ಕುಮಟಾ: ಎಐಸಿಸಿ ಮುಖಂಡ ರಾಹುಲ್ ಗಾಂಧಿಯವರು ಭಾರತವನ್ನು ಒಗ್ಗೂಡಿಸುವ ಉದ್ದೇಶದಿಂದ ಕೈಗೊಂಡ ಐತಿಹಾಸಿಕ ಭಾರತ ಜೋಡೊ ಯಾತ್ರೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಂಭ್ರಮಾಚರಣೆ ಮಾಡಲಾಯಿತು.
ಭಾರತವನ್ನು ಒಗ್ಗೂಡಿಸುವ ಉದ್ದೇಶದಿಂದ ಎಐಸಿಸಿ ಮುಖಂಡ ರಾಹುಲ್ ಗಾಂಧಿಯವರು ಕೈಗೊಂಡ ಐತಿಹಾಸಿಕ ಭಾರತ ಜೋಡೊ ಯಾತ್ರೆ ಜಮ್ಮು ಮತ್ತು ಕಾಶ್ಮೀರದ ಶ್ರೀನಗರದಲ್ಲಿ ಮುಕ್ತಾಯವಾಗಿದೆ. ಆ ನಿಮಿತ್ತ ಸಂಭ್ರಮಾಚರಣೆ ಮಾಡುವಂತೆ ಕೆಪಿಸಿಸಿ ನಿರ್ದೇಶನ ನೀಡಿದ ಹಿನ್ನಲೆಯಲ್ಲಿ ಹಮ್ಮಿಕೊಂಡ ಸಂಭ್ರಮಾಚರಣೆಯಲ್ಲಿ ಮೊದಲು ರಾಷ್ಟ್ರಧ್ವಜಾರೋಹಣವನ್ನು ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರು ನೆರವೇರಿಸಿದರು. ಬಳಿಕ ಕಾಂಗ್ರೆಸ್ ಮುಖಂಡರು ಮಹಾತ್ಮ ಗಾಂಧಿಜೀಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಮಾಜಿ ಶಾಸಕಿ ಶಾರದಾ ಮೋಹನ ಶೆಟ್ಟಿ ಅವರು, ಎಐಸಿಸಿ ಮುಖಂಡ ರಾಹುಲ್ ಗಾಂಧಿಯವರು ಕೈಗೊಂಡ ಐತಿಹಾಸಿಕ ಭಾರತ ಜೋಡೊ ಯಾತ್ರೆ ಯಶಸ್ವಿಯಾಗಿರುವುದು ನಮ್ಮೆಲ್ಲರಿಗೂ ಖುಷಿಯ ಸಂಗತಿ. ಅಖಂಡ ಭಾರತದ ಕಲ್ಪನೆಯೊಂದಿಗೆ ಈ ಐಕ್ಯತಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್ ಯಾವತ್ತೂ ಎಲ್ಲ ಧರ್ಮಿಯರನ್ನು ಸಮಾನವಾಗಿ ನೋಡತ್ತೆ. ಎಲ್ಲರೂ ಕೂಡಿ ಬಾಳಬೇಕೆಂಬ ಸದುದ್ದೇಶ ನಮ್ಮ ದೇಶದ ಸಂಸ್ಕೃತಿಯಾಗಿದೆ. ಆದರೆ ಸಂಸ್ಕೃತಿಯನ್ನು ಕೆಡಿಸುವ ಕಾರ್ಯ ಮಾಡಲಾಗುತ್ತಿದೆ. ನಾವ್ಯಾರು ಪ್ರಚೋದನೆಗೆ ಒಳಗಾಗದೇ ಪ್ರೀತಿ, ವಿಶ್ವಸಾಸದಿಂದ ಬದುಕು ಸಾಗಿಸೋಣ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಎಲ್.ನಾಯ್ಕ ಮತ್ತು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ನಾಯಕ ಅವರು ಭಾರತ ಐಕ್ಯತಾ ಯಾತ್ರೆಯ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಅಲ್ಲದೆ ಚಿತ್ರದುರ್ಗದ ಚಳ್ಳಕೆರೆಯಲ್ಲಿ ಕುಮಟಾ ವಿಧಾನಸಭಾ ವ್ಯಾಪ್ತಿಯಿಂದ ಭಾಗವಹಿಸಿದಾಗ ತಮಗಾದ ಅನುಭವವನ್ನು ಹಂಚಿಕೊAಡರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ರವಿಕುಮಾರ ಶೆಟ್ಟಿ, ರತ್ನಾಕರ ನಾಯ್ಕ, ಯಶೋಧರ ನಾಯ್ಕ, ನಾಗೇಶ್ ನಾಯ್ಕ, ಪುರಸಭೆ ಸದಸ್ಯ ಎಂ ಟಿ ನಾಯ್ಕ, ಅಶೋಕ್ ಗೌಡ, ಆರ್ ಎಚ್ ನಾಯ್ಕ, ಗಣಪತಿ ಶೆಟ್ಟಿ, ಗಣೇಶ್ ಶೆಟ್ಟಿ, ಗಾಯತ್ರಿ ಗೌಡ, ಸುರೇಖಾ ವಾರೇಕರ್, ಹನುಮಂತ ಪಟಗಾರ, ಮುಜಾಫರ್ ಸಾಬ್, ಗಜು ನಾಯ್ಕ, ನಿತ್ಯಾನಂದ ನಾಯ್ಕ, ಕೃಷ್ಣಾನಂದ ವೆರ್ಣೇಕರ್, ಜಗದೀಶ್ ಹರಿಕಂತ್ರ, ಮೈಕೆಲ್ ಫರ್ನಾಂಡಿಸ್, ಹುಸೇನ್ ಸಾಬ್, ಗಜಾನನ ನಾಯ್ಕ, ಅರುಣ್ ಗೌಡ, ನಾಗರಾಜ್ ನಾಯ್ಕ, ಮನೋಜ ನಾಯಕ, ಬೀರಮ್ಮ ಗೌಡ, ಗೀತಾ ಭಂಡಾರ್ಕರ್, ವಿಜಯ್ ವೆರ್ಣೇಕರ್, ನಾಗಾರ್ಜುನ ಶೆಟ್ಟಿ, ಸುನಿಲ್ ನಾಯ್ಕ ಇತರರು ಇದ್ದರು.