ಹೊನ್ನಾವರ: ತಂಬಾಕು ನಿಯಂತ್ರಣದ ಕಾರ್ಯಕ್ರಮದ ಅಡಿ ತಾಲೂಕಿನ ಮಂಕಿ, ಮಾಗೋಡ ಮತ್ತು ಕುದ್ರಗಿ ಭಾಗದಲ್ಲಿ ಕಿರಾಣಿ ಮತ್ತಿತರ ಅಂಗಡಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಹಿನ್ನಲೆ ಅಂಗಡಿಗಳಿಗೆ ದಾಳಿ ಮಾಡಿ ಅಧಿಕಾರಿಗಳು ದಂಡ ವಿಧಿಸಿದರು. ತಂಬಾಕು ಉತ್ಪನ್ನದಿಂದ ಆಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಹಾಗೂ ಅಂಗಡಿ ಮಾಲಿಕರಿಗೆ ಕರಪತ್ರವನ್ನು ನೀಡಿ ಜಾಗೃತಿ ಮೂಡಿಸಲಾಯಿತು.
ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಉಷಾ ಹಾಸ್ಯಗಾರ, ಉಪ ತಹಶೀಲ್ದಾರ್ ಬಿ.ಆರ್.ನಾಯ್ಕ, ಆರೋಗ್ಯ ಶಿಕ್ಷಣಾಧಿಕಾರಿ ಆನಂದ ಶೇಟ್, ಆರೊಗ್ಯ ನಿರೀಕ್ಷಕ ಚಿದಾನಂದ ಎಸ್., ಶಿಕ್ಷಣ ಇಲಾಖೆಯ ಪ್ರಮೋದ ನಾಯ್ಕ ಹಾಗೂ ತಹಶೀಲ್ದಾರ್ ಕಛೇರಿ, ಗ್ರಾಮ ಪಂಚಾಯತ, ಶಿಶು ಅಭಿವೃದ್ಧಿ, ಪೊಲೀಸ್ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಹಾಜರಿದ್ದರು.