ಅಂಕೋಲಾ: ತಾಲೂಕಿನ ಅಗಸೂರು ಹಾಗೂ ವಾಸರೆಕುದ್ರಿಗೆ- ಶಿರಗುಂಜಿ ಪಂಚಾಯತ್ ವ್ಯಾಪ್ತಿಯ ಬಲಿಗದ್ದೆ ಶಾಲಾ ಆವರಣದಲ್ಲಿ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾರವಾರ ಊರ ನಾಗರಿಕರು ಯುವಕ ಸಂಘ ಹಾಗೂ ಹಳೆ ವಿದ್ಯಾರ್ಥಿಗಳ ಸಹಕಾರದೊಂದಿಗೆ ಕನ್ನಡ ಚಲನಚಿತ್ರ ಗೀತೆ ಸ್ಪರ್ಧೆ, ರಂಗೋಲಿ ಸ್ಪರ್ಧೆ ನಡೆಯುವುದರೊಂದಿಗೆ ಪಾಂಚಜನ್ಯ ಹಾಗೂ ಸುದರ್ಶನ ವಿಜಯ ಎಂಬ ಯಕ್ಷಗಾನ ಬಯಲಾಟವನ್ನು ಗ್ರಾಮೀಣ ಕಲಾವಿದರು ಸಾವಿರಾರು ಪ್ರೇಕ್ಷಕರ ಎದುರು ಅದ್ಭುತವಾಗಿ ಕಲಾ ಪ್ರದರ್ಶನ ನೀಡಿದರು.
ಅಂದಿನ ಸಂಜೆಯ ಕಾರ್ಯಕ್ರಮದ ಉದ್ಘಾಟನೆಯನ್ನು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ.ಪ್ರಕಾಶ ನಾಯಕ ಬೆಳೆಸೆಯವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಾ, ಗ್ರಾಮೀಣ ಭಾಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲು ಅನುವು ಮಾಡಿಕೊಟ್ಟ ಬಲಿಗದ್ದೆ ಶಾಲೆಯ ಮುಖ್ಯೋಪಾಧ್ಯಕ ಸಣ್ಣಪ್ಪ ನಾಯಕ ಹಾಗೂ ಎಸ್‌ಡಿಎಮ್‌ಸಿ ಅಧ್ಯಕ್ಷ ನಾಗಪ್ಪ ಗೌಡ ಹಾಗೂ ಊರ ಪ್ರಮುಖರನ್ನು ಅಭಿನಂದಿಸಬೇಕು. ಇಂತಹ ವ್ಯವಸ್ಥೆ ಪಟ್ಟಣದಲ್ಲಿ ಸಿಗಲಾರದು ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ಸರೆ ವಿದ್ಯಾರ್ಥಿಗಳ ಪೋಷಕರ ಗ್ರಾಮೀಣ ಜನರ ಮನಸ್ಸು ಮುದಗೊಳ್ಳುವುದು ಎಂದು ಮಾರ್ಮಿಕವಾಗಿ ನುಡಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ವಾಸರೆಕುದ್ರಿಗೆ ಗ್ರಾಮ ಪಂಚಾಯತಿಯ ಅಧ್ಯಕ್ಷ ಪ್ರದೀಪ ನಾಯಕರು ಮಾತನಾಡಿ, ಇಲ್ಲಿಯ ಶಾಲೆಯ ಶಿಕ್ಷಕರು ಕ್ರಿಯಾಶೀಲರು ಈ ಶಾಲೆಗೆ ಬೇಕಾಗಿರುವು ಎಲ್ಲಾ ಬೇಡಿಕೆಗಳನ್ನು ಪೂರೈಸಲು ನಾನು ಸಿದ್ದನಿದ್ದೇನೆ ನನ್ನ ಅವಧಿಯಲ್ಲಿ ಈ ಗ್ರಾಮಕ್ಕೆ ಸಿಗಬೇಕಾದ ಸಹಾಯ ಸಹಕಾರವನ್ನು ಚಾಚು ತಪ್ಪದೆ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಕಾರ್ಯಕ್ರಮಕ್ಕೆ ಶಾಲಾ ಮುಖ್ಯೋಧ್ಯಾಪಕ ಸಣ್ಣಪ್ಪ ನಾಯಕ ಪ್ರಾಸ್ತಾವಿಕ ಮಾತನಾಡಿ, ಎಲ್ಲರನ್ನು ಸ್ವಾಗತಿಸಿದರು. ಉಪನ್ಯಾಸಕರಾಗಿ ಆಗಮಿಸಿದ ದಿವೇಕರ ಮಹಾವಿದ್ಯಾಲಯ ಕಾರವಾರದ ಕನ್ನಡ ಉಪನ್ಯಾಸಕರಾದ ರಾಜೇಶ ಮರಾಠಿಯವರು ಕನ್ನಡ ನುಡಿ ಸಂಸ್ಕೃತಿಯ ಕುರಿತು ಉಪನ್ಯಾಸ ನೀಡಿದರು ಪ್ರತಿಷ್ಠಾನದ ಸದಸ್ಯರಾದ ಪ್ರವೀಣ ನಾಯಕ ಪ್ರತಿಷ್ಠಾನದ ಧೇಯೋದ್ದೇಶವನ್ನು ಪರಿಚಯಿಸಿದರು.
ಎಸ್‌ಡಿಎಮ್‌ಸಿ ಅಧ್ಯಕ್ಷ ನಾಗಪ್ಪ ಗೌಡರು ಕಾರ್ಯಕ್ರಮದ ಉಪಯುಕ್ತತೆಯ ಬಾರಿ ಮಾತನಾಡಿದರು. ರಂಗೋಲಿ ಹಾಗೂ ಕನ್ನಡ ಚಲನಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ ಸಂಜನಾ ನಾಯ್ಕ, ಮಂಜುನಾಥ ನಾಯ್ಕ, ವಿಶಾಲಾ ಗೌಡ, ತೇಜ ನಾಯ್ಕ, ಅಕ್ಷತಾ ನಾಯ್ಕ, ಅಂಕಿತಾ ನಾಯ್ಕ, ಶ್ರೇಯಾ ನಾಯ್ಕ, ಭವ್ಯ ಗೌಡ, ಪ್ರಕಾಶ ಗೌಡ ಇವರುಗಳಿಗೆ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಶಾಲೆಯ ವತಿಯಿಂದ ಪ್ರಕಾಶ ಪರಮೇಶ್ವರ ಗೌಡ ಹಾಗೂ ಖುಷಿ ನಾಗಪ್ಪ ಗೌಡ ಇವರಿಗೆ ಆದರ್ಶ ವಿದ್ಯಾರ್ಥಿ ಪ್ರಶಸ್ತಿ ನೀಡಲಾಯಿತು.
ಖುಷಿ ಗೌಡ ಸಂಗಡಿಗರು ಪ್ರಾರ್ಥಿಸಿದರು. ಮಂಜುನಾಥ ಗೌಡ ತಮ್ಮ ಅನಿಸಿಕೆಗಳನ್ನು ಹೇಳಿದರು. ಮಹೇಂದ್ರ ವಡ್ಡರ್ ನಿರೂಪಿಸಿ ವಂದಿಸಿದರು. ನಂತರ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಯಕ್ಷಗಾನ ಪ್ರದರ್ಶನ ನಡೆಯಿತು.