Slide
Slide
Slide
previous arrow
next arrow

ಫೆ.5ಕ್ಕೆ ಸ್ವಸ್ತಿ ಪ್ರಕಾಶನದ ದಶಮಾನೋತ್ಸವ ಸಂಭ್ರಮ

300x250 AD

ಕುಮಟಾ: ಪಟ್ಟಣದ ಹೆಗಡೆ ಕ್ರಾಸ್‌ನ ನಾದಶ್ರೀ ಕಲಾ ಕೇಂದ್ರದಲ್ಲಿ ಸ್ವಸ್ತಿ ಪ್ರಕಾಶನದ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮ ಫೆ.5ರಂದು ನಡೆಯಲಿದೆ ಎಂದು ಸ್ವಸ್ತಿ ಪ್ರಕಾಶನದ ಸಂಚಾಲಕಿ ಪ್ರಿಯಾ ಎಂ.ಭಟ್ಟ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಸ್ತಿ ಪ್ರಕಾಶನದ ಸಂಚಾಲಕಿ ಪ್ರಿಯಾ ಎಂ.ಭಟ್ಟ ಅವರು, ದಶಮಾನೋತ್ಸವ ಸಂಭ್ರಮದಲ್ಲಿ ಡಾಕ್ಟರ್ ನವೀನ್ ಗಂಗೋತ್ರಿ ಯವರ ಕಥಾಗತ ಹಾಗೂ ಸುಧಾ ಎಂ. ಅವರ ಅಪೂರ್ಣವಲ್ಲ ಕೃತಿ ಅನಾವರಣಗೊಳ್ಳಲಿದೆ. ಖ್ಯಾತ ಸಾಹಿತಿ ನಟ ನಿರ್ದೇಶಕ ಎಸ್.ಎನ್ ಸೇತುರಾಮ್ ಅವರ ಕಥಾಗತ ಅನಾವರಣಗೊಳ್ಳಲಿದೆ. ಅಂಕಣಕಾರ ಮತ್ತು ಸಂಪಾದಕರಾದ ವಿನಾಯಕ ಭಟ್ಟ ಮೂರೂರು ಅವರು ಅಪೂರ್ಣವಲ್ಲ ಕೃತಿ ಅನಾವರಣಗೊಳಿಸಲಿದ್ದಾರೆ. ಅನಾವರಣಗೊಳ್ಳಲಿರುವ ಕೃತಿಗಳ ಕುರಿತು ವಿಮರ್ಶಕರು, ಸಾಹಿತಿಗಳಾದ ನಿತ್ಯಾನಂದ ಹೆಗಡೆ ಹಾಗೂ ಸುಧಾರಾಣಿ ಅವರು ಮಾತನಾಡಲಿದ್ದಾರೆ. ಅಲ್ಲದೇ ಕೃತಿಕಾರರಾದ ಡಾ.ನವೀನ್ ಗಂಗೋತ್ರಿ ಹಾಗೂ ಸುಧಾ ಎಂ. ಭಾಗವಹಿಸಲಿದ್ದಾರೆ.

300x250 AD

ಸಭಾ ಕಾರ್ಯಕ್ರಮದ ಬಳಿಕ ಎಂ.ಪೂರ್ವಿತಾ ಹಾಗೂ ಮಕ್ಕಳಿಂದ ಭರತನಾಟ್ಯ ಪ್ರದರ್ಶನ ಮತ್ತು ಶ್ವೇತಾ ಸಂಗಡಿಗರಿAದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಅವರು ಮನವಿ ಮಾಡಿದರು.

Share This
300x250 AD
300x250 AD
300x250 AD
Back to top