ಅಂಕೋಲಾ: ಶ್ರೀಮಾರಿಕಾಂಬಾ ಯಕ್ಷಗಾನ ಮತ್ತು ಸಾಂಸ್ಕೃತಿಕ ಕ್ರೀಡಾ ಸಂಘ ಬೊಳೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ವೀರಮಣಿ ಕಾಳಗ ಹಾಗೂ ಮೀನಾಕ್ಷಿ ಕಲ್ಯಾಣ ಪೌರಾಣಿಕ ಯಕ್ಷಗಾನವು ಹಾರವಾಡದ ತರಂಗಮೇಟದಲ್ಲಿ ನಡೆಯಿತು.
ತಾಲೂಕಾ ರಂಗಭೂಮಿ ಕಲಾವಿದರ ವೇದಿಕೆಯ ಅಧ್ಯಕ್ಷ ನಾಗರಾಜ್ ಜಾಂಬಳೇಕರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಕ್ಷಗಾನವು ನಮ್ಮ ಸಂಸ್ಕ್ರತಿಯ ಪ್ರತಿಬಿಂಬವಾಗಿದೆ. ಅದನ್ನು ಮುಂದುವರೆಸಿಕೊoಡು ಹೋಗುವ ಮೂಲಕ ನಮ್ಮ ಪರಂಪರೆಗೆ ಕೊಡುಗೆ ನೀಡಬೇಕಾಗಿದೆ ಎಂದರು. ಹಾರವಾಡ ಗ್ರಾಪಂ ಅಧ್ಯಕ್ಷ ಮಂಜುನಾಥ ಟಾಕೇಕರ ಅಧ್ಯಕ್ಷತೆವಹಿಸಿ ಮಾತನಾಡಿದರು.
ಊರ ಮುಖಂಡರಾದ ಆನಂದು ಗೌಡ, ಗುರುಸ್ವಾಮಿ ಶಿವಾನಂದ ಗೌಡ, ಅನಿಲ ಚಂಡೇಕರ ಹಾರವಾಡ, ಶ್ರೀ ಮಾರಿಕಾಂಬಾ ಯಕ್ಷಗಾನ ಸಾಂಸ್ಕೃತಿಕ ಕ್ರೀಡಾ ಸಂಘದ ಉಪಾಧ್ಯಕ್ಷ ಹರೀಶ ಆಗೇರ, ಯಕ್ಷಗಾನ ಕಲಾವಿದರಾದ ವಿರೇಂದ್ರ ವಂದಿಗೆ, ವಿಘ್ನೇಶ್ವರ ಆರ್.ಆಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಕ್ಷಗಾನದ ಭಾಗವತಿಕೆಯನ್ನು ಆನಂದು ಆಗೇರ ಬೊಳೆ ನಿರ್ವಹಿಸಿದರು.