Slide
Slide
Slide
previous arrow
next arrow

ಪ್ರತಿಯೊಬ್ಬರೂ ಮತ ಹಾಕುವ ಮೂಲಕ ಪ್ರಜಾಪ್ರಭುತ್ವದ ಕಾವಲುಗಾರರಾಗಲು ಸ್ಪೀಕರ್ ಕಾಗೇರಿ ಕರೆ

300x250 AD

ಬೆಂಗಳೂರು: ನಮ್ಮ ಮತ ನಮ್ಮೆಲ್ಲರ ಭವಿಷ್ಯ ನಿರ್ಧರಿಸುತ್ತದೆ. ಆದ್ದರಿಂದ ಪ್ರತಿಯೊಬ್ಬ ಪ್ರಜೆಯು ಮತ ಹಾಕುವ ಮೂಲಕ ಪ್ರಜಾಪ್ರಭುತ್ವದ ಕಾವಲುಗಾರರಾಗಬೇಕು ಎಂದು ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಬೆಂಗಳೂರು ಜಿಲ್ಲಾಡಳಿತದ ವತಿಯಿಂದ ಬೆಂಗಳೂರಿನ ಸೆಂಟ್ರಲ್ ಕಾಲೇಜ್‍ನ ಜ್ಞಾನಜ್ಯೋತಿ ಸಭಾಂಗಣದಲ್ಲಿ, ಕಾನೂನು ವ್ಯಾಸಂಗ ಮಾಡುತ್ತಿರುವ ಹಾಗೂ ಪದವಿ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳೊಂದಿಗೆ ಹಮ್ಮಿಕೊಳ್ಳಲಾದ “ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯ” ಕುರಿತು ಸಂವಾದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದ ಅವರು,  ‘ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಯಾರೂ ಸರಿ ಇಲ್ಲ ಅನಿಸಿದರೆ ನೋಟಾ ಚಲಾಯಿಸಿ. ಇಲ್ಲದಿದ್ದರೆ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲೇ ಉತ್ತಮರನ್ನು ಆಯ್ಕೆ ಮಾಡಿ’ ಎಂದು ಸಲಹೆ ನೀಡಿದರು.

‘ರಾಜಕಾರಣಿಗಳು ಹಣ ಕೊಡಬಾರದು. ಮತದಾರರು ಹಣ ತೆಗೆದುಕೊಳ್ಳಬಾರದು. ಪ್ರಸ್ತುತ ಪರಿಸ್ಥಿತಿಯಲ್ಲಿ ನಾವು ವಿಷವರ್ತುಲದಲ್ಲಿ ಸಿಲುಕಿದ್ದೇವೆ. ದೇವಸ್ಥಾನ, ಮಸೀದಿ, ಚರ್ಚ್‌ಗೆ ಹೋದರೂ ಹಣ ಕೇಳುತ್ತಾರೆ. ಮೂಲಸೌಕರ್ಯಗಳ ಬಗ್ಗೆ ಪ್ರಶ್ನೆ ಕೇಳುವ ಬದಲು ಹಬ್ಬ, ಕ್ರೀಡಾಕೂಟಗಳ ಹೆಸರಿನಲ್ಲಿ ರಾಜಕಾರಣಿಗಳಿಂದ ಹಣ ಕೇಳುತ್ತಾರೆ.‌ ರಾಜಕಾರಣಿಗಳು ಎಲ್ಲಿಂದ ಹಣ ತರಬೇಕು? ಇಂತಹ ವಿಷವರ್ತುಲದಿಂದ ಹೊರಬರದಿದ್ದರೆ ಪರಿಸ್ಥಿತಿ ಸುಧಾರಿಸುವುದಿಲ್ಲ’ ಎಂದರು.

300x250 AD

ಭಾರತದ 140 ಕೋಟಿ ಜನರು ನನ್ನ ಮತವನ್ನು ಮಾರಾಟ ಮಾಡುವುದಿಲ್ಲ. ಆತ್ಮಸಾಕ್ಷ್ಮಿ ಪರವಾಗಿ ಮತ ಹಾಕುತ್ತೇನೆ ಎಂದು ಜನಸಮುದಾಯದಲ್ಲಿ ಜನಾಂದೋಲನ ಪ್ರಾರಂಭಿಸಬೇಕು. ಹಿರಿಯ ನಾಗರಿಕರು ತಮ್ಮ ಜೀವನಾನುಭವವನ್ನು ಹಾಗೂ ಸಮಾಜದ ಆಗು-ಹೋಗುಗಳ ಬಗ್ಗೆ ಯುವಕರಿಗೆ ತಿಳಿಸಿ, ಸಮಾಜಕ್ಕೆ ಮಾರ್ಗದರ್ಶನ ನೀಡಿ, ಮತದಾರರಲ್ಲಿ ಕಡ್ಡಾಯವಾಗಿ ಮತ ಹಾಕುವಂತೆ ಪ್ರೇರೇಪಿಸಬೇಕು ಎಂದು ತಿಳಿಸಿದರು.

ಮಾಧ್ಯಮಗಳು ಒಳ್ಳೆಯ ಪ್ರಚಾರ ಮಾಡುವುದರ ಮೂಲಕ ಮತದಾನದ ಅರಿವು ಮೂಡಿಸಬೇಕು. ಎಲ್ಲ ರಾಜಕೀಯ ಪಕ್ಷಗಳು ಸಹ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಹೇಳಿದರು.

Share This
300x250 AD
300x250 AD
300x250 AD
Back to top