• Slide
    Slide
    Slide
    previous arrow
    next arrow
  • ಫೆ.2ರಿಂದ ಕರುನಾಡ ಕರಾವಳಿ ಉತ್ಸವ

    300x250 AD

    ಕಾರವಾರ: ನಗರದ ರವೀಂದ್ರನಾಥ ಟಾಗೋರ ಕಡಲತೀರದಲ್ಲಿ ಕರುನಾಡ ಕರಾವಳಿ ಉತ್ಸವದ ಸಾಂಸ್ಕೃತಿ ಕಾರ್ಯಕ್ರಮಗಳಿಗೆ ಫೆ.2ರಿಂದ ಚಾಲನೆ ನೀಡಲಾಗುತ್ತದೆ. ರಾಜ್ಯ, ರಾಷ್ಟ್ರಮಟ್ಟದ ಪ್ರಖ್ಯಾತ ಕಲಾವಿದರು ಹಾಗೂ ಅವರ ತಂಡ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರನ್ನು ಮನರಂಜಿಸಲಿದೆ ಎಂದು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಎನ್.ದತ್ತ ಹೇಳಿದರು.
    ಕರುನಾಡ ಕರಾವಳಿ ಉತ್ಸವದ ಪೋಸ್ಟರ್ ಬಿಡುಗಡೆಗೊಳಿಸಿ ಕಾರ್ಯಕ್ರಮದ ವಿವರ ನೀಡಿದ ಅವರು, ಫೆ.2ರಂದು ಸಂಜೆ 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಶ್ರೀರಸ್ತು ನೃತ್ಯಕಲಾ ಕೇಂದ್ರದಿoದ ಭರತನಾಟ್ಯ, ಕಾರವಾರ ತಾಲೂಕಿನ ಅಸ್ನೋಟಿಯ ಶಿವಾಜಿ ವಿದ್ಯಾಮಂದಿರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಖ್ಯಾತ ಗಾಯಕರುಗಳಾದ ನದಿರಾ ಬಾನು, ಪಲ್ಲವಿ ಪ್ರಭು, ಸುಪ್ರೀತ್ ತಂಡದಿoದ ರಸಮಂಜರಿ, ಫೆ.3ರಂದು ಸಂಜೆ ಸದಾಶಿವಗಡದ ವಿಜಯೇಂದ್ರ, ಪೂನಂ ದಂಪತಿ ನೇತೃತ್ವದ ರಿದಂ ಹಾಟ್ಬೀðಟ್ ತಂಡದಿoದ ನೃತ್ಯ ಪ್ರದರ್ಶನ, ಗಾಯಕ ದೀಪೇಶ ನಾಯ್ಕ ಅವರಿಂದ ಸಂಗೀತದೊoದಿಗೆ ಚಿತ್ರ ಬಿಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ವಿವರಿಸಿದರು.
    ಫೆ.4ರಂದು ಮಧ್ಯಾಹ್ನ 4 ಗಂಟೆಗೆ ದಿನೇಶ ಹೊಳ್ಳ ಅವರ ತಂಡದಿoದ ಗಾಳಿಪಟ ಸ್ಪರ್ಧೆ ಆಯೋಜಿಸಲಾಗಿದೆ. ಸಂಜೆ ಸ್ಥಳೀಯ ಕಲ್ಪನಾರಶ್ಮಿ ಕಲಾಲೋಕದಿಂದ ನೃತ್ಯ, ರ‍್ಯಾಪರ್ ಅಲೋಕ್ ಬಾಬು ಅವರಿಂದ ಸಂಗೀತ ಸಂಜೆ, ಫೆ.5ರಂದು ಕೈಗಾ ಕರೋಕೆ ತಂಡದಿoದ ಸಂಗೀತ ಸಂಜೆ, ಕಾಂತಾರ ಖ್ಯಾತಿಯ ರಂಪಾ ಮತ್ತು ಸುಂದರ್ ಅವರ ತಂಡದಿoದ ಕಚಗುಳಿ ಹಾಸ್ಯಮಯ ಕಾರ್ಯಕ್ರಮ, ಇಂಡಿಯನ್ ಐಡಿಯಲ್ ಮೋಹಿತ್ ಚೋಪ್ರಾ ಅವರಿಂದ ರಸಮಂಜರಿ ಕಾರ್ಯಕ್ರಮವಿದೆ. ಫೆ.6ರಂದು ಸಮಾರೋಪ ಸಮಾರಂಭ, ನಂತರ ಶ್ರೀರಸ್ತು ತಂಡದಿoದ ಭರತನಾಟ್ಯ, ಗೋವಾದ ರಾಕರ್ ಬ್ಯಾಂಡ್ ಪ್ರದರ್ಶನ ನಡೆಯಲಿದೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ವೈಭವ ವೆರ್ಣೇಕರ, ಪೂನಂ ವಿಜಯೇಂದ್ರ, ಸುಜೀತ ಮಾಳ್ಸೇಕರ, ಅನಿಲ ನಾಯ್ಕ, ಕಮಲಾಕರ ಗುನಗಿ, ಮದನ ಗುನಗಿ, ದೀಪಕ ಕುಡಾಳಕರ, ರತ್ನಾಕರ ನಾಯ್ಕ, ಮಂಗೇಶ ನಾಯ್ಕ ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top