ಶಿರಸಿ: ತಾಲೂಕಿನ ಕಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಲೇಡಿ ಸ್ಕೌಟ್ ಮಾಸ್ಟರ್ ಶ್ರೀಮತಿ ಮಮತಾ ಆರ್.ಒಂದು ದಿನದ ಸ್ಕೌಟಿಂಗ್ ಚಟುವಟಿಕೆಗಳನ್ನು ಸಂಘಟಿಸಿದ್ದರು.
ಹೈಕಿಂಗ್,ಫನ್ನೀ ಗೇಮ್ಸ್, ಅಡ್ವೆಂಚರ್ ಗೇಮ್ಸ್, ಮೊದಲಾದ ಚಟುವಟಿಕೆಗಳಲ್ಲಿ 80 ಕ್ಕೂ ಅಧಿಕ ಸ್ಕೌಟ್ಸ್ ಮತ್ತು ಗೈಡ್ಸ್ ಗಳು ಭಾಗವಹಿಸಿ ಮಿನಿ ಜಾಂಬೂರಿ ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 9.00 ಘಂಟೆಯಿಂದ ರಾತ್ರಿ 8.00 ರವರೆಗೆ ಎಲ್ಲ ಚಟುವಟಿಕೆಗಳು ತುಂಬಾ ಅಚ್ಚುಕಟ್ಟಾಗಿ ನಡೆದವು. MDRS ಕಲ್ಲಿ ಪ್ರಾಂಶುಪಾಲ ರಾಘವೇಂದ್ರ ನಾಯ್ಕ ಅವರು ಹೈಕಿಂಗ್ ಗೆ ಚಾಲನೆ ನೀಡುವುದರ ಮೂಲಕ ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮ ವೀಕ್ಷಿಸಿ ರಾತ್ರಿ ಶಿಬಿರಾಗ್ನಿ ಕಾರ್ಯಕ್ರಮವನ್ನು ಉದ್ಘಾಟಿಸಿ ಸ್ಕೌಟ್ ಚಟುವಟಿಕೆಗಳನ್ನು ಶ್ಲಾಘಿಸಿದರು. ಸ್ಕೌಟ್ ಸಂಸ್ಥೆಯ ತಾಲೂಕಾ ಕಾರ್ಯದರ್ಶಿ ಎನ್.ಎಸ್.ಭಾಗ್ವತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜ್ಞಾನೇಶ್ ವೆರ್ಣೇಕರ್, ಸ್ಕೌಟ್ ಮಾಸ್ಟರ್ ಹೇಮಂತ್, ರೋವರ್ ದರ್ಶನ, ರೇಂಜರ್ ಐಶ್ವರ್ಯ ಹಾಗೂ ಸಂಗೀತ ಉಪಸ್ಥಿತರಿದ್ದರು.