Slide
Slide
Slide
previous arrow
next arrow

ಸಹಕಾರಿ ಜನಾಂದೋಲನಕ್ಕೆ ಕಾರಣೀಭೂತರಾಗಲು ಸ್ಪೀಕರ್ ಕಾಗೇರಿ ಕರೆ

300x250 AD

ಅಂಕೋಲಾ: ಸಮಾಜದಲ್ಲಿ ಕುಟುಂಬದಲ್ಲಿ ಮತ್ತು ಸಂಘಟನೆಯಲ್ಲಿ ಭಾವನಾತ್ಮಕ ಸಂಬOಧಗಳು ಕಳೆಗುಂದುತ್ತಿದೆ ಕೇವಲ ವ್ಯಾಪಾರೀಕರಣದಿಂದಾಗಿ ಜಗತ್ತಿನಲ್ಲಿ ಎಲ್ಲವೂ ನಡೆಯುವುದಿಲ್ಲ ಯುವಕರನ್ನ ಸಹಕಾರಿ ಕ್ಷೇತ್ರದತ್ತ ಎಳೆದು ತಂದು ಭವಿಷ್ಯದ ಸವಾಲುಗಳನ್ನು ಮೆಟ್ಟಿ ನಿಂತು ಸಹಕಾರಿ ಜನಾಂದೋಲನ ಮಾಡಲು ನಾವೆಲ್ಲ ಕಾರಣಿಭೂತರಾಗಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ತಾಲೂಕಿನ ಜೈಹಿಂದ್ ಪ್ರೌಢಶಾಲಾ ಆವಾರದಲ್ಲಿ ನಡೆದ ಗ್ರಾಹಕರ ಸಹಕಾರಿ ಸಂಘದ ಅಮೃತ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಗ್ರಾಹಕ ಸಹಕಾರಿಯಲ್ಲಿ ಇಂದು ಹಳೆ ಪೀಳಿಗೆಗಳೆ ಕಾಣುತ್ತಿವೆ. ಆದರೆ ಯುವ ಪೀಳಿಗೆಯೂ ಮುಂದೆ ಕರೆತಂದು ಸಹಕಾರಿ ಕ್ಷೇತ್ರದಲ್ಲಿ ಭಾಗಿಯಾಗುವಂತೆ ಮಾಡುವುದರ ಮೂಲಕ ಯುವಕರು ನಮ್ಮೂರಲ್ಲೇ ಸದೃಢವಾಗುವಂತೆ ಮಾಡಬಹುದಾಗಿದೆ. ಸಹಕಾರಿ ಕ್ಷೇತ್ರವು ಇಂದಿನ ದಿನದ ಅಗತ್ಯತೆಗೆ ತಕ್ಕಂತೆ ಬೆಳೆಯಬೇಕು. ಮುಂದಿನ ಭವಿಷ್ಯದ ದಿನದ ಗ್ರಾಹಕರಿಗೆ ಬೇಕಾಗುವ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಂತಹ ಕೆಲಸ ಮಾಡಬೇಕಿದೆ. ಇತ್ತೀಚಿನ ದಿನದಲ್ಲಿ ಅನೇಕ ಗ್ರಾಹಕ ಸಹಕಾರಿ ಸಂಘಗಳು ಬೀಗ ಹಾಕಿವೆ. ಆದರೆ ಅಂಕೋಲದ ಗ್ರಾಹಕ ಸಹಕಾರಿ ಸಂಘ 75ರ ಅಮೃತ ಮಹೋತ್ಸವದ ಆಚರಣೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ಈ ಸಹಕಾರಿ ಸಂಘ ಸ್ವಾತಂತ್ರ‍್ಯ ಪೂರ್ವದಲ್ಲಿಯೇ ಜನರಿಗೆ ಆಹಾರದ ತುಟಾಗ್ರತೆ ಸಮಯದಲ್ಲಿ ಆಹಾರವನ್ನ ಜನರಿಗೆ ತಲುಪಿಸುವ ಉದ್ದೇಶದಿಂದ ಹುಟ್ಟಿಕೊಂಡಿದ್ದು ಶ್ಲಾಘನೀಯವಾದದ್ದು. ಈ ಸಹಕಾರಿ ಸಂಘ ನೂರಕ್ಕೆ ನೂರು ನಿಸ್ವಾರ್ಥವಾಗಿ ತ್ಯಾಗದಿಂದ ಸಹಕಾರಿ ಕ್ಷೇತ್ರದ ತತ್ವವನ್ನ ಪಾಲಿಸಿಕೊಂಡು ಬಂದಿರುವ ಕಾರಣ ಇಂದು 75ರ ಸಂತಸದಲ್ಲಿ ತೊಡಗಿಕೊಂಡಿದೆ. ಮುಂದಿನ ದಿನದಲ್ಲಿ ಈ ಸಹಕಾರಿ ಸಂಘ ಶತಮಾನೋತ್ಸವ ಆಚರಣೆ ಮಾಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ಪುಂಡ್ಲೀಕ ಕಾಮತ, ರಾಮಚಂದ್ರ ಶೆಟ್ಟಿ, ರುಕ್ಮಾಂಗದ ನಾಯ್ಕ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ಅಧ್ಯಕ್ಷ ದತ್ತಾರಾಮ ಪೈ ಸ್ವಾಗತಿಸಿದರು. ಸಂಘದ ಕಾನೂನು ಸಲಹೆಗಾರ ಎಂ.ಪಿ.ಭಟ್ ಪ್ರಾಸ್ತಾವಿಕ ಮಾತನಾಡಿದರು. ಕೃಷ್ಣಕುಮಾರ ಮಹಾಲೆ ವಂದಿಸಿದರು. ವಸಂತ ನಾಯ್ಕ ಸನ್ಮಾನಿತರ ಯಾದಿ ವಾಚಿಸಿದರು. ಮಂಜುನಾಥ ಇಟಗಿ, ಪುಷ್ಪಾ ನಾಯ್ಕ ನಿರೂಪಿಸಿದರು. ಅಮೃತ ಮಹೋತ್ಸವ ಸ್ಮರಣ ಸಂಚಿಕೆಯನ್ನು ಪುರಸಭಾ ಅಧ್ಯಕ್ಷ ಶಾಂತಲಾ ನಾಡಕರ್ಣಿ ಬಿಡುಗಡೆ ಮಾಡಿದರು. ವೇದಿಕೆಯಲ್ಲಿ ಜಿ.ಪಂ ಮಾಜಿ ಅಧ್ಯಕ್ಷ ರಮಾನಂದ ನಾಯಕ, ಜೈಹಿಂದ್ ಎಜ್ಯುಕೇಶನ್ ಅಧ್ಯಕ್ಷ ಪದ್ಮನಾಬ ಪ್ರಭು ಸೇರಿದಂತೆ ಗ್ರಾಹಕ ಸಂಘದ ನಿರ್ದೇಶಕರು ಇದ್ದರು.

300x250 AD
Share This
300x250 AD
300x250 AD
300x250 AD
Back to top