Slide
Slide
Slide
previous arrow
next arrow

3 ದಿನಗಳ ‘ರಂಗ ಕಾರ್ಯಾಗಾರ’ ಯಶಸ್ವಿ: ರಂಗಕರ್ಮಿಗೆ ಕೃತಜ್ಞತೆ ಸಲ್ಲಿಸಿದ ಪ್ರಜ್ವಲ ಟ್ರಸ್ಟ್

300x250 AD

ಶಿರಸಿ: ಪ್ರಜ್ವಲ ಟ್ರಸ್ಟ್’ನಿಂದ ಆಯೋಜಿತವಾದ ಮೂರು‌ದಿನಗಳ ರಂಗ ಕಾರ್ಯಗಾರವು ಜ.30, ಸೋಮವಾರಂದು ವಿದ್ಯುಕ್ತವಾಗಿ ಚಾಲನೆಗೊಂಡು ಫೆ.1 ಬುಧವಾರದಂದು ಯಶಸ್ವಿಯಾಗಿ ಸಂಪನ್ನಗೊಂಡಿತು.

ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೀತಾ ಕೂರ್ಸೆ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ರಂಗ ಕಾರ್ಯಗಾರದ ಮೊದಲನೇ ದಿನದಂದು ರಂಗಕರ್ಮಿ ಧನುಷ್ ನಾಗ್’ರವರು ರಂಗಕಲೆಯ ಪರಿಕಲ್ಪನೆ, ಹಾವ-ಭಾವ, ರಂಗದಲ್ಲಿರಬೇಕಾದ ಉತ್ಪ್ರೇಕ್ಷೆಯ ಮಟ್ಟಗಳ ಬಗ್ಗೆ ಹಲವಾರು ಕಥೆ, ನಿದರ್ಶನಗಳ ಮೂಲಕ ತಿಳಿಸಿಕೊಟ್ಟರು. ಶಿಬಿರಾರ್ಥಿಗಳಿಗೆ ಆಟಗಳ ಮೂಲಕ ಸಂವೇದನೆಗಳಿಗಿರುವ ಮಹತ್ವಗಳ ಬಗ್ಗೆ ಅರಿವು ಮೂಡಿಸಲಾಯಿತು.

ಕಾರ್ಯಾಗಾರದ ಎರಡನೇ ದಿನ ವಾಚಿಕದ ಮಹತ್ವವನ್ನು, ಸಂಜ್ಞೆಗಳ ಅರಿವು, ಸಹಕಲಾವಿದರೊಂದಿಗಿನ ಸಂಬಂಧಕ್ಕಿರುವ ಪ್ರಾಮುಖ್ಯತೆ ಹೀಗೆ ಹಲವಾರು ಉಪಯುಕ್ತ ವಿಷಯಗಳನ್ನು ಕ್ರಿಯಾತ್ಮಕ ಚಟುವಟಿಕೆಗಳ ಮೂಲಕ ತಿಳಿಸಿದರು.

300x250 AD

ಕೊನೆಯ ದಿನದಂದು ನವರಸಗಳ ಅಭಿನಯ, ಪರಕಾಯ ಪ್ರವೇಶದ ಕಲ್ಪನೆ, ಕಲಾವಿದ ರಂಗಭೂಮಿಯಲ್ಲಿ ತನ್ನ ಪಾತ್ರಕ್ಕೆ ಹೇಗೆ ಜೀವ ತುಂಬಬೇಕು ಇಂತಹ ವಿಷಯಗಳನ್ನು ಅರ್ಥೈಸಿಕೊಟ್ಟರು. ಕೊನೆಯಲ್ಲಿ ಶಿಬಿರಾರ್ಥಿಗಳು ನಾಟಕದ ಒಂದು ದೃಶ್ಯವನ್ನು ಪ್ರದರ್ಶಿಸಿ ನಾಟಕದಲ್ಲಿ ಪಾತ್ರಗಳ ನೈಜತೆ, ಪಾತ್ರಧಾರಿಗಳ ನಡುವೆ ಹೊಂದಾಣಿಕೆಯನ್ನು ಪ್ರಾಯೋಗಿಕವಾಗಿ ಅರಿತುಕೊಂಡರು.

ಸಮಾರೋಪ ಕಾರ್ಯಕ್ರಮದಲ್ಲಿ ಪ್ರಜ್ವಲ ಟ್ರಸ್ಟ್ ಅಧ್ಯಕ್ಷೆ ಬಿಂದು ಹೆಗಡೆ ರಂಗಕರ್ಮಿ ಧನುಷ್ ನಾಗ್’ರವರಿಗೆ ನೆನಪಿನ‌ ಕಾಣಿಕೆ ನೀಡಿದರು. ಸ್ಥಳಾವಕಾಶ ನೀಡಿದ ಆದರ್ಶ ವನಿತಾ ಸಮಾಜದ ಪದಾಧಿಕಾರಿಗಳಿಗೆ ಹಾಗೂ‌ ಶಿಬಿರಾರ್ಥಿಗಳಿಗೆ ವಂದನೆ ಸಲ್ಲಿಸಿದರು.

Share This
300x250 AD
300x250 AD
300x250 AD
Back to top