ಯಲ್ಲಾಪುರ: ತಾಲೂಕಿನ ಆನಗೋಡಿನಲ್ಲಿ ಫೆ.4ರಂದು ನಡೆಯಲಿರುವ 5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್.ಹೆಗಡೆ ಬಿಡುಗಡೆಗೊಳಿಸಿದರು.
ತಾಲೂಕಿನ ಭೌಗೋಳಿಕ ನಕಾಶೆಯೊಳಗೆ ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳು, ಧಾರ್ಮಿಕ ಕೇಂದ್ರಗಳ ಚಿತ್ರಣವನ್ನು ಒಳಗೊಂಡ ‘ನಮ್ಮ ಯಲ್ಲಾಪುರ’ ಎಂಬ ಲಾಂಛನವನ್ನು ಮನಸ್ವಿನಿ ಸೇಲ್ಸ್ ಪಾಯಿಂಟ್‌ನ ಸುಬ್ರಹ್ಮಣ್ಯ ಭಟ್ಟ ಅವರು ಸುಂದರವಾಗಿ ವಿನ್ಯಾಸ ಮಾಡಿದ್ದಾರೆ. ಪಟ್ಟಣದ ಸಾಹಿತ್ಯ ಭವನದಲ್ಲಿ ಬುಧವಾರ ಸಂಜೆ ನಡೆದ ತಾಲೂಕು ಕಸಾಪ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.
ತಾಲೂಕು ಕಸಾಪ ಅಧ್ಯಕ್ಷ ವಿದ್ವಾನ್ ಸುಬ್ರಹ್ಮಣ್ಯ ಭಟ್ಟ, ಗೌರವ ಕಾರ್ಯದರ್ಶಿ ಶ್ರೀಧರ ಅಣಲಗಾರ, ಕಾರ್ಯಕಾರಿ ಸಮಿತಿಯ ಸದಸ್ಯರಾದ ಕೃಷ್ಣ ಭಟ್ಟ ನಾಯಕನಕೆರೆ, ಗಂಗಾಧರ ಎಸ್.ಎಲ್. ಇತರರಿದ್ದರು.