ಅಂಕೋಲಾ: ಹಲವು ವರ್ಷಗಳಿಂದ ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿದ್ದ ಸಿಪಿಐ ಸಂತೋಷ ಶೆಟ್ಟಿ ವರ್ಗಾವಣೆಗೊಂಡಿದ್ದು, ಅವರಿಗೆ ನಯನಾ ಸಾಹಿತ್ಯ ಜಗುಲಿಯಿಂದ ಸನ್ಮಾನಿಸಿ ಗೌರವಿಸಿದರು. ಇವರ ಸ್ಥಾನಕ್ಕೆ ಹಾಜರಾದ ರಾಬರ್ಟ ಡಿಸೋಜಾ ಇವರಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವನದೇವತೆ ತುಳಸಿ ಗೌಡ ಕುರಿತಾಗಿ ರಚನೆಗೊಂಡ ‘ಕಾಡಿನ ತುಳಸಿ’ ಕೃತಿಯನ್ನು ನೀಡಿ ಸ್ವಾಗತಿಸಿದರು.
ನಯನಾ ಸಾಹಿತ್ಯ ಜಗಲಿ ಸಂಚಾಲಕ ನಾಗರಾಜ ಮಂಜಗುಣಿ, ಜಿಲ್ಲಾ ನಾಗರಿಕ ವೇದಿಕೆಯ ಅಧ್ಯಕ್ಷ ಶ್ರೀಪಾದ ನಾಯ್ಕ ಇತರರಿದ್ದರು. ಸಿಪಿಐ ಸಂತೋಷ ಶೆಟ್ಟಿ ಮಾತನಾಡಿ, ಅಂಕೋಲಾದಲ್ಲಿ ಸೇವೆ ಸಲ್ಲಿಸಿರುವುದು ನಿಜಕ್ಕೂ ಹರ್ಷದಾಯಕ. ಇಲ್ಲಿಯ ಜನರು ಕಾನೂನಿಗೆ ಗೌರವಿಸುತ್ತಾರೆ ಎಂದರು.
ಸಿಪಿಐ ಸಂತೋಷ ಶೆಟ್ಟಿ ವರ್ಗಾವಣೆ: ನಯನಾ ಸಾಹಿತ್ಯ ಜಗುಲಿಯಿಂದ ಸನ್ಮಾನ
