ಶಿರಸಿ: ತಾಲೂಕಿನ ಯಡಳ್ಳಿಯ ವಿದ್ಯೋದಯ ಪದವಿ ಪೂರ್ವ ವಿದ್ಯಾಲಯದ ಸಭಾಭವನದಲ್ಲಿ ಫೆ.7ರಂದು ಸಂಜೆ 5 ಗಂಟೆಯಿಂದ ಯಡಳ್ಳಿ ಉತ್ಸವದ ಅಂಗವಾಗಿ ವಿವಿಧ ಶಾಸ್ತ್ರೀಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಪಂ.ಶ್ರೀಪಾದ ರಾವ್ ಕಲ್ಗುಂಡಿಕೊಪ್ಪ ಫೌಂಡೇಶನ್ ಶಿರಸಿ ಹಾಗೂ ರಾಜದೀಪ ಟ್ರಸ್ಟ್ ಇವುಗಳ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಸಂಘಟನೆಗೊoಡಿದೆ. ಅಂತರಾಷ್ಟ್ರೀಯ ಗಾಯನ ಖ್ಯಾತಿಯ ಪಂ. ಜಯತೀರ್ಥ ಮೇವುಂಡಿಯವರ ಗಾಯನಕ್ಕೆ ಖ್ಯಾತ ಸಿತಾರ್ ವಾದಕ ಉಸ್ತಾದ ರಫೀಕ್ ಖಾನ್‌ರವರ ಸಿತಾರ್ ವಾದನ ಜುಗಲ್‌ಬಂದಿ ನಡೆಯಲಿದೆ. ತಬಲಾ ಸಾಥಿಯಾಗಿ ವಿ. ಲಕ್ಷ್ಮೀಶ್ ರಾವ್ ಕಲ್ಗುಂಡಿಕೊಪ್ಪ ಹಾಗೂ ಹಾರ್ಮೋನಿಯಂನಲ್ಲಿ ಭರತ್ ಹೆಗಡೆ ಹೆಬ್ಬಲಸು ಸಹಕರಿಸಲಿದ್ದಾರೆ.
ಮೇವುಂಡಿಯವರ ಸಂಗೀತ ಕಚೇರಿ ಪೂರ್ವದಲ್ಲಿ ‘ಗಾನ ವೈವಿಧ್ಯ’ ನಡೆಯಲಿದ್ದು ಯುವ ಪ್ರತಿಭೆ ಗಾಯಕಿ ಕು.ನೈದಿಲೆ ಹೆಗಡೆ ಹೊರಾಲೆ ತಮ್ಮ ಗಾಯನ ಪ್ರಸ್ತುತ ಪಡಿಸಲಿದ್ದಾರೆ. ಸಾಥಿಯಾಗಿ ತಬಲಾದಲ್ಲಿ ವಿ.ಶೇಷಾದ್ರಿ ಅಯ್ಯಂಗಾರ್ ಹೊನ್ನಾವರ ಹಾಗೂ ಸಂವಾದಿನಿಯಲ್ಲಿ ಭರತ ಹೆಬ್ಬಲಸು ಸಹಕರಿಸಲಿದ್ದಾರೆ.
ಕಾರ್ಯಕ್ರಮದ ನಡುವೆ ಪ್ರಸಿದ್ಧ ಕೊಳಲು ತಯಾರಕರಾದ ಎಂ.ವಿ.ಹೆಗಡೆ ನೆಟ್ಟಗಾರ್‌ರವರಿಗೆ ಸನ್ಮಾನ ಕಾರ್ಯಕ್ರಮವಿದ್ದು, ಜೀವಜಲ ಕಾರ್ಯಪಡೆ ಹಾಗೂ ಪರಿವಾರ ಸಹಕಾರಿ ಸಂಘದ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್‌ರವರು ನೆರವೇರಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯಅತಿಥಿಗಳಾಗಿ ಉದ್ಯಮಿ ಆರ್.ಜಿ.ಭಟ್ಟ ವರ್ಗಾಸರ, ಎಂ.ಇ.ಎಸ್. ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಧಾ.ಹಾ.ಒಕ್ಕೂಟ ಮತ್ತು ಕೆ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನಮನೆ, ಟಿ.ಎಸ್.ಎಸ್. ನಿರ್ದೇಶಕ ಶಶಾಂಕ ಹೆಗಡೆ, ವಕೀಲರಾದ ರಾಜೇಂದ್ರ ಹೆಗಡೆ ತಟ್ಟೀಸರ, ರಾಜದೀಪ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ದೀಪಕ ದೊಡ್ಡೂರು, ಅಡಿಕೆ ವರ್ತಕರ ಸಂಘದ ಅಧ್ಯಕ್ಷ ಸತೀಶ ಭಟ್ಟ ನಾಡಗುಳಿ, ಲಯನ್ ಕ್ಲಬ್ ಮಾಜಿ ಅಧ್ಯಕ್ಷ ಲೋಕೇಶ ಹೆಗಡೆ ಪ್ರಗತಿ, ಅಡಿಕೆ ವರ್ತಕ ಶಿವರಾಮ ಹೆಗಡೆ ಧನಶ್ರೀ, ಯಕ್ಷಗೆಜ್ಜೆ ಸಂಸ್ಥಾಪಕ ಅಧ್ಯಕ್ಷೆ ನಿರ್ಮಲಾ ಹೆಗಡೆ ಗೋಳಿಕೊಪ್ಪ, ಮಾ.ಶಿ.ಪ್ರ.ಸ. ಯಡಳ್ಳಿ ಗೌರವಕಾರ್ಯದರ್ಶಿ ಎಂ.ವಿ. ಹೆಗಡೆ, ಕಾ.ಗ್ರೂ.ಗ್ರಾ.ಸೇ. ಸಂಘದ ನಿರ್ದೇಶಕ ಮಂಜುನಾಥ ಹೆಗಡೆ ಕಬ್ನಳ್ಳಿ ಹಾಗೂ ಜಿಪಂ ಪ್ರಥಮ ದರ್ಜೆ ನಿವೃತ್ತ ನೌಕರರಾದ ಸುನಂದಾ ಅಶೋಕ ಹಾಸ್ಯಗಾರ ಆಗಮಿಸಲಿದ್ದಾರೆ.
ಸಂಗೀತ ಪ್ರಿಯರಿಗೆ ಮುಕ್ತ ಅವಕಾಶವಿದೆ ಎಂದು ಕಾರ್ಯಕ್ರಮದ ಸಂಘಟಕ ಗಿರಿಧರ ಕಬ್ನಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.