ವಾಗತಿಸಿದರು. ಅಮದಳ್ಳಿ ಗ್ರಾಪಂ ಪಿಡಿಓ ನಾಗೇಂದ್ರ ಎಮ್ ನಾಯ್ಕ ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಮಾಮಹೇಶ್ವರ ಕ್ರೀಡಾ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ರೋಹಿದಾಸ ನಾಯ್ಕ, ವಂದಿಸಿದರು. ಪ್ರಮುಖರಾದ ಗಣಪತಿ ಎಲ್.ನಾಯ್ಕ, ಹಟ್ಟಿಕೇರಿ ಗ್ರಾ.ಪಂ ಸದಸ್ಯ ವಿನೋದ ನಾಯ್ಕ, ಅವರ್ಸಾ ಗ್ರಾ.ಪಂ ಪಿಡಿಓ ಸೀತಾ ಮೇತ್ರಿ, ಕಾರ್ಯದರ್ಶಿ ರಾಹುಲ್ ಕಳಸ, ಉಪಾಧ್ಯಕ್ಷೆ ಅಕ್ಷತಾ ನಾಯ್ಕ, ಲೇಖಕ ಸುಜೀತ್ ನಾಯ್ಕ, ಬುಧವಂತ ನಾಯ್ಕ, ಚಂದ್ರಕಾಂತ ಮೇತ್ರಿ, ದರ್ಶನ ನಾಯ್ಕ ಸೇರಿದಂತೆ ಮೊದಲಾದವರು ಇದ್ದರು.