• Slide
    Slide
    Slide
    previous arrow
    next arrow
  • ಕಾರವಾರ ರೋಟರಿ ಸಂಸ್ಥೆಯ ಸದಸ್ಯರು ಅಂತರ್‌ಜಿಲ್ಲಾ ರೋಟರಿ ಸಂಸ್ಥೆಗೆ ಭೇಟಿ

    300x250 AD

    ಕಾರವಾರ: ರೋಟರಿ ಕ್ಲಬ್ ಆಫ್ ಕಾರವಾರ ಸಂಸ್ಥೆಯ ಸದಸ್ಯರು ಬೇರೆ ರೋಟರಿ ಜಿಲ್ಲೆ 3182 ಗೆ ಒಳಪಡುವ ಶೃಂಗೇರಿ ರೋಟರಿ ಸಂಸ್ಥೆಗೆ ಭೇಟಿ ನೀಡಿದರು.
    ಶೃಂಗೇರಿ ರೋಟರಿ ಸಂಸ್ಥೆಯ ಅಧ್ಯಕ್ಷೆ ಅನಸುಯಾ ಕೆ. ಎಲ್ಲರನ್ನು ಸ್ವಾಗತಿಸಿದರು. ಅಲ್ಲಿಯ ಸದಸ್ಯ ನಾಗೇಶ ಕಾಮತ ರವರು ಶೃಂಗೇರಿ ರೋಟರಿ ಸಂಸ್ಥೆಯ ಕಾರ್ಯ ವಿವರಣೆ ನೀಡಿದರು. ಕಾರವಾರ ರೋಟರಿ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಜಿ.ಪ್ರಭು ಕಾರವಾರ ರೋಟರಿ ಸಂಸ್ಥೆಯ ಕಾರ್ಯವಿವರಣೆ ನೀಡುತ್ತ ರೋಟರಿ ಸಂಸ್ಥೆಯ ಎಲ್ಲಾ ಸದಸ್ಯರನ್ನು ಪರಿಚಯಿಸಿಕೊಟ್ಟರು. ಕಾರ್ಯದರ್ಶಿ ಗುರುದತ್ತ ಬಂಟ ಕಾರವಾರ ರೋಟರಿ ಕುರಿತು ಮಾತನಾಡಿದರು. ಎರಡೂ ಸಂಸ್ಥೆಯ ಅಧ್ಯಕ್ಷರುಗಳು ತಮ್ಮ ತಮ್ಮ ಸಂಸ್ಥೆಯ ದ್ವಜವನ್ನು ವಿನಿಮಯ ಮಾಡಿಕೊಂಡರು.
    ಈ ಸಂಸರ್ಭದಲ್ಲಿ ಕಾರವಾರ ರೋಟರಿ ಸಂಸ್ಥೆಯ ಹಿರೀಯ ಸದಸ್ಯ ಕೆ.ಡಿ. ಪೆಡ್ನೇಕರ, ಮನೋಹರ ಕಾಂಬ್ಳಿ, ಪ್ರಸನ್ನ ತೆಂಡೂಲ್ಕರ, ಶೈಲೇಶ ಹಳದೀಪುರ, ಸುರೇಶ ನಾಯ್ಕ, ಡಾ. ಸಮೀರಕುಮಾರ ನಾಯಕ, ಮುರಲಿ ಗೊವೇಕರ, ಕೃಷ್ಣಾ ಕೇಳಸ್ಕರ, ಗೋವಿಂದಪ್ಪ, ವಿನೋದ ಕೊಠಾರಕರ, ಗಣಪತಿ ಬಾಡಕರ, ಸುಶ್ಮಾ ಬಾಡಕರ ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top